ಆಸ್ಕರ್ ವಿಜೇತ ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ಸೀಕ್ವೆಲ್

Slumdog Millionaire: 2009 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗುವ ಜೊತೆಗೆ ಬರೋಬ್ಬರಿ ಎಂಟು ಆಸ್ಕರ್​ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ‘ಸ್ಲಮ್ ಡಾಗ್ ಮಿಲೇನಿಯರ್’ ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗಲಿದೆ.

ಆಸ್ಕರ್ ವಿಜೇತ ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ಸೀಕ್ವೆಲ್
Follow us
ಮಂಜುನಾಥ ಸಿ.
|

Updated on: Dec 04, 2024 | 12:17 PM

‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾ ಯಾರಿಗೆ ನೆನಪಿಲ್ಲ. ಭಾರತದ ಅದರಲ್ಲೂ ಮುಂಬೈನಲ್ಲಿ ನಡೆಯುವ ಕತೆಯುಳ್ಳ ಈ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಹಾಲಿವುಡ್ ನಿರ್ದೇಶಕ ಡ್ಯಾನಿ ಬೋಯ್ಲೆ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ನಟಿಸಿದ್ದವರೆಲ್ಲರೂ ಭಾರತೀಯರೆ. ಕೇವಲ 120 ಕೋಟಿ ಬಜೆಟ್​ನಲ್ಲಿ ನಿರ್ಮಿಸಿದ್ದ ಈ ಸಿನಿಮಾ ಗ್ಲೋಬಲ್ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿತ್ತು. ಮಾತ್ರವಲ್ಲದೆ ಆಸ್ಕರ್ ಪ್ರಶಸ್ತಿಗೂ ಭಾಜವಾಯ್ತು. ಅದರ ಜೊತೆಗೆ ಕೆಲವು ವಿವಾದಗಳು ಸಹ ಇದಕ್ಕೆ ಅಂಟಿಕೊಂಡವು. ಇದೀಗ ಈ ಸಿನಿಮಾದ ಸೀಕ್ವೆಲ್ ಬರಲಿದೆ.

ಈ ಸಿನಿಮಾದ ಸೀಕ್ವೆಲ್ ಮತ್ತು ಟಿವಿ ಹಕ್ಕುಗಳನ್ನು ಬ್ರಿಡ್ಜ್ 7 ನಿರ್ಮಾಣ ಸಂಸ್ಥೆಯ ಸ್ವಾತಿ ಶೆಟ್ಟಿ ಖರೀದಿ ಮಾಡಿದ್ದಾರೆ. ಇವರೊಟ್ಟಿಗೆ ಮಾಜಿ ಸಿಎಎ ಏಜೆಂಟ್ ಗ್ರಾಂಟ್ ಕೆಸ್ಮನ್ ಸಹ ಇದ್ದಾರೆ. ‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾವನ್ನು ಬ್ರಿಟೀಷ್ ನಿರ್ಮಾಪಕ ಕ್ರಿಶ್ಚಿಯನ್ ಪ್ಯಾಟ್ರಿಕ್ ಕಾಲ್​ಸನ್ ನಿರ್ಮಾಣ ಮಾಡಿದ್ದರು. ಇವರಿಂದ ಹಕ್ಕುಗಳನ್ನು ಖರೀದಿ ಮಾಡಿರುವ ಬ್ರಿಡ್ಜ್ 7 ನಿರ್ಮಾಣ ಸಂಸ್ಥೆ ಇದೀಗ ಈ ಕತೆಯನ್ನು ಮುಂದುವರೆಸುವ ಉಮೇದು ವ್ಯಕ್ತಪಡಿಸಿದೆ.

ಇದನ್ನೂ ಓದಿ:ರೇಖಾಳನ್ನು ಮೊಸಳೆ ಬಾಯಿಗೆ ತಳ್ಳಿ ಹಾಲಿವುಡ್​ಗೆ​ ಪರಾರಿ ಆಗಿದ್ದ ನಟ

ಹಾಲಿವುಡ್​ ಮ್ಯಾಗಜೈನ್ ವೆರೈಟಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸ್ವಾತಿ ಶೆಟ್ಟಿ, ‘ಕೆಲವು ಕತೆಗಳು ನಮ್ಮೊಂದಿಗೆ ಉಳಿದುಕೊಂಡು ಬಿಡುತ್ತವೆ ಅಂಥಹಾ ಕತೆಗಳಲ್ಲಿ ‘ಸ್ಲಮ್ ಡಾಗ್ ಮಿಲಿಯನೇರ್’ ಸಹ ಒಂದು. ಆ ಸಿನಿಮಾದ ಕತೆ, ಕತೆ ನಡೆಯುವ ವಾತಾವರಣ, ಪಾತ್ರಗಳು, ಅವುಗಳ ನಡುವಿನ ತಾಕಲಾಟ, ಆ ಸಿನಿಮಾದ ಸಂಗೀತ ಎಲ್ಲವೂ ಅದ್ಭುತವಾಗಿತ್ತು. ಜಗತ್ತಿನ ಮೂಲೆ ಮೂಲೆಗಳಿಂದ ಪ್ರತಿಭೆಯನ್ನು ಒಟ್ಟು ಸೇರಿಸಿ ಆ ಸಿನಿಮಾವನ್ನು ಮಾಡಲಾಗಿತ್ತು’ ಎಂದಿದ್ದಾರೆ.

‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆಲೆಡೋರ್​ನ ಸಿಇಓ ಪೌಲ್ ಸ್ಮಿತ್ ಮಾತನಾಡಿ, ‘ಸ್ವಾತಿ ಶೆಟ್ಟಿ ಮತ್ತು ಗ್ರ್ಯಾಂಟ್ ಅವರುಗಳು ಹಕ್ಕುಗಳನ್ನು ಖರೀದಿ ಮಾಡಿರುವುದು ನನಗೆ ಸಂತೋಷ ತಂದಿದೆ. ಜಮಾಲ್ (‘ಸ್ಲಮ್ ಡಾಗ್ ಮಿಲಿಯನೇರ್’ ನಾಯಕನ ಪಾತ್ರದ ಹೆಸರು)ನ ಮುಂದಿನ ಪಯಣ ಹೇಗಿರುತ್ತದೆ ಎಂದು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾ ಬಿಡುಗಡೆ ಆದಾಗ ಅದರ ಸುತ್ತ ಕೆಲವು ವಿವಾದಗಳು ಸುತ್ತಿಕೊಂಡಿದ್ದವು. ವಿಶೇಷವಾಗಿ ಭಾರತದ ಕೆಲವು ಸಂಘಟನೆಗಳು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಸಿನಿಮಾದಲ್ಲಿ ಭಾರತವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಅಮಿತಾಬ್ ಬಚ್ಚನ್ ಸೇರಿದಂತೆ ಇನ್ನೂ ಕೆಲವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾದಲ್ಲಿ ನಟಿಸಿರುವ ಬಾಲನಟರು ನಿಜವಾಗಿಯೂ ಸ್ಲಂ ವಾಸಿಗಳಾಗಿದ್ದು, ಅವರಿಗೆ ಅತ್ಯಂತ ಕಡಿಮೆ ಸಂಭಾವನೆ ನೀಡಿದ್ದು ಸಹ ಸುದ್ದಿಯಾಗಿತ್ತು. ಅದು ದೊಡ್ಡ ವಿವಾದವಾಗಿ ಕೊನೆಗೆ ಸಿನಿಮಾದ ನಿರ್ದೇಶಕ ಡ್ಯಾನಿ ಬೋಯ್ಲ್ ಮತ್ತು ನಿರ್ಮಾಪಕರು ಬಹಿರಂಗ ಪತ್ರ ಬರೆದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ