ಆಗಸದಲ್ಲಿ ‘ವಾರ್ 2’; ಗಾಬರಿಯಾದ ಮೆಲ್ಬರ್ನ್ ಜನತೆ: ವಿಡಿಯೋ ವೈರಲ್

‘ವಾರ್ 2’ ಸಿನಿಮಾದ ಪ್ರಚಾರಕ್ಕಾಗಿ ಅಭಿಮಾನಿಗಳು ಮಾಡಿದ ಕೆಲಸದಿಂದ ಮೆಲ್ಬರ್ನ್ ಜನತೆಗೆ ಗಾಬರಿ ಆಗಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಲ್ಲಿನ ಜನರು ಪೋಸ್ಟ್ ಮಾಡಿದ್ದಾರೆ. ವಿಡಿಯೋಗಳು ವೈರಲ್ ಆಗಿವೆ. ಆಕಾಶದಲ್ಲಿ ಏಕಾಏಕಿ ವಾರ್ ಎಂಬ ಪದ ಕಾಣಿಸಿದರೆ ಪ್ರಜೆಗಳಿಗೆ ಆತಂಕ ಆಗುವುದು ಸಹಜ.

ಆಗಸದಲ್ಲಿ ‘ವಾರ್ 2’; ಗಾಬರಿಯಾದ ಮೆಲ್ಬರ್ನ್ ಜನತೆ: ವಿಡಿಯೋ ವೈರಲ್
War 2 Movie Promotion

Updated on: Jul 24, 2025 | 8:34 PM

2025ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ವಾರ್ 2’ (War 2) ಕೂಡ ಇದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ (Jr NTR) ಅವರು ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಕಂಡು ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ಆಗಸ್ಟ್ 14ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕಾಗಿ ಈಗಲೇ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ‘ವಾರ್ 2’ ಪ್ರಚಾರ (War 2 Movie Promotion) ಆರಂಭ ಆಗಿದೆ. ನೆಲದ ಮೇಲೆ ಮಾತ್ರವಲ್ಲ, ಆಗಸದಲ್ಲೂ ‘ವಾರ್ 2’ ರಾರಾಜಿಸುತ್ತಿದೆ.

ಹೌದು, ವಿಮಾನ ಬಳಸಿ ಆಕಾಶದಲ್ಲಿ ‘ವಾರ್ 2’ ಎಂದು ಬರೆಯಲಾಗಿದೆ. ಅಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಜನತೆಗೆ ಈ ರೀತಿ ಪ್ರಮೋಷನ್ ಬಗ್ಗೆ ಮುಂಚಿತವಾಗಿ ಏನನ್ನೂ ಹೇಳಿರಲಿಲ್ಲ. ಅಚ್ಚರಿ ನೀಡಲು ಆಗಸದಲ್ಲಿ ‘ವಾರ್ 2’ ಎಂದು ಬರೆಯಲಾಯಿತು. ನಾಗರಿಕರೆಲ್ಲ ಮನೆಯಿಂದ ಹೊರಗೆ ಬಂದು ಅಚ್ಚರಿಯಿಂದ ನೋಡಲು ಆರಂಭಿಸಿದರು.

ಇತ್ತೇಚೆಗೆ ಯುದ್ಧದ ಕರಾಳತೆ ಜಗತ್ತಿನೆಲ್ಲಡೆ ಆವರಿಸಿತ್ತು. ಗಾಜಾ, ಇರಾನ್, ಇಸ್ರೇಲ್, ಉಕ್ರೇನ್ ಮುಂತಾದೆಡೆ ಯುದ್ಧಕ್ಕೆ ಜನಜೀವನ ನಲುಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕೂಡ ಯುದ್ಧದ ಭೀತಿ ನಿರ್ಮಾಣ ಆಗಿತ್ತು. ಹೀಗಿರುವಾಗ ಯಾವುದೇ ಸೂಚನೆ ನೀಡದೇ ಆಕಾಶದಲ್ಲಿ ‘ವಾರ್ 2’ ಎಂದು ಘೋಷಿಸಿದರೆ ಜನರಿಗೆ ಆತಂಕ ಆಗುವುದು ಸಹಜ.

ಇದನ್ನೂ ಓದಿ
ಜೂ ಎನ್​ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?
ಜೂ.ಎನ್​ಟಿಆರ್ ಎಷ್ಟು ಶ್ರೀಮಂತ ಅನ್ನೋದು ಗೊತ್ತಾ? ಇಲ್ಲಿದೆ ಆಸ್ತಿ ವಿವರ
ಸೆಕ್ಯೂರಿಟಿ ಒದ್ದು ಓಡಿಸ್ತಾರೆ: ಫ್ಯಾನ್ಸ್ ಮೇಲೆ ಜೂನಿಯರ್ ಎನ್​ಟಿಆರ್ ಗರಂ
ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?

ವೈರಲ್ ವಿಡಿಯೋ:

ಮೆಲ್ಬರ್ನ್​ನಲ್ಲಿ ಇರುವ ಬಹುತೇಕರಿಗೆ ‘ವಾರ್ 2’ ಸಿನಿಮಾದ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ‘ವಾರ್’ ಎಂಬ ಪದವನ್ನು ಆಕಾಶದಲ್ಲಿ ನೋಡಿದ ಕೂಡಲೇ ಅನೇಕರು ಗಾಬರಿ ಮಾಡಿಕೊಂಡರು. ನಂತರ ಇಂಟರ್​ನೆಟ್​ನಲ್ಲಿ ಹುಡುಕಿದಾಗ ಇದು ಬಾಲಿವುಡ್ ಸಿನಿಮಾದ ಪ್ರಮೋಷನ್ ಎಂಬುದು ಗೊತ್ತಾಯಿತು. ಆ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ವಾರ್ 2’ ಚಿತ್ರದ ಟ್ರೇಲರ್ ಬಗ್ಗೆ ದೊಡ್ಡ ಮಾಹಿತಿ ನೀಡಿದ ತಂಡ; ತಪ್ಪು ಈಗಲಾದರೂ ಸರಿ ಆಗುತ್ತಾ?

ಅಯಾನ್ ಮುಖರ್ಜಿ ಅವರು ‘ವಾರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ತಯಾರಾಗುತ್ತಿದೆ. ಇದು ಜೂನಿಯರ್ ಎನ್​ಟಿಆರ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಜಾಸ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.