
ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಅದರಲ್ಲೂ ಆಹಾರ ಎಂದು ಬಂದಾಗ ತಮ್ಮದೇ ಆದ ಒಂದಷ್ಟು ನಿಯಮಗಳನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿ ಸೆಲೆಬ್ರಿಟಿಗಳು ಫಾಲೋ ಮಾಡುವ ಒಂದು ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಅದುವೇ ಸೆಲೆಬ್ರಿಟಿಗಳ ಕೊನೆಯ ಊಟ. ಸೆಲೆಬ್ರಿಟಿಗಳು (Celebrities) ಯಾವಾಗ ತಮ್ಮ ಕೊನೆಯ ಊಟವನ್ನು ಮಾಡುತ್ತಾರೆ ಎಂಬುದನ್ನು ನೋಡೋಣ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವಾಗಲೂ ಫಿಟ್ ಆಗಿರಲು ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಸೆಲೆಬ್ರಿಟಿಗಳು ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಊಟದ ವಿಚಾರದಲ್ಲೂ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಅನುಷ್ಕಾ, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಇದರಲ್ಲಿ ಇದ್ದಾರೆ. ಅವರು ಪಾಲಿಸುವ ಒಂದು ವಿಚಾರ ಎಂದರೆ ಸೂರ್ಯೋದಯಕ್ಕೆ ಮೊದಲು ಊಟ ಮಾಡುವುದು.
ಈ ಮೊದಲು ಅಕ್ಷಯ್ ಕುಮಾರ್ ಅವರು ತಮ್ಮ ಊಟದ ಬಗ್ಗೆ ಮಾತನಾಡಿದ್ದರು. ‘6.30ರ ಬಳಿಕ ಏನನ್ನೂ ತಿನ್ನಬೇಡಿ. ನಿಮ್ಮ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ನಿಮಗೆ ಯಾವುದೇ ವೈದ್ಯರು ಬೇಡ’ ಎಂದು ಅಕ್ಷಯ್ ಕುಮಾರ್ ಹೇಳಿದ್ದರು. ಅವರಿಂದ ಸ್ಫೂರ್ತಿ ಪಡೆದು ಅನೇಕರು ಇದನ್ನು ಮಾಡುತ್ತಿದ್ದಾರೆ.
‘ನಾನು ಬೇಗ ತಿನ್ನುತ್ತೇನೆ. 5.30-6 ಗಂಟೆಗೆ ನನ್ನ ಕೊನೆಯ ಊಟ ಮಾಡುತ್ತೇನೆ’ ಎಂದು ಹೇಳಿದ್ದರು ಅನುಷ್ಕಾ ಶರ್ಮಾ. ವೈದ್ಯರೊಬ್ಬರು ಕೂಡ ಇದೇ ಮಾತನ್ನು ಹೇಳಿಕೊಂಡಿದ್ದರು. ಇದನ್ನು ಫಾಲೋ ಮಾಡೋದಾಗಿ ಅನೇಕರು ಹೇಳಿದ್ದಾರೆ. ಅನೇಕರಿಗೆ ದೇಹದ ತೂಕ ಇಳಿಸಬೇಕು ಎಂದಿರುತ್ತದೆ. ಆದಾಗ್ಯೂ ಅವರು ರಾತ್ರಿ ಊಟವನ್ನು ಮಾಡುತ್ತಾರೆ. ಅಂಥವರು ಈ ಕ್ರಮವನ್ನು ಅನುಸರಿಸಿದರೆ ಲಾಭದಾಯಕ ಆಗಬಹುದು.
ಇದನ್ನೂ ಓದಿ: ‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರು ನಿತ್ಯ ರಾತ್ರಿ 9 ಗಂಟೆಗೆ ನಿದ್ದೆ ಮಾಡುತ್ತಾರೆ. ಅವರು ಯಾವುದೇ ಪಾರ್ಟಿಗೆ ಹೋಗೋದಿಲ್ಲ. ಬೇಗ ನಿದ್ರಿಸೋ ಅವರು ಬೆಳಿಗ್ಗೆ ಬೇಗ ಎಳುತ್ತಾರೆ ಮತ್ತು ಜಿಮ್ ಮಾಡುತ್ತಾರೆ. ಇದನ್ನು ಅವರು ಕಟ್ಟು-ನಿಟ್ಟಾಗಿ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.