Rajamouli: ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ರಾಜಮೌಳಿ: ಏನೀ ನಂಟು?

ನಿರ್ದೇಶಕ ರಾಜಮೌಳಿಯನ್ನು ಕರ್ನಾಟಕದ ಗಡಿ ಜಿಲ್ಲೆ ರಾಯಚೂರಿಗೆ ವಿಧಾನಸಭಾ ಚುನಾವಣಾ ರಾಯಭಾರಿಯನ್ನಾಗಿ ಘೋಷಿಸಲಾಗಿದೆ.

Rajamouli: ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ರಾಜಮೌಳಿ: ಏನೀ ನಂಟು?
ರಾಜಮೌಳಿ
Follow us
ಮಂಜುನಾಥ ಸಿ.
|

Updated on: Mar 10, 2023 | 9:07 PM

ನಿರ್ದೇಶಕ ರಾಜಮೌಳಿ (Rajamouli) ಈಗ ಪ್ಯಾನ್ ವರ್ಲ್ಡ್ ನಿರ್ದೇಶಕರಾಗಿ ಬದಲಾಗಿದ್ದಾರೆ. ವಿಶ್ವಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಹಾಲಿವುಡ್​ನ ಬಿಲಿಯನೇರ್ ನಿರ್ಮಾಣ ಸಂಸ್ಥೆಗಳೇ ಅವರೊಟ್ಟಿಗೆ ಸಿನಿಮಾ ಮಾಡಲು ಉತ್ಸುಕವಾಗಿವೆ. ಭಾರತ ಚಿತ್ರರಂಗದ ಪ್ರತಿನಿಧಿಯಾಗಿ ವಿಶ್ವ ಸಂಚರಿಸುತ್ತಿರುವ ರಾಜಮೌಳಿಯನ್ನು ಕರ್ನಾಟಕದ ಗಡಿಜಿಲ್ಲೆ ರಾಯಚೂರಿಗೆ (Raichur) ಚುನಾವಣಾ ರಾಯಭಾರಿಯನ್ನಾಗಿ ಘೋಷಿಸಲಾಗಿದೆ.

ಹೊಸ್ತಿಲಲ್ಲೇ ಇರುವ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಾಗುತ್ತಿದ್ದು, ಮತದಾರ ಜಾಗೃತಿಗಾಗಿ ಆಯಾ ಜಿಲ್ಲೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಚುನಾವಣಾ ರಾಯಭಾರಿಗಳನ್ನಾಗಿ ಹೆಸರಿಸಿ ಆದೇಶ ಹೊರಡಿಸಿಲಾಗಿದ್ದು, ರಾಯಚೂರು ಜಿಲ್ಲಾ ರಾಯಭಾರಿಯಾಗಿ ರಾಜಮೌಳಿಯವರನ್ನು ಘೋಷಿಸಲಾಗಿದೆ. ರಾಯಚೂರು ಜಿಲ್ಲೆ ರಾಜಮೌಳಿಯ ಹುಟ್ಟೂರಾಗಿರುವ ಕಾರಣ ಜಿಲ್ಲೆಗೆ ಅವರನ್ನೇ ರಾಯಭಾರಿಯನ್ನಾಗಿ ಹೆಸರಿಸಲಾಗಿದೆ.

ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಆಂಧ್ರ ಪ್ರದೇಶದಲ್ಲಿ ಜಮೀನು ಹೊಂದಿದ್ದರು. ಆದರೆ, ರೈಲ್ವೇ ಹಳಿ ನಿರ್ಮಾಣ ಯೋಜನೆಯಲ್ಲಿ ತಮ್ಮ ಜಮೀನು ಕಳೆದುಕೊಂಡರು. ಆಗ ವಿಜಯೇಂದ್ರ ಪ್ರಸಾದ್ ಅವರು ಕುಟುಂಬದವರೊಡನೆ 1968ರಲ್ಲಿ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು. ರಾಯಚೂರಿನ ಹಿರೇಕೋಟಿಕಲ್ ಗ್ರಾಮದಲ್ಲಿ 7 ಎಕರೆ ಭತ್ತದ ಜಮೀನು ಪಡೆದು ಅಲ್ಲಿಯೇ ಕೃಷಿ ಮಾಡಿದರು. ರಾಜಮೌಳಿ 1973ರಲ್ಲಿ ಇಲ್ಲಿಯೇ ಜನಿಸಿದರು. ಬಳಿಕ 1977ರಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕುಟುಂಬ ಸಮೇತ ಮತ್ತೆ ಆಂಧ್ರ ಪ್ರದೇಶಕ್ಕೆ ತೆರಳಿದರು.

ರಾಜಮೌಳಿಗೆ ಹುಟ್ಟೂರು ರಾಯಚೂರು ಹಾಗೂ ಕರ್ನಾಟಕದ ಬಗ್ಗೆ ವಿಶೇಷ ಗೌರವಿದೆ. ರಾಜಮೌಳಿ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು ಕರ್ನಾಟಕ ಸರ್ಕಾರ ಎಂಬುದು ವಿಶೇಷ. ಹಿಂದೊಮ್ಮೆ ರಾಜಮೌಳಿ ಮಾಡಿದ್ದ ಟ್ವೀಟ್​ನಲ್ಲಿ ರಾಯಚೂರಿನ ಬಗ್ಗೆ ಉಲ್ಲೇಖಿಸಿದ್ದ ರಾಜಮೌಳಿ, ನಾನು ಹುಟ್ಟಿದ್ದು ರಾಯಚೂರಿನಲ್ಲಿ, ಓದಿದ್ದು ದಕ್ಷಿಣ ಗೋಧಾವರಿ ಜಿಲ್ಲೆಯಲ್ಲಿ, ಕೆಲಸ ಮಾಡಿದ್ದು ಚೆನ್ನೈನಲ್ಲಿ ಸೆಟಲ್ ಆಗಿರುವುದು ಹೈದರಾಬಾದ್​ನಲ್ಲಿ ನನ್ನ ಸ್ಥಳ ಯಾವುದೆಂದು ಹೇಳುತ್ತೀರಿ? ಎಂದು ಪ್ರಶ್ನೆ ಮಾಡಿದ್ದರು.

ನಟ ಸತ್ಯರಾಜ್ ವಿವಾದದಿಂದ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಸಮಸ್ಯೆ ಆಗಿದ್ದಾಗ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ರಾಜಮೌಳಿ ವಿಡಿಯೋದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದು, ಮಾತ್ರವಲ್ಲ ತಾವೂ ಸಹ ಕನ್ನಡಿಗ ಎಂದು ಹೇಳಿಕೊಂಡಿದ್ದರು.

ಜಿಲ್ಲಾ ಆಡಳಿತವೇನೋ ರಾಜಮೌಳಿಯವರನ್ನು ತಮ್ಮ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಘೋಷಿಸಿದೆ. ಆದರೆ ಇದಕ್ಕೆ ರಾಜಮೌಳಿಯವರ ಸಮ್ಮತಿ ಇದೆಯೇ ಎಂಬುದು ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು