ಧನುಷ್- ರಾಶಿ ಖನ್ನಾ ನಟನೆಯ ನೂತನ ಚಿತ್ರದ ಫೊಟೊಗಳು ಲೀಕ್; ಹೊಸ ಚಿತ್ರದಲ್ಲಿ ಧನುಷ್ ಲುಕ್ ಹೇಗಿದೆ?
Rashi Khanna: ಕಾಲಿವುಡ್ನ ಖ್ಯಾತ ನಟ ಧನುಷ್ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸೆಟ್ಟೇರಿದ್ದ ‘ತಿರುಚಿತ್ರಂಬಳಂ’ ಚಿತ್ರದಲ್ಲಿ ಅವರು ನಟಿ ರಾಶಿ ಖನ್ನಾ ಅವರೊಂದಿಗೆ ಬಣ್ಣ ಹಚ್ಚುತ್ತಿದ್ದಾರೆ. ಇದೀಗ ಆ ಚಿತ್ರದ ಫೊಟೊಗಳು ಅಂತರ್ಜಾಲದಲ್ಲಿ ಲೀಕ್ ಆಗಿಇದೆ.

ಕಾಲಿವುಡ್ನ ಖ್ಯಾತ ನಟ ಧನುಷ್ ನಟನೆಯ ನೂತನ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಅದರ ಚಿತ್ರೀಕರಣದ ಕೆಲವು ಫೊಟೊಗಳು ಈಗ ಲೀಕ್ ಆಗಿದ್ದು, ಧನುಷ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಮಿತ್ರನ್ ಜವಾಹರ್ ಹಾಗೂ ಧನುಷ್ ಕಾಂಬಿನೇಷನ್ನಲ್ಲಿ ಮುಡಿಬರುತ್ತಿರುವ ನಾಲ್ಕನೇ ಚಿತ್ರವಾದ, ‘ತಿರುಚಿತ್ರಂಬಳಂ’ ಚಿತ್ರದ ಫೊಟೊಗಳು ವೈರಲ್ ಆಗಿವೆ. ಈ ಚಿತ್ರದಲ್ಲಿ ಧನುಷ್ ಹಾಗೂ ರಾಶಿ ಖನ್ನಾ ಕಾಣಿಸಿಕೊಳ್ಳುತ್ತಿದ್ದು, ರೊಮ್ಯಾಂಟಿಕ್- ಕಾಮಿಡಿ ಮಾದರಿಯ ಚಿತ್ರ ಇದಾಗಿರಲಿದೆ ಎನ್ನಲಾಗಿದೆ.
ಚಿತ್ರೀಕರಣ ನಡೆಯುತ್ತಿರುವ ಕೆಫೆಯೊಂದರ ಹೊರಭಾಗದಲ್ಲಿ ನಿಂತಿರುವ ಧನುಷ್ ಹಾಗೂ ರಾಖಿ ಖನ್ನಾ ಅವರ ಚಿತ್ರಗಳು ಲೀಕ್ ಆಗಿವೆ. ರಾಶಿ ಖನ್ನಾ ಇತ್ತೀಚೆಗಷ್ಟೇ ತಾವು ‘ತಿರುಚಿತ್ರಂಬಳಂ’ ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದ ಮುಖಾಂತರ ತಿಳಿಸಿದ್ದರು. ಚಿತ್ರದಲ್ಲಿ ಧನುಷ್ ಬಿಳಿ ಶರ್ಟ್ ಹಾಗೂ ಕಪ್ಪು ಬಣ್ಣದ ಮೇಲಂಗಿಯನ್ನು ಧರಿಸಿದ್ದು, ರಾಶಿ ಪಿಂಕ್ ಬಣ್ಣದ ಉಡುಗೆಯನ್ನು ತೊಟ್ಟಿರುವುದು ಅಭಿಮಾನಿಗಳಲ್ಲಿ ಅವರ ಪಾತ್ರದ ಕುರಿತು ಕುತೂಹಲ ಹುಟ್ಟುಹಾಕಿದೆ.

ಚಿತ್ರೀಕರಣದ ಸೆಟ್ನಿಂದ ಲೀಕ್ ಆದ ಚಿತ್ರ
ಧನುಷ್ ಹಾಗೂ ಮಿತ್ರನ್ ಜವಾಹರ್ ಅವರು ಈ ಮೊದಲು ‘ಯಾರಡಿ ನೀ ಮೋಹಿನಿ’, ‘ಕುಟ್ಟಿ’, ‘ಉಥಮಪುಥಿರನ್’ ಚಿತ್ರದಲ್ಲಿ ಜೊತೆಯಾಗಿದ್ದರು. ಈ ಚಿತ್ರಗಳೆಲ್ಲವೂ ಹಿಟ್ ಆಗಿದ್ದು, ಪ್ರಸ್ತುತ ಚಿತ್ರೀಕರಣ ನಡೆಯುತ್ತಿರುವ ತಿರುಚಿತ್ರಂಬಳಂ ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆಗಳಿವೆ. ಈ ಚಿತ್ರವನ್ನು ಸನ್ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿತ್ತು.
ಈ ಚಿತ್ರದಲ್ಲಿ ನಿತ್ಯಾ ಮೆನನ್, ಪ್ರಿಯಾ ಭವಾನಿ ಶಂಕರ್, ಪ್ರಕಾಶ್ ರಾಜ್, ಭಾರತಿರಾಜ ಮೊದಲಾದವರು ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಧನುಷ್ ಆರು ವರ್ಷಗಳ ನಂತರ ಈ ಚಿತ್ರಕ್ಕೆ ಜೊತೆಯಾಗಿರುವುದು ಕೂಡಾ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಧನುಷ್ ನಟನೆಯ ಕೊನೆಯ ಚಿತ್ರ ‘ಜಗಮೇ ತಂದಿರನ್’ ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆಯಾಗಿತ್ತು. ಸದ್ಯ ಅವರ ಕೈಯಲ್ಲಿ ‘ದಿ ಗ್ರೇ ಮ್ಯಾನ್’ ಹಾಲಿವುಡ್ ಚಿತ್ರವೂ ಸೇರಿದಂತೆ ಹಲವು ಚಿತ್ರಗಳಿವೆ.
ಇದನ್ನೂ ಓದಿ:
Pawan Kalyan: ಪವನ್ ಕಲ್ಯಾಣ್ 50ನೇ ಜನ್ಮದಿನಕ್ಕೆ 100 ವಿಶೇಷ ಪ್ರದರ್ಶನ ಕಾಣಲಿದೆ ಈ ಸೂಪರ್ ಹಿಟ್ ಚಿತ್ರ!
‘ನೀಚವಾಗಿ ಬೈಯ್ದು, ರಾಜಕೀಯ ಮಾಡುವವರ ಲೆವೆಲ್ಗೆ ರಮ್ಯಾ ಇಳಿಯಲ್ಲ’: ಕವಿತಾ ಲಂಕೇಶ್
(Dhanush and Rashi Khanna starring Tiruchitrambalam movie shooting stills are leaked)




