ಕನ್ನಡದಲ್ಲಿ ನಟಿಸಿದ್ದ ಹೀರೊಯಿನ್ ಮದುವೆಯಾಗಿದ್ದ ಧನುಷ್ ಸಹೋದರ; ಅದೂ ಕೊನೆಯಾಗಿದ್ದು ವಿಚ್ಛೇದನದಲ್ಲಿ
ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರಿಗೆ ನಾಲ್ವರು ಮಕ್ಕಳು. ಆ ಪೈಕಿ ಧನುಷ್ ಹಾಗೂ ಸೆಲ್ವರಾಘವನ್ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೆಲ್ವರಾಘವನ್ ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಧನುಷ್ (Dhanush) ಹಾಗೂ ರಜನಿಕಾಂತ್ (Rajinikanth) ಮಗಳು ಐಶ್ವರ್ಯಾ (Aishwarya Rajinikanth) ಅವರ ದಾಂಪತ್ಯ ಜೀವನ ಕೊನೆಯಾಗಿದೆ. ಜನವರಿ 17ರಂದು ದಂಪತಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ 18 ವರ್ಷದ ದಾಂಪತ್ಯ ಜೀವನ ಕೊನೆಯಾಗಿದೆ. ಧನುಷ್ ಕುಟುಂಬಕ್ಕೆ ವಿಚ್ಛೇದನ ಹೊಸದಲ್ಲ. ಅವರ ಸಹೋದರ, ನಿರ್ದೇಶಕ ಸೆಲ್ವರಾಘವನ್ ಕೂಡ ಮದುವೆಯಾದ ಕೆಲವೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡಿದ್ದರು. ಧನುಷ್ ಮದುವೆ ಆಗಿ ಎರಡು ವರ್ಷದ ಬಳಿಕ ಮದುವೆ ಆಗಿದ್ದ ಸೆಲ್ವರಾಘವನ್ ದಶಕಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರು. ಕೇವಲ ನಾಲ್ಕು ವರ್ಷಕ್ಕೆ ಇವರ ದಾಂಪತ್ಯ ಕೊನೆಯಾಗಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರಿಗೆ ನಾಲ್ವರು ಮಕ್ಕಳು. ಆ ಪೈಕಿ ಧನುಷ್ ಹಾಗೂ ಸೆಲ್ವರಾಘವನ್ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೆಲ್ವರಾಘವನ್ ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಧನುಷ್ ಮದುವೆ ಆಗಿದ್ದು 2004ರಲ್ಲಿ. ರಜನಿಕಾಂತ್ ಮಗಳು ಐಶ್ವರ್ಯಾ ಜತೆ ದಾಂಪತ್ಯ ಜೀವನಕ್ಕೆ ಧನುಷ್ ಕಾಲಿಟ್ಟರು. 18 ವರ್ಷಗಳ ಸುದೀರ್ಘ ದಾಂಪತ್ಯ ಈಗ ಕೊನೆಯಾಗಿದೆ. ಇದೇ ರೀತಿ ಸೆಲ್ವರಾಘವನ್ ದಾಂಪತ್ಯ ಕೂಡ ಮುರಿದುಬಿದ್ದಿತ್ತು.
ಸೆಲ್ವರಾಘವನ್ 2006ರಲ್ಲಿ ವಿವಾಹವಾಗಿದ್ದರು. ‘ಚಂದು’ ಸೇರಿ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಸೋನಿಯಾ ಅಗರ್ವಾಲ್ ಜತೆ ಸೆಲ್ವರಾಘವನ್ ಮದುವೆ ಆಗಿದ್ದರು. ಇವರಿಬ್ಬರ ನಡುವೆ ಪ್ರೀತಿ ಹುಟ್ಟೋಕೆ ಕಾರಣವೂ ಇತ್ತು. ಸೆಲ್ವರಾಘವನ್ ನಿರ್ದೇಶನದ ‘ಕಾಧಲ್ ಕೊಂಡೆನ್’, ‘7ಜಿ ರೈನ್‌ಬೋ ಕಾಲೋನಿ’, ‘ಪುಧುಪೆಟ್ಟೈ’ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಾಯಕಿಯಾಗಿ ಕಾಣಿಸಿಕೊಂಡವರು ಸೋನಿಯಾ ಅಗರ್ವಾಲ್. ಅವರನ್ನೇ ಪ್ರೀತಿಸಿ ಸೆಲ್ವರಾಘವನ್ 2006ರಲ್ಲಿ ಮದುವೆಯಾದರು.
ಮದುವೆಯಾಗಿ ನಾಲ್ಕೇ ವರ್ಷಗಳಲ್ಲಿ ಅಂದರೆ 2010ರಲ್ಲಿ ಸೋನಿಯಾ ಮತ್ತು ಸೆಲ್ವರಾಘವನ್ ವಿಚ್ಛೇದನ ಪಡೆದರು. ಇಬ್ಬರೂ ಪರಸ್ಪರ ಒಪ್ಪಿಗೆ ಪಡೆದು ದೂರವಾದರು. ಹೊಂದಾಣಿಕೆ ಕೊರತೆಯಿಂದ ವಿಚ್ಛೇದನ ಪಡೆದುಕೊಂಡಿದ್ದಾಗಿ ಸೋನಿಯಾ ಅವರು ಹೇಳಿಕೊಂಡಿದ್ದರು. ಈಗ ಧನುಷ್ ದಾಂಪತ್ಯ ಕೂಡ ವಿಚ್ಛೇನದಲ್ಲಿ ಕೊನೆಯಾಗಿದೆ.
ಇದನ್ನೂ ಓದಿ: ಧನುಷ್ ಮುಂದಿನ ಚಿತ್ರ ಘೋಷಣೆ; ಟಾಲಿವುಡ್ಗೆ ಕಾಲಿಡೋಕೆ ಮುಂದಾದ ತಮಿಳಿನ ಸ್ಟಾರ್ ನಟ
Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?