Scarlett Johansson: ಹಾಲಿವುಡ್ನ ಖ್ಯಾತ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಮತ್ತು ವಾಲ್ಟ್ ಡಿಸ್ನೆ ನಡುವಿನ ವಿವಾದ ಸುಖಾಂತ್ಯ
ಹಾಲಿವುಡ್ನ ಖ್ಯಾತ ನಟಿ, ‘ಬ್ಲ್ಯಾಕ್ ವಿಡೊ’ ಚಿತ್ರದ ನಾಯಕ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಮತ್ತು ಪ್ರಸಿದ್ಧ ನಿರ್ಮಾಣ ಕಂಪನಿ ವಾಲ್ಟ್ ಡಿಸ್ನೆ ನಡುವಿನ ವಿವಾದ ಸುಖಾಂತ್ಯಗೊಂಡಿದೆ. ಏನಿದು ಪ್ರಕರಣ? ಇಲ್ಲಿದೆ ಮಾಹಿತಿ.
ಹಾಲಿವುಡ್ನ ಖ್ಯಾತ ನಿರ್ಮಾಣ ಕಂಪನಿ ವಾಲ್ಟ್ ಡಿಸ್ನೆ ಮತ್ತು ನಟಿ ಸ್ಕಾರ್ಲೆಟ್ ಜೋಹಾನ್ಸನ್ ನಡುವೆ ‘ಬ್ಲ್ಯಾಕ್ ವಿಡೊ’ ಚಿತ್ರದ ಕುರಿತಂತೆ ಮೂಡಿದ್ದ ವಿವಾದ ಬಗೆಹರಿದಿದೆ. ಈ ಕುರಿತು ಎರಡೂ ಕಡೆಯಿಂದ ಗುರುವಾರ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಈ ಮೊದಲು ‘ಬ್ಲ್ಯಾಕ್ ವಿಡೊ’ದ ನಾಯಕ ನಟಿ ಜೊಹಾನ್ಸನ್ ಜುಲೈನಲ್ಲಿ ಡಿಸ್ನೆ ವಿರುದ್ಧ ಮೊಕದ್ದಮೆ ಹೂಡಿದ್ದರು. ಚಲನಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಮಯದಲ್ಲೇ, ಡಿಸ್ನಿ+ ಹಾಟ್ಸ್ಟಾರ್ ಒಟಿಟಿಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಜೊಹಾನ್ಸನ್ ಆರೋಪಿಸಿದ್ದರು.
ಜೊಹಾನ್ಸನ್ ಆರೋಪಕ್ಕೆ ಡಿಸ್ನೆಯ ನಿರ್ಧಾರದಿಂದ ತಮಗೆ ಬರಬೇಕಿದ್ದ ಆದಾಯ ಕುಂಠಿತಗೊಂಡಿದೆ ಎಂಬುದೂ ಕಾರಣವಾಗಿತ್ತು. ಚಿತ್ರಮಂದಿರಗಳಲ್ಲಿನ ಗಳಿಕೆಯನ್ನು ಆಧರಿಸಿ ಇದು ನಿರ್ವಹಿಸಲ್ಪಡುತ್ತಿತ್ತು ಎಂದು ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ದೂರಿನಲ್ಲಿ ಜೊಹಾನ್ಸನ್ ಪರ ವಕೀಲರು ತಿಳಿಸಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸ್ನೆ, ಜೊಹಾನ್ಸನ್ ನಡುವೆ ಏರ್ಪಟ್ಟಿದ್ದ ಒಪ್ಪಂದವನ್ನು ಸ್ಟುಡಿಯೊ ಅನುಸರಿಸಿದೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿತ್ತು. ಇದರೊಂದಿಗೆ ಜೊಹಾನ್ಸನ್ ವಾದವು ಕೊವಿಡ್ 19 ಸಮಯದಲ್ಲಿ ಪ್ರೇಕ್ಷಕರಿಗೆ ಆಗಬಹುದಾದ ಅಪಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂದೂ ಆರೋಪಿಸಿತ್ತು. ಹಾಲಿವುಡ್ನ ಬಹು ಬೇಡಿಕೆಯ ನಟಿ ಹಾಗೂ ಅತ್ಯಂತ ಪ್ರತಿಷ್ಠಿತ ನಿರ್ಮಾಣ ಕಂಪನಿಯ ಈ ಜಗಳ ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ಜೊತೆಗೆ ಜೊಹಾನ್ಸನ್ ಇನ್ನು ಮುಂದೆ ಮಾರ್ವೆಲ್ ಸೀರೀಸ್ನಲ್ಲಿ ಕಾಣಿಸಿಕೊಳ್ಳದಿದ್ದರೆ.. ಎಂಬ ಅನುಮಾನ ಸಿನಿಮಾ ಪ್ರೇಮಿಗಳ ಬೇಸರಕ್ಕೂ ಕಾರಣವಾಗಿತ್ತು.
ಇದೀಗ ಅವುಗಳಿಗೆ ಉತ್ತರ ರೂಪದಲ್ಲಿ ಜೊಹಾನ್ಸನ್ ಹಾಗೂ ಡಿಸ್ನೆಯ ಜಂಟಿ ಹೇಳಿಕೆ ಹೊರಬಿದ್ದಿದ್ದು, ಅಭಿಮಾನಿಗಳಿಗೆ ಸಂತಸವಾಗಿದೆ. ಪ್ರಸ್ತುತ ಡಿಸ್ನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಜೊಹಾನ್ಸನ್ ಅವರೊಂದಿಗೆ ಮಾತುಕತೆಯ ಮುಖಾಂತರ ವಿವಾದವನ್ನು ಪರಿಹರಿಸಿಕೊಳ್ಳಲಾಗಿದೆ. ಅವರೊಂದಿಗೆ ಮುಂದಿನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳಿದೆ. ಇತ್ತ ಜೊಹಾನ್ಸನ್ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ‘‘ನನಗೆ ಈ ಹಿಂದೆ ಅವರೊಂದಿಗೆ ಚಿತ್ರದಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ಇದೆ. ಮುಂದೆಯೂ ನಮ್ಮ ಚಿತ್ರಗಳು ಮುಂದುವರೆಯಲಿವೆ’’ ಎಂದಿದ್ದಾರೆ. ಜೊಹಾನ್ಸನ್ ವಿಶ್ವದ ಅತ್ಯಂತ ಬೇಡಿಕೆಯುಳ್ಳ ನಟಿಯರಲ್ಲಿ ಒಬ್ಬರಾಗಿದ್ದು, 2018- 19ನೇ ಸಾಲಿನಲ್ಲಿ ಅತ್ಯಂತ ಹೆಚ್ಚು ಆದಾಯ ಗಳಿಸಿದ ನಟಿಯರಲ್ಲಿ ಮೊದಲ ಸ್ಥಾನದಲ್ಲಿದ್ದರು.
ಇದನ್ನೂ ಓದಿ:
‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್
‘ನಾನೀಗ ಅನಾಥೆ, ನನಗೆ ಯಾರೂ ಇಲ್ಲ’; ತಾಯಿ ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಭಾವುಕ ಮಾತು
Published On - 5:28 pm, Fri, 1 October 21