AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯಲ್ಲಿರೋ ಫಹಾದ್ ನಟನೆಯ ಈ ಸಸ್ಪೆನ್ಸ್ ಚಿತ್ರದಲ್ಲಿ ಊಹಿಸಲಾಗದಷ್ಟು ಟ್ವಿಸ್ಟ್​ಗಳು; ಕನ್ನಡದಲ್ಲೂ ಲಭ್ಯ

ಫಹಾದ್ ಫಾಸಿಲ್ ಅಭಿನಯದ "ಮಾರೀಸನ್" ಎಂಬ ತಮಿಳು ಚಿತ್ರವು ಈಗ ಒಟಿಟಿಯಲ್ಲಿ ಕನ್ನಡದಲ್ಲೂ ಲಭ್ಯವಿದೆ. ಸುಧೀಶ್ ಶಂಕರ್ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ತುಂಬಿದೆ. ಕಳ್ಳನಾಗಿರುವ ದಯಾಳ್ (ಫಹಾದ್) ಮತ್ತು ಮರೆವಿನ ಕಾಯಿಲೆಯಿಂದ ಬಳಲುವ ವೇಲಾಯುಧಂ (ವದಿವೇಲು) ನಡುವಿನ ಸಂಬಂಧವೇ ಕಥೆಯ ಮುಖ್ಯಾಂಶ. ಚಿತ್ರದ ಆರಂಭಿಕ ಹಾಸ್ಯದ ನಂತರ ಅದ್ಭುತ ಟ್ವಿಸ್ಟ್‌ಗಳು ಚಿತ್ರಕ್ಕೆ ಹೊಸ ಆಯಾಮ ನೀಡುತ್ತವೆ.

ಒಟಿಟಿಯಲ್ಲಿರೋ ಫಹಾದ್ ನಟನೆಯ ಈ ಸಸ್ಪೆನ್ಸ್ ಚಿತ್ರದಲ್ಲಿ ಊಹಿಸಲಾಗದಷ್ಟು ಟ್ವಿಸ್ಟ್​ಗಳು; ಕನ್ನಡದಲ್ಲೂ ಲಭ್ಯ
ಮಾರೀಸನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 25, 2025 | 6:28 AM

Share

ಫಹಾದ್ ಫಾಸಿಲ್ (Fahadh Faasil) ಅವರು ಕಥೆಯ ಆಯ್ಕೆಯಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ ಅನ್ನೋದು ಗೊತ್ತಿದೆ. ಅವರ ನಟನೆಯ ಎಲ್ಲಾ ಚಿತ್ರಗಳು ಭಿನ್ನವಾಗಿಯೇ ಇವೆ ಎನ್ನಬಹುದು. ‘ಪುಷ್ಪ 2’ ಚಿತ್ರದಲ್ಲಿ ಅವರು ಶೇಖಾವತ್ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದರು. ಆ ಬಳಿಕ ಅವರು ಆ ರೀತಿಯದ್ದೇ ಸಿನಿಮಾ ಮಾಡುತ್ತೇನೆ ಎಂದು ಕುಳಿತವರಲ್ಲ ಎಂದೇ ಹೇಳಬಹುದು. ಈಗ ಫಹಾದ್ ಅವರ ಹೊಸ ಚಿತ್ರವೊಂದು ಒಟಿಟಿಯಲ್ಲಿ ಬಂದಿದೆ. ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ಲಭ್ಯವಿದೆ. ಇದರ ಟ್ವಿಸ್ಟ್​ಗಳು ಯಾರೂ ಊಹಿಸಲೂ ಸಾಧ್ಯವಿಲ್ಲ ಎಂದೇ ಹೇಳಬಹುದು.

ಈ ಚಿತ್ರದ ಹೆಸರು ‘ಮಾರೀಸನ್’ ಎಂದು. ಈ ಸಿನಿಮಾ ಮೂಲತಃ ತಮಿಳು ಚಿತ್ರ. ಈ ಚಿತ್ರ ಕನ್ನಡದಲ್ಲೂ ಲಭ್ಯವಿದೆ. ಸುಧೀಶ್ ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸುಧೀಶ್ ಅವರು ಧಾರಾವಾಹಿಗಳನ್ನು ಮಾಡಿ ಫೇಮಸ್ ಆದವರು. ಅವರು ಕಿರುತೆರೆಯಲ್ಲಿ ಚೆನ್ನಾಗಿ ಹೆಸರು ಮಾಡಿದ್ದಾರೆ. ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

2025ರ ಜುಲೈ 25ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈಗ ಚಿತ್ರವು ಒಟಿಟಿಯಲ್ಲಿ ಬಿಡುಗಡೆ ಕಂಡಿದೆ. ಫಹಾದ್ ಫಾಸಿಲ್ ಅವರು ದಯಾಳ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ವದಿವೇಲು ವೇಲಾಯುಧಂ ಪಿಳ್ಳಯ್ ಪಾತ್ರ ಮಾಡಿದ್ದಾರೆ. ದಯಾಳ್ ಹುಟ್ಟು ಕಳ್ಳ. ಕದಿಯೋದು ಎಂದರೆ ಆತನಿಗೆ ಇಷ್ಟ. ಆತ ಜೈಲಿನಿಂದ ಬಿಡುಗಡೆ ಕಾಣುತ್ತಾನೆ ಮತ್ತು ಒಂದು ಮನೆಗೆ ಕಳ್ಳತನ ಮಾಡಲು ಬರುತ್ತಾನೆ. ಆಗ ವೇಲಾಯುಧಂ ಸಿಗುತ್ತಾನೆ. ವೇಲಾಯುಧಂಗೆ ಮರೆವಿನ ಕಾಯಿಲೆ.

ಇದನ್ನೂ ಓದಿ
Image
ವಿಚ್ಛೇದನದ ಹಂತದಲ್ಲಿ ಗೋವಿಂದ ದಾಂಪತ್ಯ; ಪತಿಯಿಂದ ಮೋಸ ಆಗಿದೆ ಎಂದ ಸುನೀತಾ
Image
‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ದೀಪಿಕಾ ದಾಸ್
Image
ವಿಶೇಷ ದಿನದಂದೇ ವಿವಾಹ ಆಗುತ್ತಿದ್ದಾರೆ ಆ್ಯಂಕರ್ ಅನುಶ್ರೀ; ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ​ ಋಣ ತೀರಿಸಿದ ರಾಜ್

ವೇಲಾಯುಧಂನ ತಾನೇ ಊರಿಗೆ ಬಿಡುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ದಯಾಳ್. ಇದಕ್ಕೆ ಕಾರಣ ಏನು? ಮುಂದೆ ಏನಾಗುತ್ತದೆ ಎಂಬುದೆಲ್ಲವನ್ನೂ ಸಿನಿಮಾದಲ್ಲೇ ನೋಡಿ ತಿಳಿದುಕೊಳ್ಳಬೇಕು. ಸಿನಿಮಾದಲ್ಲಿ ಆರಂಭದಲ್ಲಿ ಹಾಸ್ಯ ಇದೆ. ಮುಂದೆ ಏನಾಗುತ್ತದೆ? ಅಸಲಿಗೆ ಸಿನಿಮಾದಲ್ಲಿ ಏನಿದೆ ಎಂಬುದು ಸಂಪೂರ್ಣ ನೋಡಿದ ಬಳಿಕವೇ ಸಿಗಲಿದೆ. ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.

ಇದನ್ನೂ ಓದಿ: ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್

‘ಮಾರೀಸನ್’ ಸಿನಿಮಾದಲ್ಲಿ ಹಲವು ಟ್ವಿಸ್ಟ್​ಗಳು ಇವೆ. ಆ ಟ್ವಿಸ್ಟ್​ಗಳನ್ನು ನೀವು ಊಹಿಸಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಚಿತ್ರವನ್ನು ಇಷ್ಟಪಡುವವರಿಗೆ ಈ ಚಿತ್ರ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.