ತಂದೆ ಆದ ಮೂರೇ ತಿಂಗಳಿಗೆ ಗರ್ಲ್ಫ್ರೆಂಡ್ನಿಂದ ದೂರ ಆದ 83 ವರ್ಷದ ಹೀರೋ ಅಲ್ ಪಚಿನೋ
ನೂರ್ ಅಲ್ಫಾಲ್ಲಾ ಹಾಗೂ ಅಲ್ ಪಚಿನೋ ಇಬ್ಬರೂ ಪರಸ್ಪರ ಒಪ್ಪಿ ಬೇರೆ ಆಗಿದ್ದಾರೆ. ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. 2022ರಿಂದ ಈಚೆಗೆ ಅಲ್ ಪಚಿನೋ ಮತ್ತು ನೂರ್ ಅಲ್ಫಾಲ್ಲಾ ಜೊತೆಯಾಗಿ ಸುತ್ತಾಡಲು ಆರಂಭಿಸಿದ್ದರು. ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ.
ಹಾಲಿವುಡ್ನ ನಟ ಅಲ್ ಪಚಿನೋ (Al Pacino) ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು 83ನೇ ವಯಸ್ಸಿಗೆ ತಂದೆ ಆಗಿದ್ದಾರೆ. ಗರ್ಲ್ಫ್ರೆಂಡ್ ನೂರ್ ಅಲ್ಫಾಲ್ಲಾ ಜೊತೆ ಅಲ್ ಪಚಿನೋ ಸುತ್ತಾಟ ನಡೆಸುತ್ತಿದ್ದರು. ಮೂರು ತಿಂಗಳ ಹಿಂದೆ ನೂರ್ ಅಲ್ಫಾಲ್ಲಾ ಗಂಡುಮಗುವಿಗೆ ಜನ್ಮನೀಡಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ ಎಂದು ವರದಿ ಆಗಿದೆ. ಸದ್ಯ ಈ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಮಗುವಿಗೆ ರೋಮನ್ ಪಚಿನೋ ಎಂದು ಹೆಸರು ಇಡಲಾಗಿದೆ.
ನೂರ್ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿತ್ತು. ಆ ಬಳಿಕ ಅಲ್ ಪಚಿನೋ ಅವರಿಗೆ ಒಂದು ಅನುಮಾನ ಮೂಡಿತ್ತು. ಮಗುವಿಗೆ ತಂದೆ ನಾನೇ ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು. ಹೀಗಾಗಿ ಮಗುವಿನ ಡಿಎನ್ಎ ಟೆಸ್ಟ್ ಮಾಡಿಸಿದ್ದರು. ಆ ಬಳಿಕ ಅಲ್ ಪಚಿನೋ ಅವರೇ ತಂದೆ ಎಂಬುದು ಖಚಿತವಾಯಿತು. ಈಗ ಮೂರು ತಿಂಗಳ ಬಳಿಕ ಬ್ರೇಕಪ್ ವಿಚಾರ ಹೊರ ಬಿದ್ದಿದೆ. ನೂರ್ ಅಲ್ಫಾಲ್ಲಾಗೆ ಈಗಿನ್ನೂ 29 ವರ್ಷ ವಯಸ್ಸು ಅನ್ನೋದು ಅಚ್ಚರಿಯ ವಿಚಾರ.
ನೂರ್ ಅಲ್ಫಾಲ್ಲಾ ಹಾಗೂ ಅಲ್ ಪಚಿನೋ ಇಬ್ಬರೂ ಪರಸ್ಪರ ಒಪ್ಪಿ ಬೇರೆ ಆಗಿದ್ದಾರೆ. ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. 2022ರಿಂದ ಈಚೆಗೆ ಅಲ್ ಪಚಿನೋ ಮತ್ತು ನೂರ್ ಅಲ್ಫಾಲ್ಲಾ ಜೊತೆಯಾಗಿ ಸುತ್ತಾಡಲು ಆರಂಭಿಸಿದ್ದರು. ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ. ಆ ಬಳಿಕ ಇವರ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು. ಮಗುವಿಗೆ ನಾನು ತಂದೆ ಅಲ್ಲ ಎಂದು ಅಲ್ ಪಚಿನೋ ವಾದಿಸಿದ್ದರು ಎನ್ನಲಾಗಿದೆ. ಮಗುವಿಗೆ ತಂದೆ ನಾನೇ ಎಂದು ಗೊತ್ತಾದ ಬಳಿಕವೂ ಇಬ್ಬರೂ ಬೇರೆ ಆಗುತ್ತಿದ್ದಾರೆ.
ಇದನ್ನೂ ಓದಿ: Al Pacino: 83ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆ ಆದ ಅಲ್ ಪಚಿನೋ; ತನ್ನ ಬಗ್ಗೆಯೇ ನಟನಿಗೆ ಇತ್ತು ಅನುಮಾನ
ಹಾಲಿವುಡ್ನ ‘ಸೆಂಟ್ ಆಫ್ ಎ ವುಮನ್’, ‘ಗಾಡ್ ಫಾದರ್’ ಸೇರಿ ಅನೇಕ ಚಿತ್ರಗಳಲ್ಲಿ ಅಲ್ ಪಚಿನೋ ನಟಿಸಿದ್ದರು. ಆಸ್ಕರ್ ಅವಾರ್ಡ್, ಟೋನಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರ ನಟನೆಗೆ ಸಂದಿವೆ. ರಂಗಭೂಮಿ, ಕಿರುತೆರೆಯಲ್ಲೂ ಅವರು ಛಾಪು ಮೂಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ