ಗಳಿಕೆಯಲ್ಲಿ ದಾಖಲೆ ಬರೆದ ‘ಡೆಡ್​ಪೂಲ್ ಆಂಡ್ ವೋಲ್ವರಿನ್’, ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?

ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್​ನ ಬಿಗ್​ಬಜೆಟ್ ಸಿನಿಮಾ ‘ಡೆಡ್​ಪೂಲ್ ಮತ್ತು ವೋಲ್ವರಿನ್’ ಕೇವಲ ಮೂರು ದಿನಗಳಲ್ಲಿ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಎಷ್ಟೆಂದು ಊಹಿಸಬಲ್ಲಿರಾ?

ಗಳಿಕೆಯಲ್ಲಿ ದಾಖಲೆ ಬರೆದ ‘ಡೆಡ್​ಪೂಲ್ ಆಂಡ್ ವೋಲ್ವರಿನ್’, ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?
Follow us
ಮಂಜುನಾಥ ಸಿ.
|

Updated on: Jul 30, 2024 | 2:50 PM

ಭಾರತದ ಸಿನಿಮಾಗಳ ಪಾಲಿಗೆ 1000 ಕೋಟಿ ಕಲೆಕ್ಷನ್ ಮಾಡುವುದು ಸಿನಿಮಾದ ಭಾರಿ ಗೆಲುವು, ‘ದಬಂಗ್’, ‘ಬಾಹುಬಲಿ 2’ ಅಂಥಹಾ ಸಿನಿಮಾಗಳು ಎರಡು ಸಾವಿರ ಕೋಟಿ ಕಲೆಕ್ಷನ್ ಮಾಡಿವೆ. ಆದರೆ ಹಾಲಿವುಡ್ ಸಿನಿಮಾಗಳಿಗೆ ಎರಡು ಸಾವಿರ ಕೋಟಿ, ಒಂದು ಸಾವಿರ ಕೋಟಿ ಕಲೆಕ್ಷನ್ ಕೇವಲ ಒಂದು ವಾರದ ಕಲೆಕ್ಷನ್ ಅಷ್ಟೆ. ಇತ್ತೀಚೆಗೆ ಬಿಡುಗಡೆ ಆದ ಮಾರ್ವೆಲ್ ಸ್ಟುಡಿಯೋಸ್​ನ ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ಬಿಡುಗಡೆ ಆದ ಕೇವಲ ಮೂರು ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರ ಕೋಟಿ ಹಣ ಗಳಿಕೆ ಮಾಡಿದೆ!

ಜುಲೈ 26ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದ ಮೂರೇ ದಿನದಲ್ಲಿ ಅಂದರೆ ಜುಲೈ 29ರ ವೇಳೆಗೆ ಈ ಸಿನಿಮಾ ವಿಶ್ವದಾದ್ಯಂತ 450 ಮಿಲಿಯನ್ ಡಾಲರ್ ಅಂದರೆ ಸುಮಾರು 4 ಸಾವಿರ ಕೋಟಿ ಮತ್ತು ಅಮೆರಿಕದಲ್ಲಿ 220 ಮಿಲಿಯನ್ ಡಾಲರ್ ಎಂದರೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಹಾಲಿವುಡ್ ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ.

‘ಡೆಡ್​ಪೂಲ್’ ಸರಣಿಯ ಮೂರನೇ ಸಿನಿಮಾ ಇದಾಗಿದ್ದು ಈವರೆಗೆ ಇನ್ಯಾವ ‘ಡೆಡ್​ಪೂಲ್’ ಸಿನಿಮಾ ಸಹ ಗಳಿಸದಷ್ಟು ಹಣವನ್ನು ಕೇವಲ ಮೂರೇ ದಿನಕ್ಕೆ ಗಳಿಸಿಕೊಂಡಿದೆ. ಆ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿದೆ ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ. ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಸಿನಿಮಾಗಳಲ್ಲಿ ಕೇವಲ ಮೂರೇ ದಿನಕ್ಕೆ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೂ ಸಹ ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ಪಾತ್ರವಾಗಿದೆ.

ಇದನ್ನೂ ಓದಿ:ಹಾಲಿವುಡ್​ಗೆ ಹಾರುವ ಕನಸು ಕಾಣುತ್ತಿರುವ ‘ತೋಬಾ ತೋಬಾ’ ನಟಿ

‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾದಲ್ಲಿ ಎಂಸಿಯುನ ಎರಡು ಪವರ್​ಫುಲ್ ಪಾತ್ರಗಳು ಒಟ್ಟಿಗೆ ಬಂದಿವೆ. ಡೆಡ್​ಪೂಲ್ ಮತ್ತು ಎಕ್ಸ್​ಮೆನ್ ಯೂನಿವರ್ಸ್​ನ ವೋಲ್ವರಿನ್ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಎರಡೂ ಪಾತ್ರಗಳಿಗೂ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದು, ಎರಡೂ ಪಾತ್ರಗಳ ಅಭಿಮಾನಿಗಳು ಮುಗಿಬಿದ್ದು ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ವೀಕ್ಷಿಸಿದ್ದಾರೆ. ಈ ಸಿನಿಮಾವನ್ನು ಶಾನ್ ಲೆವಿ ನಿರ್ದೇಶನ ಮಾಡಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಬಿಡುಗಡೆ ಆಗಲಿದೆ ಆದರೆ ರೆಂಟಲ್ ಮಾದರಿಯಲ್ಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ