AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leo Movie: ‘ಲಿಯೋ’ ಚಿತ್ರದಲ್ಲಿ ಕಮಲ್​ ಹಾಸನ್​ ಇದ್ದಾರಾ? ಮುಚ್ಚಿಟ್ಟ ವಿಷಯದ ಬಗ್ಗೆ ಮಾತಾಡಿದ ನಿರ್ದೇಶಕ

Kamal Haasan: ‘ಇನ್ನು ಕೇವಲ 10 ದಿನಗಳ ಕಾಲ ಕಾಯಿರಿ. ನಿಮಗೆ ಎಲ್ಲವೂ ತಿಳಿಯುತ್ತದೆ. ಬೇಕಂತಲೇ ನಾವು ಕೆಲವು ವಿಷಯಗಳನ್ನು ಮುಚ್ಚಿಟ್ಟಿದ್ದೇವೆ. ಯಾಕೆಂದರೆ ಅದನ್ನೆಲ್ಲ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಪೂರ್ತಿಯಾಗಿ ಎಂಜಾಯ್​ ಮಾಡಬೇಕು’ ಎಂದು ಲೋಕೇಶ್​ ಕನಗರಾಜ್​ ಹೇಳಿದ್ದಾರೆ. ಕಮಲ್​ ಹಾಸನ್​ ಕುರಿತ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

Leo Movie: ‘ಲಿಯೋ’ ಚಿತ್ರದಲ್ಲಿ ಕಮಲ್​ ಹಾಸನ್​ ಇದ್ದಾರಾ? ಮುಚ್ಚಿಟ್ಟ ವಿಷಯದ ಬಗ್ಗೆ ಮಾತಾಡಿದ ನಿರ್ದೇಶಕ
ಕಮಲ್​ ಹಾಸನ್​, ದಳಪತಿ ವಿಜಯ್​
ಮದನ್​ ಕುಮಾರ್​
|

Updated on: Oct 09, 2023 | 4:32 PM

Share

2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಿಯೋ’ ಚಿತ್ರ (Leo Movie) ಕೂಡ ಇದೆ. ಈ ಸಿನಿಮಾ ಮೇಲೆ ಹೈಪ್​ ಹೆಚ್ಚಲು ಹಲವು ಕಾರಣಗಳಿವೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ (Lokesh Kanagaraj) ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅವರು ತಮ್ಮದೇ ಸಿನಿಮ್ಯಾಟಿಕ್​ ಯೂನಿವರ್ಸ್​ ಸೃಷ್ಟಿಸಿದ್ದಾರೆ. ಅಂದರೆ, ಲೋಕೇಶ್​ ಕನಗರಾಜ್​ ನಿರ್ದೇಶನದ ಸಿನಿಮಾಗಳು ಒಂದಕ್ಕೊಂದು ಲಿಂಕ್​ ಹೊಂದಿರುತ್ತವೆ. ‘ಕೈದಿ’ ಚಿತ್ರದಲ್ಲಿದ್ದ ಪಾತ್ರಗಳು ‘ವಿಕ್ರಮ್​’ ಚಿತ್ರದಲ್ಲಿ ಇದ್ದವು. ಹಾಗೆಯೇ ‘ವಿಕ್ರಮ್​’ ಸಿನಿಮಾದಲ್ಲಿ ಕಮಲ್​ ಹಾಸನ್​ (Kamal Haasan) ಮಾಡಿದ್ದ ಪಾತ್ರವು ಈಗ ‘ಲಿಯೋ’ ಚಿತ್ರದಲ್ಲಿ ಇರಲಿದೆ ಎಂದು ಕೆಲವರು ಊಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಲೋಕೇಶ್​ ಕನಗರಾಜ್​ ಅವರು ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.

ಅಕ್ಟೋಬರ್ 19ರಂದು ‘ಲಿಯೋ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಅಲ್ಲದೇ, ತ್ರಿಶಾ ಕೃಷ್ಣನ್​, ಸಂಜಯ್​ ದತ್​, ಅರ್ಜುನ್​ ಸರ್ಜಾ ಮುಂತಾದವರು ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಅದರಲ್ಲಿ ಎಲ್ಲರ ಪಾತ್ರ ರಿವೀಲ್​ ಆಗಿದೆ. ಆದರೆ ಕಮಲ್​ ಹಾಸನ್​ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಕೂಡ ಒಂದು ಅನುಮಾನ ಮೂಡಿದೆ.

ಇದನ್ನೂ ಓದಿ: Leo Trailer: ಐದೇ ನಿಮಿಷದಲ್ಲಿ ಮಿಲಿಯನ್​ ಬಾರಿ ವೀಕ್ಷಣೆ ಕಂಡ ‘ಲಿಯೋ’ ಟ್ರೇಲರ್​

‘ಲಿಯೋ’ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರ ಹಿನ್ನೆಲೆ ಧ್ವನಿ ಇರಲಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈಗ ಹಿನ್ನೆಲೆ ಧ್ವನಿ ಮಾತ್ರವಲ್ಲದೇ ಅವರೊಂದು ಪಾತ್ರವನ್ನೂ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಎಂದು ಕೇಳಿದ್ದಕ್ಕೆ ಲೋಕೇಶ್​ ಕನಗರಾಜ್​ ಅವರು ಉತ್ತರ ನೀಡಿದ್ದಾರೆ. ‘ಇನ್ನು ಕೇವಲ 10 ದಿನಗಳ ಕಾಲ ಕಾಯಿರಿ. ನಿಮಗೆ ಎಲ್ಲವೂ ತಿಳಿಯುತ್ತದೆ. ನಾವು ಉದ್ದೇಶಪೂರ್ವವಾಗಿಯೇ ಕೆಲವು ಅಂಶಗಳು ಮುಚ್ಚಿಟ್ಟಿದ್ದೇವೆ. ಯಾಕೆಂದರೆ ಅದನ್ನೆಲ್ಲ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಪೂರ್ತಿಯಾಗಿ ಎಂಜಾಯ್​ ಮಾಡಬೇಕು’ ಎಂದು ಲೋಕೇಶ್​ ಕನಗರಾಜ್​ ಹೇಳಿದ್ದಾರೆ.

ಇದನ್ನೂ ಓದಿ: ಹಲವಾರು ಪೋಸ್ಟರ್​ಗಳ ಮೂಲಕವೇ ಕ್ರೇಜ್​ ಹೆಚ್ಚಿಸಿದ ‘ಲಿಯೋ’ ಸಿನಿಮಾ

ಕಮಲ್​ ಹಾಸನ್​ ನಟಿಸಿದ್ದ ‘ವಿಕ್ರಮ್​’ ಸಿನಿಮಾ ಬ್ಲಾಕ್​ ಬಸ್ಟರ್​ ಆಗಿತ್ತು. ಆ ಚಿತ್ರದ ಯಶಸ್ಸಿನಿಂದ ಖುಷಿಯಾದ ಕಮಲ್​ ಹಾಸನ್​ ಅವರು ನಿರ್ದೇಶಕ ಲೋಕೇಶ್​ ಕನಗರಾಜ್​ ಅವರಿಗೆ ಕಾರು ಗಿಫ್ಟ್​ ನೀಡಿದ್ದರು. ಈಗ ‘ಲಿಯೋ’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ