ನಟಿ ಜತೆ ರೂಮ್ ಶೇರ್ ಮಾಡಿ ನಿರ್ಮಾಪಕರಿಗೆ ದುಡ್ಡು ಉಳಿಸುವ ‘ಸ್ಪೈಡರ್ ಮ್ಯಾನ್’ ನಟ
ಕ್ರಿಸ್ಮಸ್ ಪ್ರಯುಕ್ತ ಮಾಧ್ಯಮವೊಂದಕ್ಕೆ ಟಾಮ್ ಹಾಲೆಂಡ್ ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ನಟಿ ಝೆಂಡೆಯಾ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಅವರಿಗೆ ಒಂದೇ ರೂಮ್ ಬುಕ್ ಮಾಡಿದರೆ ಸಾಕು. ಅದರಿಂದ ನಿರ್ಮಾಪಕರಿಗೆ ಖರ್ಚು ಉಳಿಯುತ್ತದೆ!
ಹಾಲಿವುಡ್ ನಟ ಟಾಮ್ ಹಾಲೆಂಡ್ ಅವರು ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ‘ಸ್ಪೈಡರ್ ಮ್ಯಾನ್’ ಸರಣಿಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಖ್ಯಾತಿ ಗಳಿಸಿದ್ದಾರೆ. ಈಗ ಟಾಮ್ ಹಾಲೆಂಡ್ ಅವರಿಗೆ 28 ವರ್ಷ ವಯಸ್ಸು. ಇಂಗ್ಲೆಂಡ್ ಮೂಲದ ಅವರಿಗೆ ಹಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅವರ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕಾದಿವೆ. ಆಸ್ಕರ್ ಪುರಸ್ಕೃತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನಿಮಾದಲ್ಲಿ ಟಾಮ್ ಹಾಲೆಂಡ್ ನಟಿಸಲಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಾಮ್ ಹಾಲೆಂಡ್ ಹಂಚಿಕೊಂಡಿದ್ದಾರೆ.
ಹೊಸ ಸಿನಿಮಾದಲ್ಲಿ ಟಾಮ್ ಹಾಲೆಂಡ್ ಜೊತೆ ನಟಿ ಝೆಂಡೆಯಾ ಕೂಡ ಅಭಿನಯಿಸಲಿದ್ದಾರೆ. ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ಆಯ್ಕೆ ಮಾಡಿಕೊಂಡರೆ ನಿರ್ಮಾಪಕರಿಗೆ ಸಖತ್ ಲಾಭ ಆಗುತ್ತದೆ. ಯಾಕೆಂದರೆ, ಟಾಮ್ ಹಾಲೆಂಡ್ ಅವರು ಝೆಂಡೆಯಾ ಜೊತೆಗೆ ಹೋಟೆಲ್ ರೂಮ್ ಶೇರ್ ಮಾಡಿಕೊಳ್ಳುತ್ತಾರೆ. ಆ ಕಾರಣದಿಂದ ನಿರ್ಮಾಪಕರು ಈ ಜೋಡಿಯನ್ನೇ ಆಯ್ಕೆ ಮಾಡುತ್ತಾರೆ ಎಂಬ ತಮಾಷೆಯ ಮಾತು ಚಾಲ್ತಿಯಲ್ಲಿದೆ.
ಹಾಗೆಂದಮಾತ್ರಕ್ಕೆ ಟಾಮ್ ಹಾಲೆಂಟ್ ಅವರು ಎಲ್ಲ ಹೀರೋಯಿನ್ಗಳ ಜೊತೆ ಈ ರೀತಿ ರೂಮ್ ಶೇರ್ ಮಾಡಿಕೊಳ್ಳುವುದಿಲ್ಲ. ಈ ಪಾಲಿಸಿ ಕೇವಲ ಝೆಂಡೆಯಾ ಜೊತೆ ಮಾತ್ರ! ಯಾಕೆಂದರೆ, ಝೆಂಡೆಯಾ ಮತ್ತು ಟಾಮ್ ಹಾಲೆಂಡ್ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗಾಗಲೇ ಅವರು ‘ಸ್ಪೈಡರ್ ಮ್ಯಾನ್’ ಸರಣಿಯ ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರೆ ಶೂಟಿಂಗ್ ಸಂದರ್ಭದಲ್ಲಿ ಅವರಿಬ್ಬರಿಗೂ ಸೇರಿ ಒಂದು ಹೋಟೆಲ್ ರೂಮ್ ಬುಕ್ ಮಾಡಿದರೆ ಸಾಕು ಎಂದು ಸ್ವತಃ ಟಾಮ್ ಹಾಲೆಂಡ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ಮಿಷನ್ ಇಂಪಾಸಿವಲ್’ ನಟನಿಗೆ ಕಡೆಗೂ ವಯಸ್ಸಾಯ್ತು; ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್
2016ರಿಂದಲೇ ಝೆಂಡೆಯಾ ಮತ್ತು ಟಾಮ್ ಹಾಲೆಂಡ್ ಅವರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಆರಂಭದ ದಿನಗಳಲ್ಲಿ ಅವರಿಬ್ಬರು ಗೌಪ್ಯತೆ ಕಾಪಾಡಿಕೊಂಡಿದ್ದರು. 2021ರಲ್ಲಿ ಕಾರಿನೊಳಗೆ ಝೆಂಡೆಯಾ ಮತ್ತು ಟಾಮ್ ಹಾಲೆಂಡ್ ಕಿಸ್ ಮಾಡುತ್ತಿರುವ ಫೋಟೋ ವೈರಲ್ ಆಯಿತು. ಆ ಬಳಿಕ ಅವರ ರಿಲೇಷನ್ಶಿಪ್ ಜಗಜ್ಜಾಹೀರಾಯಿತು. ಈಗ ಅವರಿಬ್ಬರು ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಾರೆ ಎಂಬ ವಿಷಯ ತಿಳಿದು ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.