
ಪಾಪ್ ಸಂಗೀತ ಲೋಕದ ಲೆಜೆಂಡರಿ ಪ್ರತಿಭೆ, ಗಾಯಕ, ಡ್ಯಾನ್ಸರ್ ಮೈಕೆಲ್ ಜಾಕ್ಸನ್ (Michael Jackson) ಅವರ ಬಗ್ಗೆ ಕೇಳದವರೇ ಇಲ್ಲ. ಅವರ ಗಾಯನ ಮತ್ತು ಡ್ಯಾನ್ಸ್ ಕಂಡು ವಿಶ್ವಾದ್ಯಂತ ಇರುವ ಜನರು ನಿಬ್ಬೆರಗಾಗಿದ್ದರು. ಅವರು ಇಹಲೋಕ ತ್ಯಜಿಸಿ 13 ವರ್ಷಗಳೇ ಕಳೆದಿದೆ. ಮೈಕೆಲ್ ಜಾಕ್ಸನ್ ಅವರನ್ನು ಅಭಿಮಾನಿಗಳು ಸದಾ ಮಿಸ್ ಮಾಡಿಕೊಳ್ಳುತ್ತಾರೆ. ಇಂದಿಗೂ ಅವರ ಮ್ಯೂಸಿಕ್ ಮತ್ತು ಡ್ಯಾನ್ಸ್ ವಿಡಿಯೋಗಳನ್ನು ನೋಡಿ ಜನರು ಎಂಜಾಯ್ ಮಾಡುತ್ತಾರೆ. ಮೈಕೆಲ್ ಜಾಕ್ಸನ್ ಅವರ ಮಕ್ಕಳಾದ ಪ್ಯಾರಿಸ್ ಜಾಕ್ಸನ್ (Paris Jackson) ಮತ್ತು ಪ್ರಿನ್ಸ್ ಜಾಕ್ಸನ್ (Prince Jackson) ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈಗ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಬೆಳೆದು ನಿಂತಿರುವ ಇವರಿಬ್ಬರ ಫೋಟೋಗಳು ಈಗ ವೈರಲ್ ಆಗಿವೆ. ಈ ವರ್ಷದ ‘ಟೋನಿ ಅವಾರ್ಡ್’ ಕಾರ್ಯಕ್ರಮದಲ್ಲಿ ಅವರು ಹಾಜರಿ ಹಾಕಿದ್ದಾರೆ. ಅವರನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮೈಕೆಲ್ ಜಾಕ್ಸನ್ ಅವರು 2009ರಲ್ಲಿ ನಿಧನರಾದಾಗ ಪ್ಯಾರಿಸ್ ಜಾಕ್ಸನ್ ಮತ್ತು ಪ್ರಿನ್ಸ್ ಜಾಕ್ಸನ್ ಚಿಕ್ಕವರಾಗಿದ್ದರು. ತಂದೆಗೆ ಅವರು ಅಂತಿಮ ನಮನ ಸಲ್ಲಿಸಿದ ವಿಡಿಯೋಗಳು ವೈರಲ್ ಆಗಿದ್ದವು. ಈಗ ಮಕ್ಕಳಿಬ್ಬರೂ ಬೆಳೆದು ನಿಂತಿದ್ದಾರೆ. ಪುತ್ರಿ ಪ್ಯಾರಿಸ್ ಜಾಕ್ಸನ್ ಅವರಿಗೆ ಈಗ 24ರ ಪ್ರಾಯ. ಪುತ್ರ ಪ್ರಿನ್ಸ್ ಜಾಕ್ಸನ್ಗೆ 25 ವರ್ಷ ವಯಸ್ಸು.
ಇದನ್ನೂ ಓದಿ: Viral News: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಪ್ರೇಮ್ ಕಹಾನಿ ಇಲ್ಲಿದೆ
ನಟಿ, ಮಾಡೆಲ್ ಮತ್ತು ಗಾಯಕಿಯಾಗಿ ಪ್ಯಾರಿಸ್ ಜಾಕ್ಸನ್ ಗುರುತಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. 75ನೇ ವರ್ಷದ ‘ಟೋನಿ ಅವಾರ್ಡ್’ ಸಮಾರಂಭದಲ್ಲಿ ಅವರು ಸಹೋದರ ಪ್ರಿನ್ಸ್ ಜಾಕ್ಸನ್ ಜೊತೆ ಬಂದು ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಈ ಮಕ್ಕಳು ಇನ್ನೂ ಚಿಕ್ಕವರು ಅಂತ ನಾವು ಊಹಿಸಿದ್ದೆವು. ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಪ್ಯಾರಿಸ್ ತುಂಬ ಸುಂದರವಾಗಿ ಕಾಣಿಸುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
75ನೇ ವರ್ಷದ ‘ಟೋನಿ ಅವಾರ್ಡ್’ ಸಮಾರಂಭದ ವೇದಿಕೆಯಲ್ಲಿ ಮೈಕೆಲ್ ಜಾಕ್ಸನ್ ಬಗ್ಗೆ ಅವರ ಮಕ್ಕಳು ಮಾತನಾಡಿದ್ದಾರೆ. ತಂದೆಯ ಹಾಡುಗಳನ್ನು ಒಳಗೊಂಡ ‘ಎಂಜೆ: ದ ಮ್ಯೂಸಿಕಲ್’ ಜ್ಯೂಕ್ ಬಾಕ್ಸ್ ಅನ್ನು ಅವರು ಪರಿಚಯಿಸಿದರು. ಆ ಮೂಲಕ ಗೌರವ ಸಲ್ಲಿಸಿದರು. ಇವರಿಬ್ಬರು ವೇದಿಕೆ ಮೇಲೆ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:54 pm, Mon, 13 June 22