AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಕಾಲಿಟ್ಟ ವಿಲ್​ ಸ್ಮಿತ್; ಆಸ್ಕರ್ ವಿವಾದದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ

ಇಂದು (ಏಪ್ರಿಲ್​ 23) ವಿಲ್​ ಸ್ಮಿತ್ ಅವರು ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಗುನಗುತ್ತಾ ಕಾರಿನಿಂದ ಇಳಿಯುತ್ತಿರುವ ಫೋಟೋ ವೈರಲ್ ಆಗಿದೆ .

ಭಾರತಕ್ಕೆ ಕಾಲಿಟ್ಟ ವಿಲ್​ ಸ್ಮಿತ್; ಆಸ್ಕರ್ ವಿವಾದದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ
TV9 Web
| Edited By: |

Updated on:Apr 23, 2022 | 1:30 PM

Share

ನಟ ವಿಲ್​ ಸ್ಮಿತ್​ಗೂ (Will Smith) ಭಾರತಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. 2019ರಲ್ಲಿ ಅವರು ಭಾರತಕ್ಕೆ (India) ಆಗಮಿಸಿದ್ದರು. ಇದಾದ ಬಳಿಕ ಕೊವಿಡ್ ಕಾಣಿಸಿಕೊಂಡಿತು. ಎರಡು ವರ್ಷಗಳ ಕಾಲ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಈಗ ಎಲ್ಲವೂ ಸರಿಹಾದಿಗೆ ಬರುತ್ತಿದೆ. ಆದರೆ, ವಿಲ್ ಸ್ಮಿತ್ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ಆಸ್ಕರ್ ಸಮಾರಂಭದಲ್ಲಿ (Oscar Award Function)ಅವರು ಮಾಡಿಕೊಂಡ ವಿವಾದದಿಂದ 10 ವರ್ಷ ಬ್ಯಾನ್​ಗೆ ಒಳಗಾಗಿದ್ದಾರೆ. ಇದಾದ ಬಳಿಕ ವಿಲ್​ ಸ್ಮಿತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಭಾರತಕ್ಕೆ ಬಂದಿಳಿದಿದ್ದಾರೆ. ಅವರು ಭಾರತಕ್ಕೆ ಬಂದಿರುವ ವಿಚಾರ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಆಸ್ಕರ್ ಸಮಾರಂಭದಲ್ಲಿ ಪತ್ನಿಯ ಬಗ್ಗೆ ಜೋಕ್ ಮಾಡಿದ ಕಾಮಿಡಿ ನಟ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ್ದರು ವಿಲ್ ಸ್ಮಿತ್. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನಂತರ ಅಕಾಡೆಮಿ ಈ ವಿಚಾರವಾಗಿ ಸಭೆ ನಡೆಸಿ, 10 ವರ್ಷ ವಿಲ್​ ಸ್ಮಿತ್ ಅವರನ್ನು ಅಕಾಡೆಮಿಯಿಂದ ಹೊರಗೆ ಇಡುವ ನಿರ್ಧಾರಕ್ಕೆ ಬಂದಿದೆ. ಅವರ ವೃತ್ತಿ ಜೀವನಕ್ಕೆ ಇದು ಕಪ್ಪು ಚುಕ್ಕೆ ಆಗಿದೆ. ಇಂದು (ಏಪ್ರಿಲ್​ 23) ವಿಲ್​ ಸ್ಮಿತ್ ಅವರು ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಗುನಗುತ್ತಾ ಕಾರಿನಿಂದ ಇಳಿಯುತ್ತಿರುವ ಫೋಟೋ ವೈರಲ್ ಆಗಿದೆ . ಅವರು ಭಾರತಕ್ಕೆ ಬಂದಿದ್ದು ಏಕೆ ಎನ್ನುವ ವಿಚಾರ ಇನ್ನಷ್ಟೇ ತಿಳಿಯಬೇಕಿದೆ.

ವಿಲ್ ಸ್ಮಿತ್ ಭಾರತಕ್ಕೆ ಬಂದಿದ್ದು ಇದೇ ಮೊದಲೇನಲ್ಲ. 2019ರಲ್ಲಿ ವಿಲ್​ ಸ್ಮಿತ್ ಅವರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ‘ಫೇಸ್​ಬುಕ್ ವಾಚ್ ಸೀರಿಸ್’ ಉದ್ದೇಶದಿಂದ ಅವರು ಇಲ್ಲಿಗೇ ಭೇಟಿ ನೀಡಿದ್ದರು. ‘ದೇವರು ಅನುಭವದ ಮೂಲಕ ಕಲಿಸುತ್ತಾನೆ ಎಂದು ನನ್ನ ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಭಾರತಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಬಣ್ಣಗಳು, ಜನರು ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವುದರಿಂದ ನನ್ನ, ನನ್ನ ಕಲೆಯ ಹೊಸ ತಿಳುವಳಿಕೆಯು ಜಾಗೃತಗೊಂಡಿದೆ ಎಂದು’ ಅವರು ಹೇಳಿದ್ದರು. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ಅವರು ಅತಿಥಿ ಮಾಡಿದ್ದರು. ಇದರ ಶೂಟಿಂಗ್​ಗಾಗಿ ಅವರು ಮುಂಬೈಗೆ ಬಂದಿದ್ದರು. ಭಾರತದ ಹಲವು ಸ್ಟಾರ್​ಗಳು ವಿಲ್ ಸ್ಮಿತ್ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿವಾದದ ಬಳಿಕ ಈ ಫೋಟೋಗಳು ವೈರಲ್ ಆಗಿದ್ದವು.

ವಿಲ್​ ಸ್ಮಿತ್​ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪಲಿಲ್ಲ:

ಈ ಬಾರಿಯ ಆಸ್ಕರ್​ ವೇದಿಕೆಯಲ್ಲಿ ವಿಲ್​ ಸ್ಮಿತ್ ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಯಿತು. ಪತ್ನಿಯ ಬಗ್ಗೆ ಕಾಮಿಡಿ ಮಾಡಿದ ಕ್ರಿಸ್​ ರಾಕ್​ಗೆ ಕಪಾಳಮೋಕ್ಷ ಮಾಡಿದ ನಂತರ ವಿಲ್​ ಸ್ಮಿತ್ ಅವರು ವೇದಿಕೆ ಏರಿ ‘ಅತ್ಯುತ್ತಮ ನಟ’ ಆಸ್ಕರ್​ ಪ್ರಶಸ್ತಿ ಪಡೆದುಕೊಂಡರು. ‘ಕಿಂಗ್​ ರಿಚರ್ಡ್​’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಅವರು ಎಲ್ಲರಲ್ಲೂ ಕ್ಷಮೆ ಕೇಳಿದರು. ಕೆನ್ನೆಗೆ ಹೊಡೆದಿದ್ದಕ್ಕೆ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. ನಂತರ ಅಕಾಡೆಮಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದರು. ಆದರೂ ಕೂಡ ವಿಲ್​ ಸ್ಮಿತ್​ ಅವರಿಗೆ ಶಿಕ್ಷೆ ತಪ್ಪಲಿಲ್ಲ.

ಇದನ್ನೂ ಓದಿ: ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ

ಆಸ್ಕರ್ ವೇದಿಕೆಯ ಕಪಾಳಮೋಕ್ಷಕ್ಕೆ ಅಲೋಪೆಸಿಯಾ ಕಾರಣ?! ವಿಲ್ ಸ್ಮಿತ್ ಪತ್ನಿಯ ಕೂದಲು ಹಾಗಿರುವುದೇಕೆ?

Published On - 1:27 pm, Sat, 23 April 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ