Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಪ್ರಕರಣದಿಂದ ಈ ವ್ಯಕ್ತಿಯ ಕೆಲಸವೂ ಹೋಯ್ತು, ಮದುವೆಯೂ ಕ್ಯಾನ್ಸಲ್ ಆಯ್ತು

ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ತಪ್ಪಾಗಿ ಬಂಧನಕ್ಕೊಳಗಾದ ಆಕಾಶ್ ಕನೋಜಿಯಾ ಅವರ ಜೀವನ ಹಾಳಾಗಿದೆ. ನೌಕರಿ ಕಳೆದುಕೊಂಡು, ಮದುವೆ ರದ್ದಾಗಿದೆ ಮತ್ತು ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು ಅವರು ದೂರಿದ್ದಾರೆ. ಪೊಲೀಸರ ತಪ್ಪು ಕ್ರಮದಿಂದಾಗಿ ಅವರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಸೈಫ್ ಪ್ರಕರಣದಿಂದ ಈ ವ್ಯಕ್ತಿಯ ಕೆಲಸವೂ ಹೋಯ್ತು, ಮದುವೆಯೂ ಕ್ಯಾನ್ಸಲ್ ಆಯ್ತು
ಆಕಾಶ್-ಸೈಫ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 27, 2025 | 10:58 AM

ಸೈಫ್ ಅಲಿ ಖಾನ್ ದಾಳಿ ಪ್ರಕರಣದಲ್ಲಿ ಶಂಕಿತ ಆರೋಪಿ ಆಕಾಶ್ ಕನೋಜಿಯಾ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಬಂಧಿಸಲಾಗಿತ್ತು. ಆದರೆ ತನಿಖೆಯಲ್ಲಿ ಆಕಾಶ್ ನಿಜವಾದ ಆರೋಪಿ ಅಲ್ಲ ಎಂದು ತಿಳಿದು ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ. ಆದರೆ ಚಾಲಕ ಆಕಾಶ್ ಕನೋಜಿಯಾ ಶಂಕಿತ ಆರೋಪಿಯಾಗಿ ಬಂಧಿಸಿದ್ದ ರಿಂದ ತನ್ನ ಜೀವನ ನಾಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣದಿಂದ ನೌಕರಿ ಕೈ ತಪ್ಪಿ, ಮದುವೆ ರದ್ದಾಗಿದೆ, ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು ಆಕಾಶ್ ಅಳಲು ತೋಡಿಕೊಂಡಿದ್ದಾರೆ. ‘ಮಾಧ್ಯಮಗಳು ನನ್ನ ಫೋಟೋಗಳನ್ನು ತೋರಿಸಲು ಪ್ರಾರಂಭಿಸಿದಾಗ ಮತ್ತು ನಾನು ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಿದಾಗ, ನನ್ನ ಕುಟುಂಬವು ಆಘಾತಕ್ಕೊಳಗಾಯಿತು ಮತ್ತು ಕಣ್ಣೀರು ಹಾಕಿತು. ಮುಂಬೈ ಪೊಲೀಸರ ಒಂದು ತಪ್ಪಿನಿಂದ ನನ್ನ ಜೀವನ ನಾಶವಾಯಿತು. ಸೈಫ್ ಕಟ್ಟಡದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ಎಷ್ಟೇ ಒತ್ತಾಯಿಸಿದರೂ ಪೊಲೀಸರು ಕೇಳಲಿಲ್ಲ’ ಎಂದು ಆಕಾಶ್ ಕಿಡಿಕಾರಿದ್ದಾರೆ.

‘ಸೈಫ್ ಮೇಲಿನ ದಾಳಿಯ ನಂತರ ನನಗೆ ಪೊಲೀಸರಿಂದ ಕರೆ ಬಂತು. ನಾನು ಎಲ್ಲಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಮನೆಯಲ್ಲೇ ಇದ್ದೇನೆ ಎಂದು ಹೇಳಿದಾಗ ಕರೆ ಕಟ್ ಆಯಿತು. ಹುಡುಗಿ ನೋಡಲು ಹೋದಾಗ ನನ್ನನ್ನು ಬಂಧಿಸಿ ರಾಯಪುರಕ್ಕೆ ಕರೆದೊಯ್ಯಲಾಯಿತು. ಮುಂಬೈ ಪೊಲೀಸರ ತಂಡ ಅಲ್ಲಿಗೆ ಬಂದು ನನ್ನನ್ನೂ ಥಳಿಸಿತು. ಆದರೆ ತನಿಖೆಯಲ್ಲಿ ಸತ್ಯ ಬಹಿರಂಗವಾದಾಗ ನನ್ನನ್ನು ಬಿಡುಗಡೆ ಮಾಡಲಾಯಿತು. ಆದರೆ ಆಗಲೇ ನನ್ನ ಜೀವನ ಹಾಲಾಯಿತು’ ಎಂದಿದ್ದಾರೆ ಅವರು.

‘ಪೊಲೀಸರು ನನ್ನನ್ನು ಬಂಧಿಸಿದ ನಂತರ ನನ್ನ ಕೆಲಸದಿಂದ ವಜಾ ಮಾಡಲಾಯಿತು. ನಾನು ನನ್ನ ಬಾಸ್‌ಗೆ ಕರೆ ಮಾಡಿದಾಗ, ಅವರು ನನ್ನನ್ನು ಕೆಲಸಕ್ಕೆ ಬರಬೇಡಿ ಎಂದು ಹೇಳಿದರು. ಅವರು ನನ್ನ ಮಾತನ್ನು ಕೇಳಲೂ ನಿರಾಕರಿಸಿದರು. ಆಗ ನನ್ನ ಅಜ್ಜಿ ಮನೆಯವರು ಮದುವೆಯನ್ನೂ ಕ್ಯಾನ್ಸಲ್ ಮಾಡಿದ್ದಾರೆ ಅಂತ ಹೇಳಿದ್ರು. ಈಗ ಯಾರು ನನ್ನನ್ನು ನಿರ್ಣಯಿಸುತ್ತಾರೆ’ ಎಂದು ಆಕಾಶ್ ಕೇಳಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್

ಟೂರ್ಸ್ ಕಂಪನಿ ಒಂದರಲ್ಲಿ ಆಕಾಶ್ ಚಾಲಕರಾಗಿದ್ದಾರೆ.  ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿಯ ಶಂಕಿತ ಆರೋಪಿಯಾಗಿ ಅವರನ್ನು ಬಂಧಿಸಲಾಯಿತು. ಜನವರಿ 18 ರಂದು ರೈಲ್ವೆ ಭದ್ರತಾ ಪಡೆ ಆತನನ್ನು ವಶಕ್ಕೆ ತೆಗೆದುಕೊಂಡಿತ್ತು. ನಿಜವಾದ ಆರೋಪಿ ಸಿಕ್ಕಾಗ ಅವರನ್ನು ಬಿಡುಗಡೆ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.