ಜೆನಿಲಿಯಾ ಡಿಸೋಜಾ ಮುಂಬೈನಿಂದ ಹೈದರಾಬಾದ್​ಗೆ ಬಂದಿದ್ದು ಯಾವ ನಟನಿಗಾಗಿ?

ಮೂವೀ ಆರ್ಟಿಸ್ಟ್​ ಅಸೋಸಿಯೇಷನ್ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಜೆನಿಲಿಯಾ ಡಿಸೋಜಾ ಅವರಿಗೆ ಕೇಳಲಾಯಿತು. ಅದಕ್ಕೆ ಅವರು ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ.

ಜೆನಿಲಿಯಾ ಡಿಸೋಜಾ ಮುಂಬೈನಿಂದ ಹೈದರಾಬಾದ್​ಗೆ ಬಂದಿದ್ದು ಯಾವ ನಟನಿಗಾಗಿ?
ಜೆನಿಲಿಯಾ ಡಿಸೋಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Oct 10, 2021 | 3:50 PM

ನಟಿ ಜೆನಿಲಿಯಾ ಡಿಸೋಜಾ ಅವರಿಗೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಅವರ ನಟನೆ ಮತ್ತು ಸೌಂದರ್ಯಕ್ಕೆ ಕೋಟ್ಯಂತರ ಫ್ಯಾನ್ಸ್​ ಫಿದಾ ಆಗಿದ್ದಾರೆ. ಸದ್ಯ ಪತಿ ರಿತೇಶ್​ ದೇಶಮುಖ್​ ಜೊತೆಗೆ ಜೆನಿಲಿಯಾ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಈ ನಡುವೆ ಅವರು ಮುಂಬೈನಿಂದ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದ್ದಾರೆ. ತೆಲುಗು ಚಿತ್ರರಂಗದ ಕಲಾವಿದರ ಸಂಘಕ್ಕೆ (ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​) ಚುನಾವಣೆ ನಡೆದಿದೆ. ಈ ಸಂಘದಲ್ಲಿ ಜೆನಿಲಿಯಾ ಕೂಡ ಸದಸ್ಯತ್ವ ಹೊಂದಿದ್ದು, ತಮ್ಮ ಮತ ಚಲಾಯಿಸಲು ಅವರು ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಬಹುದಿನಗಳ ಬಳಿಕ ಅವರನ್ನು ಕಂಡ ತೆಲುಗು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಮೂವೀ ಆರ್ಟಿಸ್ಟ್​ ಅಸೋಸಿಯೇಷನ್ ಚುನಾವಣೆಯಲ್ಲಿ ಪ್ರಕಾಶ್​ ರಾಜ್​ ಮತ್ತು ವಿಷ್ಣು ಮಂಚು ಅವರು ಮುಖಾಮುಖಿಯಾಗಿ ಸ್ಪರ್ಧಿಸಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ಇಬ್ಬರೂ ಹಣಾಹಣಿ ನಡೆಸಿದ್ದಾರೆ. ಹಾಗಾದರೆ ಜೆನಿಲಿಯಾ ಅವರು ಇವರಿಬ್ಬರ ಪೈಕಿ ಯಾರಿಗೆ ವೋಟ್​ ಮಾಡಿದ್ದಾರೆ? ಈ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಿದೆ. ಸದ್ಯಕ್ಕಂತೂ ಟಾಲಿವುಡ್​ನಲ್ಲಿ ಜೆನಿಲಿಯಾ ಸಕ್ರಿಯವಾಗಿಲ್ಲ. ಹಾಗಿದ್ದರೂ ಕೂಡ ಅವರು ಸಮಯ ಮಾಡಿಕೊಂಡು ಮತ ಹಾಕಲು ಬಂದಿದ್ದಾರೆ. ವಿಷ್ಣು ಮಂಚು ಜೊತೆ ಜೆನಿಲಿಯಾ ಅವರು ‘ಧಿ’ ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ ವಿಷ್ಣು ಮಂಚುಗೆ ಅವರು ವೋಟ್​ ಹಾಕಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಜೆನಿಲಿಯಾಗೆ ಕೇಳಲಾಯಿತು. ಅದಕ್ಕೆ ಅವರು ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ. ‘ತೆಲುಗು ಚಿತ್ರರಂಗ ನನಗೆ ಆಪ್ತವಾಗಿದೆ. ಇಲ್ಲಿನ ಜನರು ನನಗೆ ಕುಟುಂಬದ ಸದಸ್ಯರಿದ್ದಂತೆ. ಉತ್ತಮ ವ್ಯಕ್ತಿಯೇ ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಶೀಘ್ರದಲ್ಲೇ ನಾವೆಲ್ಲರೂ ಅಧ್ಯಕ್ಷರ ಸ್ಥಾನದಲ್ಲಿ ಆಕರ್ಷಕ ವ್ಯಕ್ತಿಯನ್ನು ನೋಡುತ್ತೇವೆ’ ಎಂದು ಹೇಳಿದ್ದಾರೆ. ಅವರು ಯಾರ ಬಗ್ಗೆ ಈ ಮಾತು ಹೇಳಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಸತ್ಯಂ, ಸೈ, ಹ್ಯಾಪಿ, ಬೊಮ್ಮರಿಲ್ಲು ಸೇರಿದಂತೆ ತೆಲುಗಿನ ಅನೇಕ ಸಿನಿಮಾಗಳಲ್ಲಿ ಜೆನಿಲಿಯಾ ನಟಿಸಿದ್ದಾರೆ. ಕನ್ನಡದ ‘ಸತ್ಯ ಇನ್​ ಲವ್​’ ಚಿತ್ರದಲ್ಲಿ ಶಿವರಾಜ್​ಕುಮಾರ್​ಗೆ ಅವರು ಜೋಡಿ ಆಗಿದ್ದರು. ಹಾಗಾಗಿ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಪ್ರೀತಿ ಇದೆ.

ಇದನ್ನೂ ಓದಿ:

ಚುನಾವಣೆಗೆ ನಿಂತ ಪ್ರಕಾಶ್​ ರಾಜ್​; ಮತಗಟ್ಟೆಗೆ ಬಂದು ವೋಟ್​ ಮಾಡಿದ ಪವನ್​ ಕಲ್ಯಾಣ್​, ಚಿರಂಜೀವಿ

ಈ ಅಸಭ್ಯ ಆಂಟಿ ತುಂಬಾನೇ ಓವರ್​ ಆ್ಯಕ್ಟಿಂಗ್​ ಎಂದ ಫ್ಯಾನ್​ಗೆ ಜೆನಿಲಿಯಾ ಡಿಸೋಜಾ ಕೊಟ್ರು ಸೈಲೆಂಟ್​ ಉತ್ತರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ