AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವತಾರ್: ಫೈರ್ ಆಂಡ್ ಆಶ್’ ಎರಡನೇ ಟ್ರೈಲರ್ ಬಿಡುಗಡೆ

Avatar: Fire and Ash trailer: ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಈ ವರೆಗೆ ಬಿಡುಗಡೆ ಆಗಿರುವ ಟ್ರೈಲರ್​​ನಿಂದ ತಿಳಿದು ಬರುತ್ತಿರುವುದೆಂದರೆ ಮೂರನೇ ಸಿನಿಮಾನಲ್ಲಿ ನಾವಿ ಜನಗಳ ನಡುವೆ ಅಂತರ್ಯುದ್ಧ ಶುರುವಾಗಿದೆ. ನಾವಿ ಜನರೇ ಪರಸ್ಪರರ ಮೇಲೆ ಕತ್ತಿ ಮಸೆದು ಯುದ್ಧಕ್ಕೆ ನಿಂತಿದ್ದಾರೆ. ನಾವಿ ಜನರ ಅಂತರ್ಯುದ್ಧದ ಲಾಭವನ್ನು ಮನಷ್ಯರು ಪಡೆಯುತ್ತಿದ್ದಾರೆ.

‘ಅವತಾರ್: ಫೈರ್ ಆಂಡ್ ಆಶ್’ ಎರಡನೇ ಟ್ರೈಲರ್ ಬಿಡುಗಡೆ
Avatar
ಮಂಜುನಾಥ ಸಿ.
|

Updated on: Sep 26, 2025 | 3:33 PM

Share

‘ಅವತಾರ್’ ಸಿನಿಮಾ ಸರಣಿಯ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಇದೇ ಸಿನಿಮಾ ಸರಣಿಯ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೂರನೇ ಸರಣಿಗೆ ‘ಅವತಾರ್: ಫೈರ್ ಆಂಡ್ ಆಶ್’ ಎಂದು ಹೆಸರಿಡಲಾಗಿದೆ. 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸ್​​ನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತ್ತು. ಅದಾದ 13 ವರ್ಷಗಳ ಬಳಿಕ 2022 ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಹಿಟ್ ಆಯ್ತು. ಈಗ ಅದೇ ಸಿನಿಮಾ ಸರಣಿಯ ಮತ್ತೊಂದು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಸಿನಿಮಾದ ಎರಡನೇ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

‘ಅವತಾರ್’ ಸಿನಿಮಾದ ಕತೆ ನಡೆಯುವುದು ಪ್ಯಾಂಡೋರಾ ಹೆಸರಿನ ಪ್ರದೇಶದಲ್ಲಿ. ಅಲ್ಲಿನ ವಾಸಿಸುವ ನೀಲಿ ಬಣ್ಣದ ನಾವಿ ಜನ, ಪ್ರಕೃತಿಯನ್ನು ದೇವರೆಂದು ಪೂಜಿಸುವವರು, ಆಧುನಿಕತೆಯಿಂದ ದೂರ ಪ್ರಕೃತಿಯ ನಡುವೆ ಅವರದ್ದೇ ಆಚರಣೆಗಳ ನಡುವೆ ಬದುಕುತ್ತಿರುವವರು. ಆದರೆ ಮನುಷ್ಯರು ತಮ್ಮ ಆಧುನಿಕ ಯಂತ್ರಗಳನ್ನು ಬಳಸಿ ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದಾಗ ನಾವಿ ಜನ ಮನುಷ್ಯರ ವಿರುದ್ಧ ಹೋರಾಟ ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಈ ವರೆಗಿನ ಎರಡು ಸಿನಿಮಾಗಳೂ ಇದೇ ಮಾದರಿಯ ಕತೆಯನ್ನು ಹೊಂದಿದ್ದವು. ಮೊದಲ ಸಿನಿಮಾನಲ್ಲಿ ಯುದ್ಧ ಅರಣ್ಯದಲ್ಲಿ ನಡೆದರೆ ಎರಡನೇ ಸಿನಿಮಾನಲ್ಲಿ ಯುದ್ಧ ನಡೆಯುವುದು ನೀರಿನಲ್ಲಿ. ಈಗ ಮೂರನೇ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಈ ವರೆಗೆ ಬಿಡುಗಡೆ ಆಗಿರುವ ಟ್ರೈಲರ್​​ನಿಂದ ತಿಳಿದು ಬರುತ್ತಿರುವುದೆಂದರೆ ಮೂರನೇ ಸಿನಿಮಾನಲ್ಲಿ ನಾವಿ ಜನಗಳ ನಡುವೆ ಅಂತರ್ಯುದ್ಧ ಶುರುವಾಗಿದೆ. ನಾವಿ ಜನರೇ ಪರಸ್ಪರರ ಮೇಲೆ ಕತ್ತಿ ಮಸೆದು ಯುದ್ಧಕ್ಕೆ ನಿಂತಿದ್ದಾರೆ. ನಾವಿ ಜನರ ಅಂತರ್ಯುದ್ಧದ ಲಾಭವನ್ನು ಮನಷ್ಯರು ಪಡೆಯುತ್ತಿದ್ದಾರೆ.

ಇದನ್ನೂ ಓದಿ:‘ಅವತಾರ್’ ಟ್ರೈಲರ್: ಪ್ಯಾಂಡೋರಾದಲ್ಲಿ ಅಂತರ್ಯುದ್ಧ

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಿಂದ ತಿಳಿದು ಬರುತ್ತಿರುವುದೆಂದರೆ ನಾವಿಯ ಒಂದು ಗುಂಪು ಬೆಂಕಿಯಿಂದಾಗಿ ತಮ್ಮ ಅರಣ್ಯವನ್ನು, ಮನೆಯನ್ನು ಕಳೆದುಕೊಂಡಿದೆ. ಆ ಜನ ಪ್ರಕೃತಿ ದೇವತೆ ಇವಾ ಮೇಲೆ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆ ಜನ ಈಗ ಇತರೆ ನಾವಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಅವತಾರ್’ ಸಿನಿಮಾ ಸರಣಿಯ ನಾಯಕ ಜೆಕ್ ಸೂಲಿ ಹಾಗೂ ಅವನ ಗುಂಪಿಗೂ ಬೆಂಕಿಯಿಂದ ಬಾಧಿತರಾದ ನಾವಿಗಳ ಗುಂಪಿಗೂ ಜೋರು ಯುದ್ಧ ನಡೆದಿದೆ. ಬೆಂಕಿಯಿಂದ ಬಾಧಿತರಾದವರು ಮನುಷ್ಯರ ಜೊತೆಗೆ ಕೈ ಜೋಡಿಸಿದ್ದಾರೆ. ಭೀಕರ ಯುದ್ಧದಲ್ಲಿ ವಿಜಯ ಯಾರ ಪಾಲು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕಿದೆ.

‘ಅವತಾರ್’ ಸಿನಿಮಾ ಸರಣಿಯನ್ನು ಜೇಮ್ಸ್ ಕ್ಯಾಮರನ್ ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ‘ಟೈಟ್ಯಾನಿಕ್’, ‘ಟರ್ಮಿನೇಟರ್’, ‘ಏಲಿಯನ್ಸ್’, ‘ಟ್ರು ಲೈಸ್’, ‘ದಿ ಅಭೀಸ್’, ‘ಫಿರ್ಹಾನಾ’ ಇನ್ನೂ ಹಲವು ಆಲ್​​ಟೈಮ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ‘ಅವತಾರ್’ ಸಿನಿಮಾ ಸರಣಿಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು