Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನ್ನಪೂರ್ಣಿ’ ವಿವಾದ, ನಯನತಾರಾ ಬೆಂಬಲಕ್ಕೆ ವೆಟ್ರಿಮಾರನ್

Annapoorani: ವಿವಾದಕ್ಕೆ ಈಡಾಗಿರುವ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾವನ್ನು ನೆಟ್​ಫ್ಲಿಕ್ಸ್​ನಿಂದ ತೆಗೆದು ಹಾಕಿರುವುದಕ್ಕೆ ವೆಟ್ರಿಮಾರನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅನ್ನಪೂರ್ಣಿ’ ವಿವಾದ, ನಯನತಾರಾ ಬೆಂಬಲಕ್ಕೆ ವೆಟ್ರಿಮಾರನ್
Follow us
ಮಂಜುನಾಥ ಸಿ.
|

Updated on: Jan 17, 2024 | 4:56 PM

ನಯನತಾರಾ (Nayanatara) ನಟಿಸಿರುವ ‘ಅನ್ನಪೂರ್ಣಿ’ ಸಿನಿಮಾ ವಿವಾದ ಎಬ್ಬಿಸಿದೆ. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಬಳಿಕ ಅದೇ ತಿಂಗಳು 29ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಒಟಿಟಿಗೆ ಬಂದ ಬಳಿಕ ಹಲವು ಈ ಸಿನಿಮಾ ವೀಕ್ಷಿಸಿದರು. ಆದರೆ ಸಿನಿಮಾದ ಕಂಟೆಂಟ್, ಕೆಲವು ಸಂಭಾಷಣೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯ್ತು. ನೆಟ್​ಫ್ಲಿಕ್ಸ್​, ನಯನತಾರಾ ಸೇರಿದಂತೆ ಚಿತ್ರತಂಡದ ಇನ್ನೂ ಕೆಲವರ ವಿರುದ್ಧ ದೂರುಗಳು ಸಹ ದಾಖಲಾದವು. ಕೊನೆಗೆ ಸಿನಿಮಾವನ್ನು ಒಟಿಟಿಯಿಂದ ಡಿಲೀಟ್ ಮಾಡಲಾಯ್ತು. ವಿವಾದ ಎಬ್ಬಿಸಿದ ಈ ಸಿನಿಮಾದ ಬೆಂಬಲಕ್ಕೆ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿಂತಿದ್ದಾರೆ.

ಭಾರತದ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಗುರುತಿಸಲಾಗುವ ವೆಟ್ರಿಮಾರನ್, ‘ಅನ್ನಪೂರ್ಣಿ’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಭಾರತದಲ್ಲಿ ಸೆನ್ಸಾರ್ ಇಲ್ಲದ ಸೃಜನಾತ್ಮಕ ಸ್ವಾತಂತ್ರ್ಯ ಎಂಬುದು ಇಲ್ಲ. OTT ಯಲ್ಲಿ ಬಿಡುಗಡೆಯಾದ ಚಿತ್ರಗಳಿಗೂ ಸಹ ಇದು ಅನ್ವಯಿಸುತ್ತದೆ. ಸೆನ್ಸಾರ್ ಮಂಡಳಿಯಿಂದ ಚಲನಚಿತ್ರವನ್ನು ಅನುಮೋದಿಸಿದರೂ ಸಹ, ಬಾಹ್ಯ ಒತ್ತಡಗಳಿಗೆ ಮಣಿದು ಅದನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಬಹುದು ಅದು ಭಾರತದಲ್ಲಿ ಮಾತ್ರ ಸಾಧ್ಯ’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ:ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು

‘ಚಲನಚಿತ್ರವನ್ನು ಅನುಮತಿಸುವ ಅಥವಾ ನಿರ್ಬಂಧಿಸುವ ಅಧಿಕಾರವುಳ್ಳ ಏಕೈಕ ಸಂಸ್ಥೆ ಸೆನ್ಸಾರ್ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯಿಂದ ಅನುಮೋದಿಸಲಾದ ಚಲನಚಿತ್ರವನ್ನು ಬಾಹ್ಯ ಪ್ರಭಾವಗಳಿಂದ ತೆಗೆದುಹಾಕಲು ಹೇಗೆ ಒತ್ತಾಯಿಸಲಾಯಿತು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಇಂತಹ ಘಟನೆಗಳು ಸೆನ್ಸಾರ್ ಮಂಡಳಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತವೆ ಎಂದು ವೆಟ್ರಿಮಾರನ್ ಹೇಳಿದ್ದಾರೆ.

‘ಅನ್ನಪೂರ್ಣಿ’ ಸಿನಿಮಾ ಲವ್ ಜಿಹಾದ್​ಗೆ ಪರೋಕ್ಷ ಪ್ರಚಾರ ನೀಡುತ್ತಿದೆ ಎಂದು, ಮತಾಂತರಕ್ಕೆ ಪ್ರಚಾರ ನೀಡುತ್ತಿದೆ ಅಲ್ಲದೆ ಸಿನಿಮಾದಲ್ಲಿ ಶ್ರೀರಾಮನನ್ನು ಮಾಂಸಾಹಾರಿ ಎಂದು ಹೇಳಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಟಿ ನಯನತಾರಾ ಸೇರಿದಂತೆ ಸಿನಿಮಾದ ನಿರ್ದೇಶಕ, ನಿರ್ಮಾಪಕ, ಕತೆಗಾರ, ಸಿನಿಮಾವನ್ನು ಪ್ರದರ್ಶಿಸಿದ್ದ ನೆಟ್​ಫ್ಲಿಕ್ಸ್​ ಹಾಗೂ ಅದರ ಸಿಇಓ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಮರಾಠಿಯಲ್ಲಿ ಮಾತಾಡಿರುವ ಹೆಬ್ಬಾಳ್ಕರ್ ಕನ್ನಡಿಗರ ಕ್ಷಮೆ ಕೇಳಬೇಕು: ಪ್ರವೀಣ್
ಮರಾಠಿಯಲ್ಲಿ ಮಾತಾಡಿರುವ ಹೆಬ್ಬಾಳ್ಕರ್ ಕನ್ನಡಿಗರ ಕ್ಷಮೆ ಕೇಳಬೇಕು: ಪ್ರವೀಣ್
ಪಾಕಿಸ್ತಾನ್ ಸೋಲುತ್ತಿದ್ದಂತೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ಪಾಕ್ ಅಭಿಮಾನಿ
ಪಾಕಿಸ್ತಾನ್ ಸೋಲುತ್ತಿದ್ದಂತೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ಪಾಕ್ ಅಭಿಮಾನಿ
ರಚಿತಾ ರಾಮ್​ಗೆ ಭರ್ಜರಿ ಸ್ವಾಗತ ಕೊಟ್ಟ ಮುಧೋಳ ಮಂದಿ: ವಿಡಿಯೋ
ರಚಿತಾ ರಾಮ್​ಗೆ ಭರ್ಜರಿ ಸ್ವಾಗತ ಕೊಟ್ಟ ಮುಧೋಳ ಮಂದಿ: ವಿಡಿಯೋ