Rajinikanth: ಮಾಲ್ಡೀವ್ಸ್ ಬೀಚ್ನಲ್ಲಿ ಚಿಲ್ ಮಾಡುತ್ತಿರುವ ರಜನಿಕಾಂತ್; ಫೋಟೋ ವೈರಲ್
ರಜನಿಕಾಂತ್ ಅವರು ಮಾಲ್ಡೀವ್ಸ್ ಬೀಚ್ನಲ್ಲಿ ಓಡಾಡುತ್ತಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ.

ಮಾಲ್ಡೀವ್ಸ್ ಸೆಲೆಬ್ರಿಟಿಗಳ ಹಾಟ್ ಸ್ಪಾಟ್. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಸುತ್ತಾಡಲು ಹೋಗಬೇಕು ಎಂದರೆ ಸೆಲೆಬ್ರಿಟಿಗಳು ಮೊದಲು ಆಯ್ಕೆ ಮಾಡುವ ಸ್ಥಳ ಎಂದರೆ ಅದು ಮಾಲ್ಡೀವ್ಸ್. ಈಗ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರು ಬೀಚ್ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ರಜನಿಕಾಂತ್ (Rajinikanth) ಇಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ರಜನಿಕಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಈ ಕಾರಣಕ್ಕೆ ಅವರು ತಾವು ಪ್ರವಾಸಕ್ಕೆ ತೆರಳುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದು ತುಂಬಾನೇ ಅಪರೂಪ. ಆದಾಗ್ಯೂ ಅವರ ಫೋಟೋಗಳು ವೈರಲ್ ಆಗುತ್ತವೆ. ಈಗ ರಜನಿಕಾಂತ್ ಅವರು ಮಾಲ್ಡೀವ್ಸ್ ಬೀಚ್ನಲ್ಲಿ ಓಡಾಡುತ್ತಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ.
ರಜನಿಕಾಂತ್ ಅವರ ವಯಸ್ಸು ಈಗ 72. ಈ ವಯಸ್ಸಿನಲ್ಲೂ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದೆ. ಅವರ ನಟನೆಯ ಮತ್ತೊಂದು ಸಿನಿಮಾ ‘ಲಾಲ್ ಸಲಾಂ’ ಚಿತ್ರದ ಶೂಟಿಂಗ್ನ ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಈ ಚಿತ್ರಕ್ಕೆ ಅವರ ಮಗಳು ಐಶ್ವರ್ಯಾ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕವೇ ಅವರು ವೆಕೇಷನ್ ತೆರಳಿದ್ದಾರೆ.
#Superstar @rajinikanth on his way from #Chennai to #Maldives pic.twitter.com/0iVvxllSlc
— Ramesh Bala (@rameshlaus) July 14, 2023
ಇದನ್ನೂ ಓದಿ: Rajinikanth: ‘ಹುಕುಂ’ ನೀಡಲು ಸಜ್ಜಾದ ರಜನಿಕಾಂತ್; ‘ಜೈಲರ್’ ಸಿನಿಮಾದ 2ನೇ ಹಾಡಿನ ಬಿಡುಗಡೆಗೆ ದಿನಾಂಕ ನಿಗದಿ
‘ಜೈಲರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಕನ್ನಡದ ಶಿವರಾಜ್ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು 10 ನಿಮಿಷ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ನೆಲ್ಸನ್ ದಿಲೀಪ್ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ತಮನ್ನಾ ಅವರು ‘ಜೈಲರ್’ ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಸೂಪರ್ ಹಿಟ್ ಆಗಿದೆ. ಕೋಟ್ಯಂತರ ಬಾರಿ ಹಾಡು ವಿಕ್ಷಣೆ ಕಂಡಿದೆ. ಈ ಹಾಡನಿಂದ ಸಿನಿಮಾಗೆ ಮೈಲೇಜ್ ಸಿಕ್ಕಿದೆ.
Published On - 11:55 am, Tue, 18 July 23