‘ಕಂಗನಾ ಅಂದ್ರೆ ಯಾರು? ಸುಂದರಿಯೇ?’: ಖ್ಯಾತ ನಟ ಅನ್ನು ಕಪೂರ್ ಪ್ರಶ್ನೆ

ಬಾಲಿವುಡ್​ನ ಖ್ಯಾತ ನಟ ಅನ್ನು ಕಪೂರ್​ ಅವರು ವಿವಾದಿತ ‘ಹಮಾರೆ ಬಾರಾಹ್​’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರಿಗೆ ಕಂಗನಾ ರಣಾವತ್​ ಬಗ್ಗೆ ಪ್ರಶ್ನೆ ಎದುರಾಗಿದೆ. ಇತ್ತೀಚೆಗೆ ಕಂಗನಾಗೆ ಭದ್ರತಾ ಸಿಬ್ಬಂದಿಯು ಕಪಾಳಮೋಕ್ಷ ಮಾಡಿದ ಘಟನೆಗೆ ಪ್ರತಿಕ್ರಿಯಿಸುವಂತೆ ಅನ್ನು ಕಪೂರ್​ ಅವರನ್ನು ಕೇಳಲಾಯಿತು. ಆ ಸಂದರ್ಭದಲ್ಲಿ ‘ಕಂಗನಾ ಯಾರು’ ಎಂದು ಅನ್ನು ಕಪೂರ್​ ಕೇಳಿದ್ದಾರೆ.

‘ಕಂಗನಾ ಅಂದ್ರೆ ಯಾರು? ಸುಂದರಿಯೇ?’: ಖ್ಯಾತ ನಟ ಅನ್ನು ಕಪೂರ್ ಪ್ರಶ್ನೆ
ಕಂಗನಾ ರಣಾವತ್​, ಅನ್ನು ಕಪೂರ್
Follow us
ಮದನ್​ ಕುಮಾರ್​
|

Updated on: Jun 21, 2024 | 9:32 PM

ಬಾಲಿವುಡ್​ ನಟಿ ಕಂಗನಾ ರಣಾವತ್​ (Kangana Ranaut) ಅಂದರೆ ಯಾರು ಅಂತ ಬಹುತೇಕ ಎಲ್ಲರಿಗೂ ಗೊತ್ತು. ಮೊದಲು ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿದ್ದ ಕಂಗನಾ ಈಗ ರಾಜಕೀಯಕ್ಕೂ ಕಾಲಿಟ್ಟಿದ್ದಾರೆ. ಈಗಾಗಲೇ ಅವರು ಅನೇಕ ವಿವಾದಗಳನ್ನು ಮಾಡಿಕೊಂಡು ಸುದ್ದಿ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇದೆ. ಆದರೆ ‘ಕಂಗನಾ ಎಂದರೆ ಯಾರು’ ಎಂದು ಖ್ಯಾತ ನಟ ಅನ್ನು ಕಪೂರ್​ (Annu Kapoor) ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಕಂಗನಾಗೆ ವಿಮಾನನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಲಾಗಿತ್ತು. ಆ ಘಟನೆಗೆ ಪ್ರತಿಕ್ರಿಯಿಸುವಾಗ ಅನ್ನು ಕಪೂರ್ ಈ ರೀತಿ ಪ್ರಶ್ನಿಸಿದ್ದಾರೆ.

ಅನ್ನು ಕಪೂರ್​ ಅವರು ‘ಹಮಾರೆ ಬಾರಾಹ್​’ ಸಿನಿಮಾದ ಪ್ರಚಾರಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರಿಗೆ ಕಂಗನಾ ರಣಾವತ್​ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದು ಅವರಿಗೆ ಸರಿ ಎನಿಸಿಲ್ಲ. ತಮ್ಮ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಬೇರೆ ವಿಷಯದ ಬಗ್ಗೆ ಮಾತನಾಡುವುದನ್ನು ತಪ್ಪಿಸಲು ಅವರು ಈ ರೀತಿ ಪ್ರಶ್ನೆ ಹಾಕಿದ್ದಾರೆ.

‘ಈ ಕಂಗನಾ ಎಂದರೆ ಯಾರು? ನೀವೆಲ್ಲ ಕೇಳುತ್ತಿದ್ದೀರಿ ಎಂದರೆ ಅವರು ಬಹಳ ದೊಡ್ಡ ಹೀರೋಯಿನ್​ ಇರಬಹುದು. ಅವರು ಸುಂದರವಾಗಿದ್ದಾರಾ?’ ಎಂದು ಅನ್ನು ಕಪೂರ್​ ಕೇಳಿದ್ದಾರೆ. ‘ಈಗ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕೂಡ ಹೌದು’ ಎಂದು ಮಾಧ್ಯಮದವರೊಬ್ಬರು ಉತ್ತರಿಸಿದರು. ಅದಕ್ಕೂ ಅನ್ನು ಕಪೂರ್​ ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್​ 1; ಕಂಗನಾ, ಆಲಿಯಾಗೆ ಎಷ್ಟನೇ ಸ್ಥಾನ?

‘ಓಹೋ.. ಈಗ ಎಂಪಿ ಕೂಡ ಆಗಬಿಟ್ರಾ? ಹಾಗಾದರೆ ಈಗ ಅವರು ತುಂಬ ಶಕ್ತಿಶಾಲಿ ಆಗಿದ್ದಾರೆ’ ಎಂದಿದ್ದಾರೆ ಅನ್ನು ಕಪೂರ್​. ಕೆಲವು ದಿನಗಳ ಹಿಂದೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯೊಬ್ಬರು ಕಂಗನಾರ ಕೆನ್ನೆಗೆ ಬಾರಿಸಿದ್ದರು. ‘ಆ ಸಿಬ್ಬಂದಿ ಮೇಲೆ ಕಂಗನಾ ಕಾನೂನಿನ ಕ್ರಮ ಕೈಗೊಳ್ಳಬೇಕಿತ್ತು. ಒಂದುವೇಳೆ ನಾನು ಅವರ ಸ್ಥಾನದಲ್ಲಿ ಇದ್ದಿದ್ದರೆ ಹಾಗೆಯೇ ಮಾಡುತ್ತಿದ್ದೆ’ ಎಂದಿದ್ದಾರೆ ಅನ್ನು ಕಪೂರ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ