AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಸಮಯದಲ್ಲಿ ವಿಜಯ್ ವಿರುದ್ಧ ದ್ವೇಷ ತೀರಿಸಿಕೊಂಡರೇ ನಟ ಅಜಿತ್ ಕುಮಾರ್?

Thalapathy Vijay vs Ajith Kumar: ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಚಿತ್ರರಂಗದಲ್ಲಿ ಸಮಕಾಲೀನರು. ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಎದುರಾಳಿಗಳೂ ಸಹ ಆಗಿದ್ದಾರೆ. ವಿಜಯ್ ಅಭಿಮಾನಿಗಳು, ಪದೇ ಪದೇ ಅಜಿತ್ ಬಗ್ಗೆ ಹೀನಾಯ ಟ್ರೋಲ್ ಮಾಡುವುದು, ಅಜಿತ್ ಅಭಿಮಾನಿಗಳು, ವಿಜಯ್ ಅವರನ್ನು ಟ್ರೋಲ್ ಮಾಡುವುದು ನಡದೇ ಇದೆ. ಇದೀಗ ಅಜಿತ್, ವಿಜಯ್​​ಗೆ ಮತಹಾಕಬೇಡಿ ಎಂದು ಪರೋಕ್ಷ ಸಂದೇಶ ನೀಡಿದ್ದಾರೆಂಬ ಸುದ್ದಿ ವೈರಲ್ ಆಗಿದೆ.

ಚುನಾವಣೆ ಸಮಯದಲ್ಲಿ ವಿಜಯ್ ವಿರುದ್ಧ ದ್ವೇಷ ತೀರಿಸಿಕೊಂಡರೇ ನಟ ಅಜಿತ್ ಕುಮಾರ್?
Vijay Ajith
ಮಂಜುನಾಥ ಸಿ.
|

Updated on: Apr 23, 2026 | 5:51 PM

Share

ತಮಿಳುನಾಡಿನಲ್ಲಿ ಚುನಾವಣೆ ಚಾಲ್ತಿಯಲ್ಲಿದೆ. ಇಂದು (ಏಪ್ರಿಲ್ 23) ಮತದಾನ ನಡೆದಿದೆ. ತಮಿಳು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಸಹ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದಲೂ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಪರಸ್ಪರ ಎದುರಾಳಿಗಳು. ಪರಸ್ಪರರ ಅಭಿಮಾನಿಗಳು ಸಹ ಎದುರಾಳಿಗಳಂತೇ ವರ್ತಿಸುತ್ತಾರೆ. ಇದೆಲ್ಲ ಹೀಗಿರುವಾಗ, ಅಜಿತ್ ಅವರು ಪರೋಕ್ಷವಾಗಿ ದಳಪತಿ ವಿಜಯ್​​ಗೆ ಮತ ಹಾಕಬೇಡಿ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ಬೆಲ್ಜಿಯಂನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಅಜಿತ್ ಪಡೆದುಕೊಂಡಿದ್ದಾರೆ. ಬುಧವಾರವಷ್ಟೇ ಚೆನ್ನೈಗೆ ಮರಳಿದ ಅಜಿತ್ ಅವರು, ಇಂದು ಬೆಳಗ್ಗೆ 7 ಗಂಟೆ ವೇಳೆಗೆ ತಿರುವನ್ಮಿಯೂರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಆದರೆ ಮತದಾನದ ನಂತರ ಹೊರಬಂದ ಅಜಿತ್ ಅವರಿಗೆ ಪತ್ರಕರ್ತರು ‘ತಮಿಳುನಾಡಿನಲ್ಲಿ ಸರ್ಕಾರದ ಬದಲಾವಣೆ ಬೇಕೇ?” ಎಂದು ಕೇಳಿದಾಗ, ಅಜಿತ್ ಅವರು ’ಬೇಡ’ ಎಂದು ಉತ್ತರಿಸಿದ್ದಾರೆ ಎಂಬ ಸುದ್ದಿ ವೈರಲ್ ಹಠಾತ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ:ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ: ಜೂನ್ 15ಕ್ಕೆ ವಿಚಾರಣೆ ಮುಂದೂಡಿಕೆ

ಈಗ ಆಡಳಿತದಲ್ಲಿರುವ ಡಿಎಂಕೆ ಪಕ್ಷವೇ ಮುಂದುವರೆಯಲಿ, ಹೊಸ ಪಕ್ಷಗಳಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶವನ್ನು ಅಜಿತ್ ನೀಡಿದ್ದಾರೆ. ಪರೋಕ್ಷವಾಗಿ ವಿಜಯ್ ಅವರಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡತೊಡಗಿತು. ಆದರೆ ಕೂಡಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಅಜಿತ್ ಅವರ ಮ್ಯಾನೇಜರ್ ಸುರೇಶ್, ಸುರೇಶ್ ಚಂದ್ರ, ‘ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಜಿತ್ ಕುಮಾರ್ ಅವರು ಪತ್ರಕರ್ತರೊಂದಿಗೆ ಯಾವುದೇ ಸಂವಾದ ನಡೆಸಿಲ್ಲ. ಅವರ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಚಿತ್ರರಂಗದಲ್ಲಿ ಸಮಕಾಲೀನರು. ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಎದುರಾಳಿಗಳೂ ಸಹ ಆಗಿದ್ದಾರೆ. ವಿಜಯ್ ಅಭಿಮಾನಿಗಳು, ಪದೇ ಪದೇ ಅಜಿತ್ ಬಗ್ಗೆ ಹೀನಾಯ ಟ್ರೋಲ್ ಮಾಡುವುದು, ಅಜಿತ್ ಅಭಿಮಾನಿಗಳು, ವಿಜಯ್ ಅವರನ್ನು ಟ್ರೋಲ್ ಮಾಡುವುದು ನಡದೇ ಇದೆ. ಇದೀಗ ಈ ಸುದ್ದಿ ವೈರಲ್ ಆಗುವ ಮೂಲಕ ಇಬ್ಬರು ನಟರ ಅಭಿಮಾನಿಗಳ ನಡುವೆ ಕಂದಕ ಇನ್ನೂ ಹೆಚ್ಚಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us