‘ಆ ನಗರಕ್ಕೆ ಸಲಿಂಗಕಾಮಿ ಎಂಬ ಅರ್ಥವಿದೆ’; ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ

‘ಆ ನಗರಕ್ಕೆ ಸಲಿಂಗಕಾಮಿ ಎಂಬ ಅರ್ಥವಿದೆ’; ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ
ವಿವೇಕ್ ಅಗ್ನಿಹೋತ್ರಿ

ಮೂರು ವಾರಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಅವರು ನೀಡಿದ ಹೇಳಿಕೆ ಇದಾಗಿದ್ದು, ಈಗ ಆ ಕ್ಲಿಪ್​ ವೈರಲ್​ ಆಗಿದೆ ಎನ್ನಲಾಗುತ್ತಿದೆ. ಈ ಹೇಳಿಕೆಗೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ.

TV9kannada Web Team

| Edited By: Rajesh Duggumane

Mar 26, 2022 | 1:37 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ (The Kashmir Files). ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಜಾದೂ ಮಾಡಿದೆ. ಯಾರೂ ಊಹಿಸದಷ್ಟು ಗಳಿಕೆ ಮಾಡುತ್ತಿದೆ ಈ ಸಿನಿಮಾ. ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್​’ ಸಿದ್ಧಗೊಂಡಿದೆ. ಕೆಲವರು ವಿವೇಕ್​ ಅವರನ್ನು ತೆಗಳುತ್ತಿದ್ದಾರೆ. ಈ ಮಧ್ಯೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಭೋಪಾಲ್​ (Bhopal) ನಗರದ ಬಗ್ಗೆ ಕೀಳಾಗಿ ಮಾತನಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್​ ನಾಯಕರು ಆಗ್ರಹಿಸಿದ್ದಾರೆ.

ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಶುಕ್ರವಾರ ಭೋಪಾಲ್‌ಗೆ ಭೇಟಿ ನೀಡಿದ್ದಾರೆ ವಿವೇಕ್​ ಅಗ್ನಿಹೋತ್ರಿ. ಅದಕ್ಕೂ ಮೊದಲು ವಿಡಿಯೋ ಒಂದು ವೈರಲ್​ ಆಗಿದೆ. ಮೂರು ವಾರಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಅವರು ನೀಡಿದ ಹೇಳಿಕೆ ಇದಾಗಿದ್ದು, ಈಗ ಆ ಕ್ಲಿಪ್​ ವೈರಲ್​ ಆಗಿದೆ ಎನ್ನಲಾಗುತ್ತಿದೆ. ಈ ಹೇಳಿಕೆಗೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ.

‘ನಾನು ಭೋಪಾಲ್‌ನಲ್ಲಿ ಬೆಳೆದಿದ್ದೇನೆ. ಆದರೆ ನಾನು ಭೋಪಾಲಿ ಅಲ್ಲ. ಏಕೆಂದರೆ ಭೋಪಾಲಿ ಎಂಬ ಶಬ್ದ ಭಿನ್ನ ಅರ್ಥವನ್ನು ಹೊಂದಿದೆ. ಯಾರಾದರೂ ಬಂದು ನಾನು ಭೋಪಾಲಿ ಎಂದು ಹೇಳಿದರೆ, ಆ ವ್ಯಕ್ತಿ ಸಲಿಂಗಕಾಮಿ ಎಂದರ್ಥ. ಭೋಪಾಲ್​ನಲ್ಲಿರುವ ಯಾವುದೇ ವ್ಯಕ್ತಿಯ ಬಳಿ ಬೇಕಾದರೂ ನೀವು ಇದನ್ನು ಕೇಳಬಹುದು’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ. ಸದ್ಯ, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ಇದನ್ನು ಖಂಡಿಸಿದ್ದಾರೆ. ‘ವಿವೇಕ್ ಅಗ್ನಿಹೋತ್ರಿ ಅವರೇ ಇದು ನಿಮ್ಮ ವೈಯಕ್ತಿಕ ಅನುಭವವಾಗಿರಬಹುದು. ಭೋಪಾಲ್ ನಿವಾಸಿಗಳು ಹಾಗಿಲ್ಲ. ನಾನು 1977 ರಿಂದ ಭೋಪಾಲ್ ಮತ್ತು ಭೋಪಾಲಿಗಳೊಂದಿಗೆ ಕನೆಕ್ಟ್​ ಆಗಿದ್ದೇನೆ. ಆದರೆ, ನನಗೆ ಆ ರೀತಿಯ ಅನುಭವ ಆಗಿಲ್ಲ. ಈ ರೀತಿ ಅನುಭವ ಆಗಲು ನಿಮ್ಮ ಜತೆ ಯಾರಿದ್ದರು ಎಂಬುದು ಕೂಡ ಮುಖ್ಯವಾಗುತ್ತದೆ’ ಎಂದಿದ್ದಾರೆ ಅವರು.

ಮಾಜಿ ಸಚಿವ ಪಿಸಿ ಶರ್ಮಾ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಭೋಪಾಲ್ ಜನರ ಮೇಲೆ ಸಲಿಂಗಕಾಮಿ ಎಂಬ ಪದಗಳನ್ನು ಬಳಸಿ ವಿವೇಕ್​ ಅಪರಾಧ ಎಸಗಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ತನ್ನದೇ ರಕ್ತ ಸುರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಪೋಸ್ಟರ್​ ರಚಿಸಿದ ಮಹಿಳೆ; ‘ಇಂಥದ್ದೆಲ್ಲ ಮಾಡ್ಬೇಡಿ’ ಎಂದ ನಿರ್ದೇಶಕ

‘ದಿ ಕಾಶ್ಮೀರ್​ ಫೈಲ್ಸ್​’ ಹೆಸರು ಹೇಳದೇ ಒಂದೇ ಒಂದು ಟ್ವೀಟ್​ ಮಾಡಿ ಟ್ರೋಲ್​ ಆದ ನಟ ಆದಿಲ್​ ಹುಸೇನ್​

Follow us on

Related Stories

Most Read Stories

Click on your DTH Provider to Add TV9 Kannada