ಧನುಷ್​ ಮುಂದಿನ ಚಿತ್ರ ಘೋಷಣೆ; ಟಾಲಿವುಡ್​ಗೆ ಕಾಲಿಡೋಕೆ ಮುಂದಾದ ತಮಿಳಿನ ಸ್ಟಾರ್​ ನಟ

ಧನುಷ್​ ಮುಂದಿನ ಚಿತ್ರ ಘೋಷಣೆ; ಟಾಲಿವುಡ್​ಗೆ ಕಾಲಿಡೋಕೆ ಮುಂದಾದ ತಮಿಳಿನ ಸ್ಟಾರ್​ ನಟ

ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಪೋಸ್ಟರ್​ಗಳನ್ನು ಹಂಚಿಕೊಳ್ಳುವ ಮೂಲಕ ಧನುಷ್​ ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Dec 23, 2021 | 4:02 PM

ಧನುಷ್​ (Actor Dhanush) ಈಗಾಗಲೇ ತಮಿಳು, ಇಂಗ್ಲಿಷ್, ಮಲಯಾಳಂ​ ಸಿನಿಮಾಗಳಲ್ಲಿ ನಟಿಸಿ ಭೇಷ್​ ಎನಿಸಿಕೊಂಡಿದ್ದಾರೆ. ‘ಅತ್ರಂಗಿ ರೇ’ ಸಿನಿಮಾ ಮೂಲಕ ಅವರು ಮತ್ತೆ ಬಾಲಿವುಡ್​ಗೆ ಮರಳುತ್ತಿದ್ದಾರೆ. ಇದಲ್ಲದೆ, ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಈಗ ಧನುಷ್​ ತೆಲುಗು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಟೈಟಲ್​ ಇಂದು ಘೋಷಣೆ ಆಗಿದೆ. ಈ ಮೂಲಕ ಅವರ ಮುಂದಿನ ಚಿತ್ರ ಯಾವುದು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಪೋಸ್ಟರ್​ಗಳನ್ನು ಹಂಚಿಕೊಳ್ಳುವ ಮೂಲಕ ಧನುಷ್​ ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಕಡೆಯಿಂದ ಶುಭಾಶಯಗಳು ಬಂದಿವೆ. ​

ಸಿತಾರಾ ಎಂಟರ್​ಟೇನ್​ಮೆಂಟ್​​ನ​ ಸೂರ್ಯದೇವ ನಾಗ ವಂಶಿ ಹಾಗೂ ಫಾರ್ಚೂನ್ ಫೋರ್​ ಸಿನೇಮಾಸ್​​ನ ಸಾಯಿ ಸೌಜನ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ರಂಗ್​ ದೇ’ ಖ್ಯಾತಿಯ ವೆಂಕಿ ಅಟ್ಲುರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಸಾಮಾನ್ಯ ವ್ಯಕ್ತಿಯ ಮಹತ್ವಾಕಾಂಕ್ಷೆಯ ಮತ್ತು ಹೃದಯಕ್ಕೆ ಹತ್ತಿರ ಆಗುವಂತಹ ಪ್ರಯಾಣ’ ಎಂದು ನಾಗ ವಂಶಿ ಬರೆದುಕೊಂಡಿದ್ದಾರೆ.

ಜ್ಯೂನಿಯರ್​ ಕಾಲೇಜ್​ನ ಉಪನ್ಯಾಸಕರಾಗಿ ಧನುಷ್​ ಕಾಣಿಸಿಕೊಳ್ಳುತ್ತಿದ್ದಾರೆ. ಸಂಯುಕ್ತಾ ಮೆನನ್​ ಅವರು ಈ ಸಿನಿಮಾದಲ್ಲಿ ಧನುಷ್​ಗೆ ಜತೆಯಾಗಿ ಕಾಣಸಿಕೊಳ್ಳುತ್ತಿದ್ದಾರೆ. ಸಾಯಿ ಕುಮಾರ್​ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿವಿ ಪ್ರಕಾಶ್​ ಕುಮಾರ್​ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದಿನೇಶ್​ ಕೃಷ್ಣನ್​ ಛಾಯಾಗ್ರಾಹಣ ಚಿತ್ರಕ್ಕಿದೆ. ಜನವರಿಯಲ್ಲಿ ಸಿನಿಮಾದ ಶೂಟಿಂಗ್​ ಆರಂಭವಾಗಲಿದೆ.

ಧನುಷ್ ​ ‘ಅತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ನಲ್ಲಿ ಧನುಷ್ ಪರ್ಫಾರ್ಮೆನ್ಸ್​ ನೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಕ್ಷಯ್​ ಕುಮಾರ್​, ಸಾರಾ ಅಲಿ ಖಾನ್​ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಆನಂದ್​ ಎಲ್​. ರಾಯ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕ್ರಿಸ್​ಮಸ್​ ಪ್ರಯುಕ್ತ ಈ ಚಿತ್ರ ಡಿಸೆಂಬರ್ 24ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ.

ಇದನ್ನೂ ಓದಿ: ಒಟಿಟಿಯಲ್ಲೂ ಸ್ಟಾರ್​ ವಾರ್​; ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಚಿತ್ರಗಳ ಮುಖಾಮುಖಿ​

ಕತ್ರಿನಾ ಕೈಫ್​ ಮದುವೆ ವಿಚಾರದಲ್ಲಿ ಜೋಕ್​ ಮಾಡಿದ ಅಕ್ಷಯ್​ ಕುಮಾರ್​

Follow us on

Related Stories

Most Read Stories

Click on your DTH Provider to Add TV9 Kannada