AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಟನ ಜೊತೆ ಸಂಬಂಧ; ವಿಚ್ಛೇದನಕ್ಕೆ ಕಾರಣವಾಗಿದ್ದು ಫಾತಿಮಾ?

ಬಾಲಿವುಡ್​ನ ಫಾತಿಮಾ ಸನಾ ಶೇಖ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಫಾತಿಮಾ ನಟಿಸುತ್ತಿದ್ದಾರೆ. ಅವರ ಹೆಸರು ಬಾಲಿವುಡ್​ನ ಸ್ಟಾರ್​ ಹೀರೋ ಜೊತೆ ಅವರು ಸಂಬಂಧ ಹೊಂದಿದ್ದರು. ಆ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಇದು ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ.

ಹಿರಿಯ ನಟನ ಜೊತೆ ಸಂಬಂಧ; ವಿಚ್ಛೇದನಕ್ಕೆ ಕಾರಣವಾಗಿದ್ದು ಫಾತಿಮಾ?
ಹಿರಿಯ ನಟನ ಜೊತೆ ಸಂಬಂಧ; ವಿಚ್ಛೇದನಕ್ಕೆ ಕಾರಣವಾಗಿದ್ದು ಫಾತಿಮಾ?
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 11, 2025 | 7:36 AM

Share

ಬಾಲಿವುಡ್​ನ ಫಾತಿಮಾ ಸನಾ ಶೇಖ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರ ಬಗ್ಗೆ ಹರಿದಾಡಿದ ದೊಡ್ಡ ಸುದ್ದಿ ಸಾಕಷ್ಟು ವಿಚಲಿತರನ್ನಾಗಿಸಿತ್ತು. ಆದರೆ, ಅವರು ಎದೆಗುಂದಲಿಲ್ಲ. ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಫಾತಿಮಾ ನಟಿಸುತ್ತಿದ್ದಾರೆ. ಹಾಗಾದರೆ ಅವರ ಬಗ್ಗೆ ಹುಟ್ಟಿಕೊಂಡ ವದಂತಿ ಏನು? ಅವರ ಹೆಸರು ತಳುಕು ಹಾಕಿಕೊಂಡಿದ್ದು ಯಾರ ಜೊತೆ ಆಗಿತ್ತು ಎಂಬುದನ್ನು ಅವರ ಜನ್ಮದಿನದಂದು (ಜನವರಿ 11) ನೋಡೋಣ ಬನ್ನಿ.

ಫಾತಿಮಾ ಅವರು ಬಣ್ಣದ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದು ‘ದಂಗಲ್’ ಸಿನಿಮಾ ಮೂಲಕ. ಈ ಚಿತ್ರ  ಅವರ ಬದುಕನ್ನೇ ಬದಲಿಸಿತು. ಅಲ್ಲದೆ, ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ದೊಡ್ಡ ವಿವಾದ ಹುಟ್ಟಿಕೊಳ್ಳಲು ಕಾರಣ ಆಗಿದ್ದು ಕೂಡ ಇದೇ ಸಿನಿಮಾ ಎನ್ನಬಹುದು. ಅವರ ಹೆಸರು ಆಮಿರ್ ಖಾನ್ ಜೊತೆ ತಳುಕು ಹಾಕಿಕೊಂಡಿತು. ಆಮಿರ್ ಖಾನ್ ಹಾಗೂ ಫಾತಿಮಾ ಡೇಟ್ ಮಾಡುತ್ತಿದ್ದಾರೆ ಎನ್ನುವ ವರದಿಗಳು ಹರಿದಾಡಿದವು.

ಕಾಕತಾಳೀಯ ಎಂಬಂತೆ ಕೆಲ ವರ್ಷಗಳ ಹಿಂದೆ ಆಮಿರ್ ಖಾನ್ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್​​ಗೆ ವಿಚ್ಛೇದನ ನೀಡಿದರು. ಈ ವಿಚ್ಛೇದನಕ್ಕೆ ಆಮಿರ್ ಹಾಗೂ ಫಾತಿಮಾ ನಡುವಿನ ಆಪ್ತತೆಯೇ ಕಾರಣ ಎಂದು ಕೂಡ ವರದಿ ಆಯಿತು. ಆದರೆ, ಫಾತಿಮಾ ಇದನ್ನು ಒಪ್ಪಿಕೊಂಡಿಲ್ಲ. ಇವರ ನಡುವಿನ ಸಂಬಂಧ ಸಾಕಷ್ಟು ಚರ್ಚೆ ಆಯಿತು. 60ನೇ ವಯಸ್ಸಲ್ಲಿ ಆಮಿರ್ ಖಾನ್ ಅವರು ಫಾತಿಮಾನ ಮದುವೆ ಆಗಲು ಹೇಗೆ ಸಾಧ್ಯ ಎನ್ನುವ ಚರ್ಚೆಗಳು ಹುಟ್ಟಿಕೊಂಡವು.

ಆಮಿರ್ ಖಾನ್ ಅವರಿಗೆ ಈಗ 60 ವರ್ಷ ತುಂಬುತ್ತಾ ಬಂದಿದೆ. ಇನ್ನು ಫಾತಿಮಾಗೆ 32 ವರ್ಷ. ವಯಸ್ಸಿನ ಅಂತರ ನೋಡುವುದಾದರೆ ಫಾತಿಮಾ ಅವರು ಆಮಿರ್​ ಮಗಳ ವಯಸ್ಸಿನವರು. ಹೀಗಾಗಿ, ಇದನ್ನು ಕೂಡ ಅನೇಕರು ಟೀಕೆ ಮಾಡಿದ್ದರು.

ಇದನ್ನೂ ಓದಿ: ಮದ್ಯ, ದೂಮಪಾನದ ವ್ಯಸನಿಯಾಗಿದ್ದ ಆಮಿರ್ ಖಾನ್; ಆ ಪ್ರೀತಿ ಎಲ್ಲವನ್ನೂ ಬದಲಿಸಿತು

ಈಗಾಗಲೇ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಬೇರೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆಮಿರ್ ಖಾನ್ ಕೂಡ ಬೇರೆ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಹೀಗಾಗಿ, ಅವರ ಬಗ್ಗೆ ಹರಡಿದ್ದು ಕೇವಲ ವದಂತಿ ಎಂಬುದು ಸ್ಪಷ್ಟವಾಗಿದೆ. ಸದ್ಯ ಆಮಿರ್ ಖಾನ್ ಅವರು ‘ತಾರೇ ಜಮೀನ್​ ಪರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!