ಸಿನಿಮಾ ಪ್ರದರ್ಶಕರ ಪ್ರತಿಭಟನೆ, ಜೂನ್ 1 ರಿಂದ ಚಿತ್ರಮಂದಿರಗಳು ಬಂದ್
Movie Industry: ಮಲಯಾಳಂ ಸಿನಿಮಾ ಪ್ರದರ್ಶಕರು ಈಗಾಗಲೇ ಪ್ರತಿಭಟನೆ ಘೋಷಿಸಿದ್ದು ಶೀಘ್ರವೇ ಮಲಯಾಳಂ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಲಿದೆ. ಇದರ ಜೊತೆಗೆ ಭಾರತದ ಬಲು ಲಾಭದಾಯಕ ಸಿನಿಮಾ ರಂಗ ಎನಿಸಿಕೊಂಡಿರುವ ತೆಲುಗಿನಲ್ಲಿಯೂ ಸಮಸ್ಯೆಗಳು ಪ್ರಾರಂಭವಾಗಿದ್ದು, ತೆಲುಗು ಸಿನಿಮಾ ಪ್ರದರ್ಶಕರು ಸಹ ಪ್ರತಿಭಟನೆ ಘೋಷಿಸಿದ್ದು ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಹೇಳಿದ್ದಾರೆ.

ಸಾವಿರಾರು ಕೋಟಿ ಹಣ ಬಾಚುತ್ತಿವೆ ಕೆಲ ಸಿನಿಮಾಗಳು ಆದರೆ ಒಟ್ಟಾರೆಯಾಗಿ ನೋಡಿದರೆ ಚಿತ್ರರಂಗ (Movie Industry) ದೊಡ್ಡ ಲಾಸ್ನಲ್ಲಿದೆ. ಮಲಯಾಳಂ (Malayalam) ಸಿನಿಮಾ ಪ್ರದರ್ಶಕರು ಈಗಾಗಲೇ ಪ್ರತಿಭಟನೆ ಘೋಷಿಸಿದ್ದು ಶೀಘ್ರವೇ ಮಲಯಾಳಂ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಲಿದೆ. ಇದರ ಜೊತೆಗೆ ಭಾರತದ ಬಲು ಲಾಭದಾಯಕ ಸಿನಿಮಾ ರಂಗ ಎನಿಸಿಕೊಂಡಿರುವ ತೆಲುಗಿನಲ್ಲಿಯೂ ಸಮಸ್ಯೆಗಳು ಪ್ರಾರಂಭವಾಗಿದ್ದು, ತೆಲುಗು ಸಿನಿಮಾ ಪ್ರದರ್ಶಕರು ಸಹ ಪ್ರತಿಭಟನೆ ಘೋಷಿಸಿದ್ದು ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಹೇಳಿದ್ದಾರೆ.
ಭಾರತದಲ್ಲಿ ಅತಿ ಹೆಚ್ಚು ಲಾಭದಾಯಕ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ. ಆದರೆ ಅಲ್ಲಿಯೂ ಸಹ ಎಲ್ಲವೂ ಸರಿಯಿಲ್ಲ. ಇತ್ತೀಚೆಗೆ ಅಲ್ಲಿಯೂ ಸಹ ಸತತವಾಗಿ ಸಿನಿಮಾಗಳು ಸೋಲುತ್ತಿದ್ದು ಸಿನಿಮಾ ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈಸ್ಟ್ ಗೋಧಾವರಿ ಭಾಗದ ಸಿನಿಮಾ ಪ್ರದರ್ಶಕರು ಪ್ರತಿಭಟನೆಗೆ ಕರೆ ನೀಡಿದ್ದು, ಜೂನ್ 1 ರಿಂದ ಈಸ್ಟ್ ಗೋಧಾವರಿ ಭಾಗದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣವನ್ನು ನಾಲ್ಕು ವಿಭಾಗಗಳನ್ನಾಗಿ ವಿತರಕರು ವಿಂಗಡಿಸಿಕೊಂಡಿದ್ದಾರೆ. ನಿಜಾಮ್, ಸೀಡೆಡ್, ಈಸ್ಟ್ ಗೋಧಾವರಿ, ಆಂಧ್ರ ಹೀಗೆ ಭಾಗಗಳನ್ನಾಗಿ ಮಾಡಲಾಗಿದೆ. ಇತ್ತೀಚೆಗೆ ಈಸ್ಟ್ ಗೋಧಾವರಿಯ ಸಿನಿಮಾ ಪ್ರದರ್ಶಕರು, ಸಿನಿಮಾ ವಿತರಕರೊಟ್ಟಿಗೆ ಸಭೆ ನಡೆಸಿದ್ದು ಈಗ ಚಾಲ್ತಿಯಲ್ಲಿರುವ ಬಾಡಿಗೆ ಪದ್ಧತಿಯನ್ನು ಮುಂದುವರೆಸುವಂತೆ ಹಾಗೂ ಬಾಡಿಗೆ ಹೆಚ್ಚು ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಸಿನಿಮಾ ವಿತರಕರು ಇದಕ್ಕೆ ಒಪ್ಪಿಲ್ಲ ಬದಲಿಗೆ ಪ್ರಾಫಿಟ್ ಶೇರ್ (ಲಾಭ ಹಂಚಿಕೆ) ಮಾಡೆಲ್ನಲ್ಲಿ ಸಿನಿಮಾ ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಈಸ್ಟ್ ಗೋಧಾವರಿ ಸಿನಿಮಾ ಪ್ರದರ್ಶಕರು, ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಜೂನ್ ತಿಂಗಳು ತೆಲುಗು ಚಿತ್ರರಂಗದ ಪಾಲಿಗೆ ಪ್ರಮುಖ ತಿಂಗಳಾಗಿದೆ. ಮೆಗಾಸ್ಟಾರ್ ಚಿರಂಜೀವಿಯ ‘ವಿಶ್ವಂಭರ’, ರವಿತೇಜ ಅವರ ಹೊಸ ಸಿನಿಮಾ, ನಟ ನಿತಿನ್ ಅವರ ಹೊಸ ಸಿನಿಮಾಗಳು ಜೂನ್ ತಿಂಗಳಿನಲ್ಲಿಯೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ಇನ್ನೂ ಕೆಲ ಸಿನಿಮಾಗಳು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಚಿತ್ರಮಂದಿರಗಳು ಬಂದ್ ಆದರೆ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳಿಗೆ ಭಾರಿ ಹೊಡೆತ ಬೀಳಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ