ಓವರ್ ಕಾನ್ಫಿಡೆನ್ಸ್ನಿಂದ ತಪ್ಪು ನಿರ್ಧಾರ ಮಾಡಿದ್ರಾ ಪ್ರತಾಪ್? ಕಾಡಿದೆ ಸೋಲಿನ ಭಯ
ಬುದ್ಧಿಮತ್ಯೆ ಉಪಯೋಗಿಸಿ ಗೆಲ್ಲಬಹುದು ಎನ್ನುವ ಆಲೋಚನೆ ಪ್ರತಾಪ್ಗೆ ಇತ್ತು. ಆದರೆ, ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಈ ಮಧ್ಯೆ ತಂಡದಿಂದ ಕಾರ್ತಿಕ್ ಅವರನ್ನು ಪ್ರತಾಪ್ ಹೊರಗೆ ಇಟ್ಟರು ಇದು ಅವರ ತಂಡಕ್ಕೆ ಸಖತ್ ಹಿನ್ನಡೆ ಆಗಿದೆ.

ಡ್ರೋನ್ ಪ್ರತಾಪ್ (Drone Prathap) ಟೀಂ ಲೀಡರ್ ಆದರು ಎಂದರೆ ಗೆಲುವು ಖಚಿತ ಎನ್ನುವ ಅಭಿಪ್ರಾಯ ಬಿಗ್ ಬಾಸ್ ಮನೆಯಲ್ಲಿ ವ್ಯಕ್ತವಾಗಿದೆ. ಕಳೆದ ಕೆಲವು ಬಾರಿ ಇದು ಸಾಬೀತಾಗಿದೆ. ಅವರು ಸಾಕಷ್ಟು ಚಾಕಚಕ್ಯತೆ ಉಪಯೋಗಿಸಿ ಗೇಮ್ ಪ್ಲೇ ಮಾಡುತ್ತಾರೆ. ಈಗ ಡ್ರೋನ್ ಪ್ರತಾಪ್ ಅವರು ತೆಗೆದುಕೊಂಡು ಒಂದು ನಿರ್ಧಾರದಿಂದ ಸೋಲು ಉಂಟಾಗಿದೆ. ಮುಂದಿನ ದಿನಗಳಲ್ಲಿ ಟಾಸ್ಕ್ ಮತ್ತಷ್ಟು ಟಫ್ ಆಗೋ ಸಾಧ್ಯತೆ ಇದೆ.
ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಒಂದು ತಂಡಕ್ಕೆ ಮೈಕಲ್ ಕ್ಯಾಪ್ಟನ್ ಆದರೆ, ಮತ್ತೊಂದು ತಂಡಕ್ಕೆ ಡ್ರೋನ್ ಪ್ರತಾಪ್ ನಾಯಕ. ಫಿಸಿಕಲಿ ಸ್ಟ್ರಾಂಗ್ ಆಗಿ ಕಾಣುವ ಸ್ಪರ್ಧಿಗಳು ಮೈಕಲ್ ತಂಡದಲ್ಲಿ ಸೇರಿಕೊಂಡರೆ, ಸ್ಟ್ರಾಂಗ್ ಅಲ್ಲದವರು ಪ್ರತಾಪ್ ಟೀಂ ಸೇರಿದ್ದರು. ಆದರೆ, ತಲೆ ಉಪಯೋಗಿಸಿ ಗೆಲ್ಲಬಹುದು ಎನ್ನುವ ಆಲೋಚನೆ ಪ್ರತಾಪ್ಗೆ ಇತ್ತು. ಈ ಮಧ್ಯೆ ತಂಡದಿಂದ ಕಾರ್ತಿಕ್ ಅವರನ್ನು ಹೊರಗಿಡುವ ನಿರ್ಧಾರಕ್ಕೆ ಪ್ರತಾಪ್ ಬಂದರು. ಇದು ಅನೇಕರಿಗೆ ಅಚ್ಚರಿ ತಂದಿತ್ತು.
ಫಿಸಿಕಲ್ ಗೇಮ್ ಎಂಬುದು ಬಂದಾಗ ಕಾರ್ತಿಕ್ ಸ್ಟ್ರಾಂಗ್ ಆಗಿ ಆಡುತ್ತಿದ್ದರು. ಅವರನ್ನೇ ಪ್ರತಾಪ್ ಹೊರಗೆ ಇಟ್ಟಿದ್ದು ತಪ್ಪು ನಿರ್ಧಾರ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ತಂಡದಲ್ಲಿ ಕ್ಯಾಪ್ಟನ್ಸಿ ರೇಸ್ನಿಂದ ಹೊರಗೆ ಇಡಬೇಕು ಎನ್ನುವ ವಿಚಾರ ಬಂದಾಗ ಪ್ರತಾಪ್ ಅವರು ನಮ್ರತಾ ಹೆಸರನ್ನು ಸೂಚಿಸಿದರು. ಇದರಿಂದ ತಂಡದಲ್ಲೇ ಭಿನ್ನಾಭಿಪ್ರಾಯ ಮೂಡಿದೆ.
ಇದನ್ನೂ ಓದಿ: ನಮ್ರತಾಗೆ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್: ಕ್ಯಾಪ್ಟನ್ ನಿರ್ಣಯದ ಬಗ್ಗೆ ಅಸಮಾಧಾನ
ನಮ್ರತಾ ಗೌಡ ಅವರು ಪ್ರತಾಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಅವನು ನಂಬಿಸಿ ಮೋಸ ಮಾಡಿದನು’ ಎನ್ನುವ ಮಾತನ್ನು ಹೇಳಿದ್ದಾರೆ. ಮುಂದಿನ ಆಟಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಾರ ಕ್ಯಾಪ್ಟನ್ ಆದರೆ ಅವರಿಗೆ ಹೆಚ್ಚಿನ ಅಧಿಕಾರ ಸಿಗಲಿದೆ ಎಂದು ಬಿಗ್ ಬಾಸ್ ಈಗಾಗಲೇ ಘೋಷಣೆ ಮಾಡಿರುವುದರಿಂದ ಕುತೂಹಲ ಹೆಚ್ಚಿದೆ. ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Wed, 29 November 23