ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ನಡೆದಿತ್ತು ಸಂಚು, 25 ಲಕ್ಷದ ಕಾಂಟ್ರ್ಯಾಕ್ಟ್​, ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ಸರಬರಾಜು

|

Updated on: Jul 02, 2024 | 10:50 AM

ಬಾಲಿವುಡ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ ಐವರ ವಿರುದ್ಧ ಸಲ್ಲಿಕೆಯಾಗಿರುವ ಹೊಸ ಚಾರ್ಜ್ ಶೀಟ್ ನಲ್ಲಿ ಬಾಲಿವುಡ್ ನಟನನ್ನು ಕೊಲ್ಲಲು 25 ಲಕ್ಷರೂ.ಗೆ ಕಾಂಟ್ರ್ಯಾಕ್ಟ್​ ನೀಡಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ. ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆಯಲು ಯೋಜಿಸುತ್ತಿದ್ದರು ಎಂದು ನವಿ ಮುಂಬೈ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ನಡೆದಿತ್ತು ಸಂಚು, 25 ಲಕ್ಷದ ಕಾಂಟ್ರ್ಯಾಕ್ಟ್​, ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ಸರಬರಾಜು
ಸಲ್ಮಾನ್ ಖಾನ್
Image Credit source: India Today
Follow us on

ಏಪ್ರಿಲ್ ತಿಂಗಳಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಮುಂಜಾನೆ ಗುಂಡಿನ ದಾಳಿ ನಡೆದಿತ್ತು. ನಂತರ ಈ ಪ್ರಕರಣಕ್ಕೆ ಬಿಷ್ಣೋಯ್ ಗ್ಯಾಂಗ್ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಆಘಾತಕಾರಿ ಸಂಗತಿಯೊಂದರಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸಲ್ಮಾನ್ ಹತ್ಯೆಗೆ 8 ತಿಂಗಳಿಂದ ಸಂಚು ನಡೆಯುತ್ತಿತ್ತು. ಅವರ ಪ್ರತಿ ಹೆಜ್ಜೆಯ ಮೇಲೆ ನಿಗಾ ಇಡಲಾಗಿತ್ತು.

ನಟ ಸಲ್ಮಾನ್‌ನ ಪ್ರತಿಯೊಂದು ಚಟುವಟಿಕೆಯ ಮೇಲೆ ಬಿಷ್ಣೋಯ್ ಗ್ಯಾಂಗ್ ಕಣ್ಣಿಟ್ಟಿತ್ತು. ಅವರ ಬಾಂದ್ರಾ ಮನೆ, ಪನ್ವೆಲ್ ಫಾರ್ಮ್‌ಹೌಸ್ ಮತ್ತು ಫಿಲ್ಮ್ ಸಿಟಿಗೆ ಅವರ ಚಟುವಟಿಕೆಗಳ ವಿವರಗಳನ್ನು ಸಂಗ್ರಹಿಸಿದ್ದರು.

8 ತಿಂಗಳಿಂದ ನಡೆದಿತ್ತು ಸಂಚು

ಈ ಹತ್ಯೆಗೆ ಎಕೆ-47, ಎಂ16 ಮತ್ತು ಎಕೆ-92 ಬಳಸಿ ಪಾಕಿಸ್ತಾನದಿಂದ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ತಂದಿದ್ದ. ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಶೂಟರ್‌ಗಳಿಗೆ 25 ಲಕ್ಷ ರೂಪಾಯಿಗಳ ಗುತ್ತಿಗೆ ನೀಡಲಾಗಿತ್ತು. ಆಗಸ್ಟ್ 2023 ಮತ್ತು ಏಪ್ರಿಲ್ 2024 ರ ನಡುವೆ ಚಲನಚಿತ್ರ ನಟ ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೋಯ್ ಗ್ಯಾಂಗ್ ಸಂಚು ರೂಪಿಸಿತ್ತು ಎಂದು ಪನ್ವೇಲ್ ಸಿಟಿ ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ .

ಪೊಲೀಸರು ತಮ್ಮ ಚಾರ್ಜ್ ಶೀಟ್ ನಲ್ಲಿ ಬಿಷ್ಣೋಯ್ ಗ್ಯಾಂಗ್ ನ ಹಲವು ಸದಸ್ಯರನ್ನು ಬಂಧಿಸಿದ್ದಾರೆ. ಈ ಆರೋಪಿಗಳಲ್ಲಿ ಉತ್ತರ ಪ್ರದೇಶದಿಂದ ಬಂಧಿತ ಧನಂಜಯ್ ಅಲಿಯಾಸ್ ಅಜಯ್ ಕಶ್ಯಪ್, ಗುಜರಾತ್‌ನಿಂದ ಬಂಧಿತ ಗೌರವ್ ಭಾಟಿಯಾ ಅಲಿಯಾಸ್ ನಹೈ ಅಲಿಯಾಸ್ ಸಂದೀಪ್ ಬಿಷ್ಣೋಯ್, ಸಂಭಾಜಿನಗರದಿಂದ ಬಂಧಿತ ವಾಸ್ಪಿ ಮಹಮೂದ್ ಖಾನ್ ಅಲಿಯಾಸ್ ವಾಸಿಂ ಚಿಕ್ನಾ, ಜಿಶನ್ ಜಕ್ರುಲ್ ಹಸನ್ ಅಲಿಯಾಸ್ ಜಾವೇದ್ ಖಾನ್ ಮತ್ತು ಉತ್ತರ ಪ್ರದೇಶದಿಂದ ಬಂಧಿತರಾದ ದೀಪಲ್ ಹವಾ ಸಿಂಗ್ ಗೊಗಾಲಿಯಾ ಸೇರಿದ್ದಾರೆ. ಜಾನ್ ವಾಲ್ಮೀಕಿ ಸೇರಿದ್ದಾರೆ.

ಮತ್ತಷ್ಟು ಓದಿ: ಸಲ್ಮಾನ್​ ಖಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ, ಶೂಟರ್​ಗಳಿಗೆ ಬಂದೂಕು ನೀಡಿದ್ದ ಇಬ್ಬರ ಬಂಧನ

ಕಳೆದ ತಿಂಗಳು ಪನ್ವೇಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್ ಪ್ರಕಾರ, ಆರೋಪಿಗಳು ವಾಟ್ಸಾಪ್ ಗ್ರೂಪ್ ರಚಿಸಿದ್ದರು ಮತ್ತು ಅದರಲ್ಲಿ ಸಲ್ಮಾನ್ ಹತ್ಯೆಗೆ ಹೈಟೆಕ್ ಶಸ್ತ್ರಾಸ್ತ್ರಗಳನ್ನು ಬಳಸಿದ ಬಗ್ಗೆ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಸಂದೇಶಗಳು ಮತ್ತು ವಾಟ್ಸಾಪ್ ಕರೆಗಳಲ್ಲಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ಹೇಳಲಾಗಿದೆ .

ಷಡ್ಯಂತ್ರದಲ್ಲಿ 60ರಿಂದ 70 ಮಂದಿ ಭಾಗಿಯಾಗಿ
ಈ ಸಂಪೂರ್ಣ ಪಿತೂರಿಯನ್ನು ಲಾರೆನ್ಸ್ ಬಿಷ್ಣೋಯ್, ಅವರ ಸಹೋದರ ಅಮೋಲ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ರೂಪಿಸಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ. ಈ ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿರುವ ಮತ್ತೊಬ್ಬ ವ್ಯಕ್ತಿಯನ್ನು ಪಾಕಿಸ್ತಾನದ ಡೋಗರ್ ಎಂದು ಗುರುತಿಸಲಾಗಿದೆ.
2022 ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಶೂಟ್ ಮಾಡಲು ಬಳಸಲಾದ ಟರ್ಕಿ ನಿರ್ಮಿತ ಜಿಗಾನಾ ಪಿಸ್ತೂಲ್‌ನಿಂದ ನಟನನ್ನು ಕೊಲ್ಲಲು ಗ್ಯಾಂಗ್ ಉದ್ದೇಶಿಸಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಸೇರಿದಂತೆ 17 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರು ಪ್ರಸ್ತುತ ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿದ್ದಾರೆ.

 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:49 am, Tue, 2 July 24