ಸಿನಿಮಾ ಬಿಡುಗಡೆಗೆ ಎಂಟು ತಿಂಗಳು, ಈಗಲೇ 90,000ಕ್ಕೆ ಟಿಕೆಟ್ ಸೋಲ್ಡ್ ಔಟ್
Dune 3 movie: ವಿಶ್ವ ಸಿನೆಮಾ ರಂಗದಲ್ಲಿ ಅತ್ಯಂತ ಯಶಸ್ವಿ ಸೈನ್ಸ್ ಫಿಕ್ಷನ್ ಫ್ರಾಂಚೈಸಿಗಳಲ್ಲಿ ಒಂದಾದ ‘ಡ್ಯೂನ್’ ಸರಣಿಯ ಮೂರನೇ ಭಾಗವು ಈ ವರ್ಷದ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಜಗತ್ತಿನಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ. ಸಿನಿಮಾ ಬಿಡುಗಡೆ ಆಗುವ ಮೂರು ತಿಂಗಳ ಮೊದಲೇ ಸಿನಿಮಾದ ಟಿಕೆಟ್‌ಗಳು ಮಾರಾಟ ಆಗಿವೆ.

ಸಿನಿಮಾದ (Cinema) ಬಿಡುಗಡೆ ಆಗುವ ಕೆಲ ದಿನಗಳ ಮುಂಚೆ ಕೆಲವೊಮ್ಮೆ ಕೆಲವು ಗಂಟೆಗಳ ಮುಂಚೆ ಮಾತ್ರ ಸಿನಿಮಾದ ಅಡ್ವಾನ್ಸ್ ಬುಕಿಂಗ್ಗಳು ಶುರು ಆಗುತ್ತವೆ. ಆದರೆ ಇಲ್ಲೊಂದು ಸಿನಿಮಾ ಬಿಡುಗಡೆಗೆ ಎಂಟು ತಿಂಗಳ ಮುಂಚೆಯೇ ಟಿಕೆಟ್‌ಗಳು ಮಾರಾಟ ಆಗಿವೆ, ಅದೂ 90 ಸಾವಿರ ರೂಪಾಯಿಗೆ ಮಾರಾಟ ಆಗಿವೆ. ವಿಶ್ವ ಸಿನೆಮಾ ರಂಗದಲ್ಲಿ ಅತ್ಯಂತ ಯಶಸ್ವಿ ಸೈನ್ಸ್ ಫಿಕ್ಷನ್ ಫ್ರಾಂಚೈಸಿಗಳಲ್ಲಿ ಒಂದಾದ ‘ಡ್ಯೂನ್’ ಸರಣಿಯ ಮೂರನೇ ಭಾಗವು ಈ ವರ್ಷದ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಜಗತ್ತಿನಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ.
ಚಿತ್ರದ ಬಿಡುಗಡೆಗೆ ಸುಮಾರು 8 ತಿಂಗಳು ಇರುವಾಗಲೇ, ವಿತರಕರು ವಿಶ್ವದ ಕೆಲವು ಆಯ್ದ ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ಮುಂಗಡ ಬುಕಿಂಗ್ ಅನ್ನು ಪ್ರಾರಂಭಿಸಿದ್ದರು. ಅಚ್ಚರಿಯೆಂದರೆ, ಬುಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಡಿಮ್ಯಾಂಡ್ ಹೆಚ್ಚಾದಂತೆ, ಟಿಕೆಟ್ ಖರೀದಿಸಿದವರು ಅವುಗಳನ್ನು ‘ಇ-ಬೇ’ ನಂತಹ ಖಾಸಗಿ ಹರಾಜು ವೆಬ್‌ಸೈಟ್‌ಗಳಲ್ಲಿ ಮರುಮಾರಾಟಕ್ಕೆ ಇಟ್ಟಿದ್ದಾರೆ. ವರದಿಗಳ ಪ್ರಕಾರ, ಕೇವಲ ಒಂದು ಟಿಕೆಟ್ ಬರೋಬ್ಬರಿ 999 ಡಾಲರ್‌ಗೆ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹83,000 ರಿಂದ ₹90,000) ಮಾರಾಟವಾಗಿದೆ. ಇದು ಸಿನೆಮಾ ಪ್ರೇಮಿಗಳಲ್ಲಿ ಈ ಚಿತ್ರದ ಬಗ್ಗೆ ಇರುವ ವಿಪರೀತ ಕ್ರೇಜ್ ಅನ್ನು ತೋರಿಸುತ್ತದೆ.
ಇದನ್ನೂ ಓದಿ:‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್ನ ಸ್ಟಾರ್ ನಟನ ಸಿನಿಮಾ
ಭಾರತೀಯ ಮಾರುಕಟ್ಟೆಯಲ್ಲೂ ‘ಡ್ಯೂನ್’ ಸರಣಿಗೆ ಭರ್ಜರಿ ಬೇಡಿಕೆಯಿದೆ. ಈ ಹಿಂದೆ ತೆಲುಗಿನ ‘ಕಲ್ಕಿ 2898 AD‘ ಚಿತ್ರದ ಪೋಸ್ಟರ್‌ಗಳು ಮತ್ತು ಮರುಭೂಮಿಯ ದೃಶ್ಯಗಳು ‘ಡ್ಯೂನ್’ ಚಿತ್ರಕ್ಕೆ ಹೋಲಿಕೆಯಾಗುತ್ತವೆ ಎಂಬ ಚರ್ಚೆಗಳು ನಡೆದಿದ್ದವು. ಇದು ಭಾರತೀಯ ಪ್ರೇಕ್ಷಕರಿಗೂ ಈ ಹಾಲಿವುಡ್ ಸರಣಿಯ ಪರಿಚಯವನ್ನು ಹೆಚ್ಚಿಸಿದೆ. ಕೇವಲ ಸಿನೆಮಾ ಮಾತ್ರವಲ್ಲದೆ, ಈ ಸರಣಿಯ ‘ಡ್ಯೂನ್: ಪ್ರೊಫೆಸಿ’ ಕೂಡ ಬಿಡುಗಡೆ ಆಗಿದೆ. ವೆಬ್ ಸರಣಿಯಲ್ಲಿ ಭಾರತೀಯ ನಟಿ ಟಬು ಸಹ ನಟಿಸಿದ್ದಾರೆ.
‘ಡ್ಯೂನ್’ ಸಿನಿಮಾದ ಮೂರನೇ ಸರಣಿ ಇದೀಗ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ಟೀಮಟಿ ಶಾಲೊಮೇಟ್, ಜೆಂಡೆಯಾ, ಜಾಸನ್ ಮವೋಮಾ ಇನ್ನೂ ಹಲವು ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾವನ್ನು ಡೆನ್ನಿಸ್ ವೆಲ್ಲಿನ್ಯುವಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Wed, 8 April 26




