ಮೈಖಲ್ ಜಾಕ್ಸನ್ ಬಗ್ಗೆ ಮತ್ತೊಂದು ಡಾಕ್ಯುಮೆಂಟರಿ, ಈ ಬಾರಿ ಕರಾಳ ಅಧ್ಯಾಯದ ಮೇಲೆ ಫೋಕಸ್
Michael Jackson: ಮೈಖಲ್ ಜಾಕ್ಸನ್ ಅವರನ್ನು ಇಂದಿಗೂ ಸಹ ಅವರು ವಿಶ್ವದ ಟಾಪ್ ಪಾಪ್ ಸ್ಟಾರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಹಲವು ಏರಿತಗಳುಳ್ಳ ಜೀವನ ಮೈಖಲ್ ಜಾಕ್ಸನ್ ಅವರದ್ದಾಗಿತ್ತು. ಇತ್ತೀಚೆಗಷ್ಟೆ ಮೈಖಲ್ ಜೀವನದ ಕತೆ ಆಧರಿಸಿದ್ದ ಸಿನಿಮಾ ‘ಮೈಖಲ್’ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಯ್ತು. ಇದೀಗ ಮೈಖಲ್ ಜೀವನ ಆಧರಿಸಿ ಡಾಕ್ಯುಮೆಂಟರಿ ಒಂದು ತೆರೆಗೆ ಬರುತ್ತಿದೆ.

ವಿಶ್ವದ ನಂಬರ್ 1 ಪಾಪ್ ಸ್ಟಾರ್, ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದ ಮೈಖಲ್ ಜಾಕ್ಸನ್ (Michael jackson) ನಿಧನ ಹೊಂದಿ 17 ವರ್ಷಗಳಾಗಿವೆ. ಆದರೆ ಇಂದಿಗೂ ಅವರ ಹಾಡುಗಳು ಟಾಪ್ ಟ್ರೆಂಡಿಂಗ್ನಲ್ಲಿರುತ್ತವೆ. ಇಂದಿಗೂ ಸಹ ಅವರು ವಿಶ್ವದ ಟಾಪ್ ಪಾಪ್ ಸ್ಟಾರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಹಲವು ಏರಿತಗಳುಳ್ಳ ಜೀವನ ಮೈಖಲ್ ಜಾಕ್ಸನ್ ಅವರದ್ದಾಗಿತ್ತು. ಇತ್ತೀಚೆಗಷ್ಟೆ ಮೈಖಲ್ ಜೀವನದ ಕತೆ ಆಧರಿಸಿದ್ದ ಸಿನಿಮಾ ‘ಮೈಖಲ್’ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಯ್ತು. ಇದೀಗ ಮೈಖಲ್ ಜೀವನ ಆಧರಿಸಿ ಡಾಕ್ಯುಮೆಂಟರಿ ಒಂದು ತೆರೆಗೆ ಬರುತ್ತಿದೆ.
ಇತ್ತೀಚೆಗೆ ಬಿಡುಗಡೆ ಆದ ‘ಮೈಖಲ್’ ಸಿನಿಮಾವು ಮೈಖಲ್ ಜಾಕ್ಸನ್ ಜೀವನದ ಮೊದಲಾರ್ಧದ ಕತೆಯನ್ನು ಮಾತ್ರವೇ ಒಳಗೊಂಡಿದೆ. ಅವರ ಜೀವನದ ಕರಾಳ ಅಧ್ಯಾಯನದ ಕತೆ ಸಿನಿಮಾನಲ್ಲಿಲ್ಲ. ಆದರೆ ಇದೀಗ ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಮೈಖಲ್ ಜೀವನದ ಅತ್ಯಂತ ವಿವಾದಾತ್ಮಕ ಮತ್ತು ಕರಾಳ ಅಧ್ಯಾಯವನ್ನು ಆಧರಿಸಿದ ಮೂರು ಭಾಗಗಳ ಸ್ಫೋಟಕ ಸಾಕ್ಷ್ಯಚಿತ್ರ ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸರಣಿಗೆ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಎಂದು ಹೆಸರಿಡಲಾಗಿದ್ದು, ಇದರ ಅಧಿಕೃತ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಈ ಡಾಕ್ಯು-ಸೀರೀಸ್ ಪ್ರಮುಖವಾಗಿ 2003 ರಲ್ಲಿ ಮೈಕಲ್ ಜಾಕ್ಸನ್ ವಿರುದ್ಧ ಕೇಳಿಬಂದಿದ್ದ ಅಪ್ತಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಸುತ್ತ ಸುತ್ತುತ್ತದೆ. ಈ ಆರೋಪಗಳು ಆಗಿನ ಕಾಲದಲ್ಲಿ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ, 2005 ರಲ್ಲಿ ಮೈಕಲ್ ಜಾಕ್ಸನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿತ್ತು. ಆದರೆ ಅಷ್ಟರಲ್ಲಾಗಲೆ ಜಾಕ್ಸನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆರೋಗ್ಯ ಹದತಪ್ಪಿತ್ತು. ಜಾಕ್ಸನ್ ಅವರು ನಿರ್ದೋಷಿ ಎಂದು ಸಾಬೀತಾದರೂ, ಈ ಪ್ರಕರಣದ ಸುತ್ತಲಿನ ವಿವಾದಗಳು ಮತ್ತು ರಹಸ್ಯಗಳು ಇಂದಿಗೂ ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿ ಉಳಿದಿವೆ.
ಇದನ್ನೂ ಓದಿ:ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ?
ಮೈಖಲ್ ಕುರಿತಾದ ಹೊಸ ಡಾಕ್ಯು ಸರಣಿಯನ್ನು ‘ಕ್ಯಾಂಡಲ್ ಟ್ರೂ ಸ್ಟೋರೀಸ್’ ಸಂಸ್ಥೆ ನಿರ್ಮಿಸಿದ್ದು, ನಿಕ್ ಗ್ರೀನ್ ನಿರ್ದೇಶನ ಮಾಡಿದ್ದಾರೆ. ಅಂದು ನ್ಯಾಯಾಲಯದ ಒಳಗೆ ಕ್ಯಾಮೆರಾಗಳಿಗೆ ಅನುಮತಿ ಇಲ್ಲದ ಕಾರಣ, ಸಾರ್ವಜನಿಕರಿಗೆ ಕೇವಲ ಮಾಧ್ಯಮಗಳ ವಿಶ್ಲೇಷಣೆ ಮಾತ್ರ ತಿಳಿಯುತ್ತಿತ್ತು. ನಿಜ ಘಟನೆಗಳು, ದೃಶ್ಯಗಳು, ನಿಜ ವ್ಯಕ್ತಿಗಳ ಸಂದರ್ಶನ, ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಮಾಹಿತಿ, ಅಂದಿನ ನ್ಯಾಯಾಧೀಶರು, ಜ್ಯೂರಿ ಸದಸ್ಯರು, ವಕೀಲರು, ಕೋರ್ಟ್‌ನಲ್ಲಿದ್ದ ಪತ್ರಕರ್ತರು ಮತ್ತು ಪ್ರತ್ಯಕ್ಷದರ್ಶಿಗಳ ಹೊಸ ಸಂದರ್ಶನಗಳು ಹಾಗೂ ಆರ್ಕೈವ್ ಮಾಡಲಾದ ನೈಜ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಅಂದು ಕೋರ್ಟ್ ರೂಂನಲ್ಲಿ ನಿಜವಾಗಿ ಏನಾಗಿತ್ತು ಎಂಬುದರ ಹತ್ತಿರದ ಚಿತ್ರಣವನ್ನು ಈ ಸರಣಿ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.
ಮೈಕಲ್ ಜಾಕ್ಸನ್ ಅವರ ಜೀವನದ ಈ ರೋಮಾಂಚಕ ಕಥಾಹಂದರವನ್ನು ಹೊಂದಿರುವ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಸಾಕ್ಷ್ಯಚಿತ್ರ ಸರಣಿಯು ಜೂನ್ 3 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಯೋಪಿಕ್ ಸಿನಿಮಾ ಮೈಕಲ್ ಜಾಕ್ಸನ್ ಅವರ ಜೀವನದ ಕರಾಳ ಮುಖಗಳನ್ನು ಹೆಚ್ಚಾಗಿ ತೋರಿಸದ ಕಾರಣ, ಈ ಡಾಕ್ಯು-ಸೀರೀಸ್ ಆ ಕೊರತೆಯನ್ನು ನೀಗಿಸಲಿದೆ ಮತ್ತು ಸಾರ್ವಜನಿಕರಲ್ಲಿ ಮತ್ತೊಮ್ಮೆ ಕುತೂಹಲ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





