Angelina Jolie: ಪಾಕಿಸ್ತಾನದ ಪ್ರಜೆಗಳಿಗೆ ಸಹಾಯ ಮಾಡಲು ಬಂದ ಏಂಜಲೀನಾ ಜೋಲಿ; ಜನರ ಅಭಿಪ್ರಾಯ ಏನು?

Angelina Jolie Visits Pakistan: ಪಾಕಿಸ್ತಾನಕ್ಕೆ​ ಭೇಟಿ ನೀಡಿರುವ ಏಂಜಲೀನಾ ಜೋಲಿ ಅವರು ಅಲ್ಲಿನ ಜನರ ಜೊತೆ ಮಾತುಕತೆ ನಡೆಸಿದ್ದಾರೆ. ಸದ್ಯದ ಸ್ಥಿತಿಗತಿ ಹೇಗಿದೆ ಎಂಬುದನ್ನು ಅವರು ಪರಿಶೀಲಿಸಿದ್ದಾರೆ.

Angelina Jolie: ಪಾಕಿಸ್ತಾನದ ಪ್ರಜೆಗಳಿಗೆ ಸಹಾಯ ಮಾಡಲು ಬಂದ ಏಂಜಲೀನಾ ಜೋಲಿ; ಜನರ ಅಭಿಪ್ರಾಯ ಏನು?
ಏಂಜಲೀನಾ ಜೋಲಿ
Follow us
TV9 Web
| Updated By: ಮದನ್​ ಕುಮಾರ್​

Updated on:Sep 21, 2022 | 10:30 AM

ನಟಿ ಏಂಜಲೀನಾ ಜೋಲಿ (Angelina Jolie) ಅವರು ಜಗತ್ತಿನಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಅವರ ನಟನೆ ಕಂಡ ಹಾಲಿವುಡ್​ (Hollywood) ಸಿನಿಮಾ ಪ್ರೇಕ್ಷಕರು ವಾವ್​ ಎಂದಿದ್ದಾರೆ. ಬಣ್ಣದ ಲೋಕದಲ್ಲಿ ಮೂರು ದಶಕಗಳ ಅನುಭವ ಅವರಿಗೆ ಇದೆ. ಈಗ ಏಂಜಲೀನಾ ಜೋಲಿ ಅವರು ತಮ್ಮೆಲ್ಲ ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ, ನೇರವಾಗಿ ಪಾಕಿಸ್ತಾನಕ್ಕೆ (Pakistan) ಬಂದಿದ್ದಾರೆ. ಪಾಕ್​ ಪ್ರಜೆಗಳನ್ನು ಭೇಟಿ ಮಾಡಿ, ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪಾಕಿಸ್ತಾನದ ಜನರನ್ನು ಭೇಟಿ ಮಾಡಿರುವ ಏಂಜಲೀನಾ ಜೋಲಿ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನಟಿಯ ಈ ಕಾರ್ಯಕ್ಕೆ ನೆಟ್ಟಿಗರಿಂದ ಬಗೆಬಗೆಯ ಅಭಿಪ್ರಾಯ ವ್ಯಕ್ತವಾಗಿದೆ.

ಅಷ್ಟಕ್ಕೂ ಏಂಜಲೀನಾ ಜೋಲಿ ಅವರು ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಪಾಕಿಸ್ತಾನಕ್ಕೆ ಬಂದಿದ್ದು ಯಾಕೆ? ಮಾನವೀಯತೆ ಕಾರಣದಿಂದ. ಹೌದು, ಈ ವರ್ಷ ಪಾಕ್​ನಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಅಲ್ಲಿನ ಜನಜೀವನ ಅಸ್ತವ್ಯಸ್ತ ಆಗಿದೆ. ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಅನೇಕರ ಜೀವಕ್ಕೆ ಹಾನಿ ಆಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾಯಿಲೆಗಳು ಹರಡಿವೆ. ಆದ್ದರಿಂದ ಸಂಕಷ್ಟದಲ್ಲಿ ಇರುವ ಪಾಕ್​ ಪ್ರಜೆಗಳಿಗೆ ನೆರವು ನೀಡಲು ಏಂಜಲೀನಾ ಜೋಲಿ ಅವರು ಅಮೆರಿಕದಿಂದ ಪಾಕಿಸ್ತಾನಕ್ಕೆ ಬಂದಿದ್ದಾರೆ.

ಜಗತ್ತಿನಾದ್ಯಂತ ಇರುವ ನಿರಾಶ್ರಿತರ ಸಹಾಯಕ್ಕಾಗಿ ವಿಶ್ವಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಪ್ರತಿನಿಧಿಯಾಗಿ ಏಂಜಲೀನಾ ಜೋಲಿ ಅವರು ಕೆಲಸ ಮಾಡುತ್ತಿದ್ದಾರೆ. 2011ರಿಂದಲೂ ಅವರು ಈ ಕಾರ್ಯ ಮಾಡುತ್ತಿದ್ದಾರೆ. ಅದರ ಅಂಗವಾಗಿ ಅವರೀಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯ ಸಂದರ್ಭದ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ
Image
Emmy Awards 2022: ಯಾರಿಗೆಲ್ಲ ಒಲಿದಿದೆ ಎಮಿ ಅವಾರ್ಡ್ಸ್? ಇಲ್ಲಿದೆ ಪ್ರಮುಖರ​ ಲಿಸ್ಟ್​
Image
Avatar: ಮತ್ತೆ ರಿಲೀಸ್​ ಆಗುತ್ತಿದೆ ‘ಅವತಾರ್​’ ಸಿನಿಮಾ; ಈ ಬಾರಿ 2 ವಾರ ಮಾತ್ರ ಪ್ರದರ್ಶನ
Image
ವಿಮಾನದಲ್ಲಿ ಪಿಟ್ ಜೊತೆ ನಡೆದ ಜಗಳದಲ್ಲಿ ಆ್ಯಂಜಲೀನಾ ಜೋಲೀ ಅನುಭವಿಸಿದ ಗಾಯಗಳ ಹೊಸ ಫೋಟೋಗಳು ಬಹಿರಂಗಗೊಂಡಿವೆ
Image
Madonna: ಬರ್ತ್​ಡೇ ಖುಷಿಯಲ್ಲಿ ಗೆಳತಿಯರಿಗೆ ಫ್ರೆಂಚ್​ ಕಿಸ್​ ನೀಡಿದ ಗಾಯಕಿ ಮಡೋನಾ; ವಿಡಿಯೋ ವೈರಲ್​

ಪ್ರವಾಹ ಪೀಡಿತ ಪಾಕ್​ ಪ್ರದೇಶಗಳಿಗೆ ಭೇಟಿ ನೀಡಿರುವ ಏಂಜಲೀನಾ ಜೋಲಿ ಅವರು ಅಲ್ಲಿನ ಜನರ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರವಾಹ ಸಂತ್ರಸ್ತರ ಸ್ಥಿತಿಗತಿ ಹೇಗಿದೆ ಎಂಬುದನ್ನು ಪರಿಶೀಲಿಸಿದ್ದಾರೆ. ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಹೃದಯ ಶ್ರೀಮಂತ ಮಹಿಳೆ’, ‘ನಿಮ್ಮ ಒಳ್ಳೆಯತನಕ್ಕೆ ಧನ್ಯವಾದ’ ಎಂದೆಲ್ಲ ಜನರು ಕಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ, ಏಂಜಲೀನಾ ಜೋಲಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಇದೇ ಮೊದಲೇನಲ್ಲ. 2005ರಲ್ಲಿ ತೀವ್ರ ಭೂಕಂಪ ಆಗಿದ್ದಾಗ ಹಾಗೂ 2010ರಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆದಾಗ ಪಾಕ್​ಗೆ ಬಂದು ಅವರು ನೆರವು ನೀಡಿದ್ದರು. ಮಾನವೀಯ ಕಾರ್ಯಕ್ಕಾಗಿ ಅವರು ಅನೇಕ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದಾರೆ. ಅವರ ಕೆಲಸವನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:30 am, Wed, 21 September 22

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ