AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan: ‘ಲಿಯೋ’ ಸಿನಿಮಾದಲ್ಲಿ ರಾಮ್​ ಚರಣ್​ ನಟಿಸಿದ್ದಾರಾ? ಸಿಕ್ತು ಎರಡು ಸಾಕ್ಷಿ

‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗಲಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಟಿಕೆಟ್​ ಬುಕಿಂಗ್ ಶುರುವಾಗಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ರಾಮ್​ ಚರಣ್​ ಕೂಡ ನಟಿಸಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಎರಡು ಸಂಗತಿಗಳನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.

Ram Charan: ‘ಲಿಯೋ’ ಸಿನಿಮಾದಲ್ಲಿ ರಾಮ್​ ಚರಣ್​ ನಟಿಸಿದ್ದಾರಾ? ಸಿಕ್ತು ಎರಡು ಸಾಕ್ಷಿ
ರಾಮ್​ ಚರಣ್​, ದಳಪತಿ ವಿಜಯ್​, ಸಂಜಯ್​ ದತ್​
ಮದನ್​ ಕುಮಾರ್​
|

Updated on: Oct 11, 2023 | 12:35 PM

Share

ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇವೆ. ಈ ಹೊತ್ತಿನಲ್ಲಿ ಸಿನಿಮಾದ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾಗೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್​ (Thalapathy Vijay) ಅವರು ಹೀರೋ ಆಗಿ ನಟಿಸಿದ್ದಾರೆ. ತಮಿಳಿನಲ್ಲಿ ಲೋಕೇಶ್​ ಕನಗರಾಜ್​ (Lokesh Kanagaraj) ಅವರು ತಮ್ಮದೇ ಸಿನಿಮ್ಯಾಟಿಕ್​ ಯೂನಿವರ್ಸ್​ ಸೃಷ್ಟಿ ಮಾಡಿದ್ದಾರೆ. ಅಂದರೆ, ಒಂದು ಸಿನಿಮಾದಲ್ಲಿ ಇನ್ನೊಂದು ಸಿನಿಮಾದ ಪಾತ್ರಗಳು ಲಿಂಕ್​ ಹೊಂದಿರುತ್ತವೆ. ಈಗ ಈ ಸಿನಿಮ್ಯಾಟಿಕ್​ ಯೂನಿವರ್ಸ್​ಗೆ ರಾಮ್​ ಚರಣ್​ (Ram Charan) ಕೂಡ ಸೇರ್ಪಡೆ ಆಗಿರಬಹುದು ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾರಣವೂ ಇದೆ.

‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗಲಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಟಿಕೆಟ್​ ಬುಕಿಂಗ್ ಶುರುವಾಗಿದೆ. ಅಮೆರಿಕದ ಟಿಕೆಟ್​ ಬುಕಿಂಗ್​ ವೆಬ್​ಸೈಟ್​ನಲ್ಲಿ ರಾಮ್​ ಚರಣ್​ ಹೆಸರು ಕಾಣಿಸಿಕೊಂಡಿದೆ. ಪಾತ್ರವರ್ಗದ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಹಾಗಾಗಿ ಈ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ರಾಮ್​ ಚರಣ್​ ಕೂಡ ನಟಿಸಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ. ಆದರೆ ಚಿತ್ರತಂಡದವರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಬಹಳ ಅದ್ದೂರಿಯಾಗಿ ಮೂಡಿಬಂದಿರುವ ‘ಲಿಯೋ’ ಸಿನಿಮಾದ ಟ್ರೇಲರ್​ನಲ್ಲಿ ಕೆಲವು ಅಂಶಗಳು ಹೈಲೈಟ್​ ಆಗಿವೆ. ಇದು ತಮಿಳಿನ ಸಿನಿಮಾ. ಹಾಗಿದ್ದರೂ ಕೂಡ ಇದರ ಟ್ರೇಲರ್​ನಲ್ಲಿ ತೆಲಂಗಾಣದ ರಿಜಿಸ್ಟ್ರೇಷನ್​ ನಂಬರ್​ ಇರುವ ಕಾರು ಕಾಣಿಸಿದೆ. ಈ ಕಾರು ರಾಮ್​ ಚರಣ್​ ಅವರ ಪಾತ್ರಕ್ಕೆ ಸಂಬಂಧಿಸಿದ್ದು ಎಂಬುದು ಕೆಲವರ ಊಹೆ. ಆದರೆ ಅದು ನಿಜವೋ ಅಲ್ಲವೋ ಎಂಬುದು ಸಿನಿಮಾ ರಿಲೀಸ್​ ಆದ ನಂತರವೇ ಗೊತ್ತಾಗಬೇಕಿದೆ.

Leo Movie: ‘ಲಿಯೋ’ ಚಿತ್ರದಲ್ಲಿ ಕಮಲ್​ ಹಾಸನ್​ ಇದ್ದಾರಾ? ಮುಚ್ಚಿಟ್ಟ ವಿಷಯದ ಬಗ್ಗೆ ಮಾತಾಡಿದ ನಿರ್ದೇಶಕ

ಅಮೆರಿಕದ ಸಿನಿಮಾ ಟಿಕೆಟ್​ ಬುಕಿಂಗ್​ ವೆಬ್​ಸೈಟ್​ನವರು ‘ಲಿಯೋ’ ಪಾತ್ರವರ್ಗಕ್ಕೆ ರಾಮ್​ ಚರಣ್​ ಹೆಸರನ್ನು ಸೇರಿಸಿದ್ದು ಮತ್ತು ಟ್ರೇಲರ್​ನಲ್ಲಿ ತೆಲಂಗಾಣದ ಕಾರು ಕಾಣಿಸಿದ್ದನ್ನೇ ಎರಡು ಪ್ರಮುಖ ಸಾಕ್ಷಿಯಾಗಿ ಇಟ್ಟುಕೊಂಡು ನೆಟ್ಟಿಗರು ಈ ವಾದ ಮುಂದಿಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾದಲ್ಲಿ ಕಮಲ್​ ಹಾಸನ್​ ಕೂಡ ನಟಿಸಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದರು. ಹಾಗಾಗಿ ಪ್ರೇಕ್ಷಕರ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾದಲ್ಲಿನ ಕೆಲವೊಂದು ವಿಚಾರವನ್ನು ಗುಟ್ಟಾಗಿ ಇಡಲಾಗಿದ್ದು, ಅವುಗಳನ್ನು ಜನರು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್​ ಮಾಡಲಿ ಎಂದು ನಿರ್ದೇಶಕರು ಬಯಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,