ಹುಟ್ಟೂರಿಗೆ ರಾಯಭಾರಿಯಾದ ರಾಜಮೌಳಿ; ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಿರುವ ಖ್ಯಾತ ನಿರ್ದೇಶಕ

ಗಡಿನಾಡು ಜಿಲ್ಲೆ ಆಗಿರುವುದರಿಂದ ರಾಯಚೂರಿನಲ್ಲಿ ರಾಜಮೌಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸ್ಥಳೀಯರು ರಾಜಮೌಳಿ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುವುದರಿಂದ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ರಾಯಚೂರು ಜಿಲ್ಲಾಡಳಿತ ನೇಮಕ ಮಾಡಿದೆ.

Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Mar 09, 2023 | 9:04 AM

ರಾಜ್ಯದಲ್ಲಿ ರಾಜಕೀಯ ಕಾವು ಜೋರಾಗಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಮತ್ತೊಂದು ಕಡೆ ಚುನಾವಣಾ ಆಯೋಗವೂ ಎಲೆಕ್ಷನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಚುನಾವಣಾ ಆಯೋಗವು (Election Commission) ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಿದೆ. ರಾಯಚೂರು ಜಿಲ್ಲೆಗೆ (Raichur District) ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರನ್ನು ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಿದೆ. ರಾಜಮೌಳಿ ಹುಟ್ಟೂರಿಗೆ ಚುನಾವಣಾ ರಾಯಭಾರಿಯಾಗಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಪೈಕಿ ರಾಜಮೌಳಿ ಹೆಸರು ಸಾಕಷ್ಟು ಗಮನ ಸೆಳೆದಿದೆ.

ರಾಜಮೌಳಿ ಆಯ್ಕೆ ಯಾಕೆ?

ರಾಜಮೌಳಿ ಅವರು ಆಂಧ್ರಪ್ರದೇಶದವರು. ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ರಾಯಚೂರು ಜಿಲ್ಲೆ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿದೆ. ಇದರ ಜೊತೆಗೆ ರಾಜಮೌಳಿಗೆ ರಾಯಚೂರು ಜಿಲ್ಲೆಯ ಕನೆಕ್ಷನ್ ಕೂಡ ಇದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಆಂಧ್ರದಲ್ಲಿ ಜಮೀನು ಹೊಂದಿದ್ದರು. ಆದರೆ, ರೈಲ್ವೇ ಟ್ರ್ಯಾಕ್ ನಿರ್ಮಾಣದಿಂದ ಜಮೀನನ್ನು ಕಳೆದುಕೊಂಡರು. ಈ ವೇಳೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು 1968ರಲ್ಲಿ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ 7 ಎಕರೆ ಭತ್ತದ ಜಮೀನು ಪಡೆದು ಅಲ್ಲಿಯೇ ಕೃಷಿ ಮಾಡಿದರು. ರಾಜಮೌಳಿ ಹುಟ್ಟಿದ್ದು 1973ರಲ್ಲಿ. 77ರಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕುಟುಂಬ ಸಮೇತ ಮತ್ತೆ ಆಂಧ್ರ ಪ್ರದೇಶಕ್ಕೆ ತೆರಳಿದರು. ಹೀಗಾಗಿ, ರಾಜಮೌಳಿಗೆ ರಾಯಚೂರು ಜಿಲ್ಲೆಯ ಬಗ್ಗೆ ವಿಶೇಷ ಗೌರವ ಇದೆ.

ಮನವಿ ಪುರಸ್ಕರಿಸಿದ ಆಯೋಗ

ಗಡಿನಾಡು ಜಿಲ್ಲೆ ಆಗಿರುವುದರಿಂದ ರಾಯಚೂರಿನಲ್ಲಿ ರಾಜಮೌಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸ್ಥಳೀಯರು ರಾಜಮೌಳಿ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುವುದರಿಂದ ಅವರ ಹೆಸರನ್ನು ಚುನಾವಣಾ ರಾಯಭಾರಿಯನ್ನಾಗಿಸಲು ರಾಯಚೂರು ಜಿಲ್ಲಾಡಳಿತ ಮನವಿ ಸಲ್ಲಿಕೆ ಮಾಡಿತ್ತು. ರಾಜ್ಯ ಚುನಾವಣಾ ಆಯೋಗ ಈ ಮನವಿಯನ್ನು ಪುರಸ್ಕರಿಸಿದೆ.

ಇದನ್ನೂ ಓದಿ
Image
‘RRR’ ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ ಖರ್ಚು ಮಾಡಿದ ಹಣದಲ್ಲಿ ಮತ್ತೊಂದು ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು
Image
ಮಹೇಶ್ ಬಾಬು ಜಿಮ್​ನಲ್ಲಿ ವರ್ಕೌಟ್ ಮಾಡ್ತಿರೋ ಫೋಟೋ ಹಿಂದಿದೆ ದೊಡ್ಡ ಹಿಂಟ್
Image
SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು
Image
ಹಾಲಿವುಡ್​ ಅವಾರ್ಡ್​ ಫಂಕ್ಷನ್​ಗೆ ಜೂ.ಎನ್​ಟಿಆರ್​ಗೆ ಇರಲಿಲ್ಲ ಆಹ್ವಾನ? ಸ್ಪಷ್ಟನೆ ನೀಡಿದ ಆಯೋಜಕರು

ಇದನ್ನೂ ಓದಿ: ‘RRR’ ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ ಖರ್ಚು ಮಾಡಿದ ಹಣದಲ್ಲಿ ಮತ್ತೊಂದು ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು

ರಾಜಮೌಳಿ ಕೆಲಸ ಏನು?

ಪ್ರತಿಯೊಬ್ಬರೂ ಮತನದಾನ ಮಾಡಬೇಕು ಎಂದು ಸರ್ಕಾರ ಜಾಗೃತಿ ಮೂಡಿಸುತ್ತದೆ. ಆಯಾ ಜಿಲ್ಲೆಯ ರಾಯಭಾರಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಇದಕ್ಕಾಗಿ ಏರ್ಪಡಿಸುವ ವಿವಿಧ ಕಾರ್ಯಕ್ರಮದಲ್ಲಿ ರಾಜಮೌಳಿ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು

ಅಮೆರಿಕದಲ್ಲಿ ರಾಜಮೌಳಿ

ಸದ್ಯ ರಾಜಮೌಳಿ ಅಮೆರಿಕದಲ್ಲಿದ್ದಾರೆ. ಮಾರ್ಚ್ 12ರಂದು ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ಆಸ್ಕರ್ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ಗೆ ಆಯ್ಕೆ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ರಾಜಮೌಳಿ ಅಮೆರಿಕದಲ್ಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಅವರು ಭಾರತಕ್ಕೆ ಮರಳಲಿದ್ದಾರೆ. ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:30 am, Thu, 9 March 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್