ಯೂಟ್ಯೂಬ್ನಲ್ಲಿ ರಿಲೀಸ್ ಆಯ್ತು ‘ಕಾವಾಲಾ..’ ವಿಡಿಯೋ ಸಾಂಗ್; ಸಿಗುತ್ತಿದೆ ಲಕ್ಷ ಲಕ್ಷ ವೀಕ್ಷಣೆ
‘ಕಾವಾಲಾ..’ ವಿಡಿಯೋ ಸಾಂಗ್ ನೋಡಲು ಕೆಲವರು ಚಿತ್ರಮಂದರಕ್ಕೆ ಬಂದ ಉದಾಹರಣೆ ಇದೆ. ಈಗ ‘ಜೈಲರ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೆ ವಿಡಿಯೋ ಸಾಂಗ್ನ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಜೈಲರ್’ ಸಿನಿಮಾ (Jailer Movie) ಬಾಕ್ಸ್ ಆಫೀಸ್ನಲ್ಲಿ ಪಾರುಪತ್ಯ ಸಾಧಿಸಿದೆ. ಈ ಚಿತ್ರ ಬರೋಬ್ಬರಿ 600+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಸೆಪ್ಟೆಂಬರ್ 7ರಂದು ಒಟಿಟಿ ಮೂಲಕ ಪ್ರಸಾರ ಕಂಡಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಮಧ್ಯೆ ‘ಕಾವಾಲಾ..’ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡೋಕೆ ಕೆಲವು ಲೆಕ್ಕಾಚಾರ ಕೂಡ ಕಾರಣ ಎನ್ನಲಾಗುತ್ತಿದೆ.
‘ಕಾವಾಲಾ..’ ಹಾಡಿನ ಲಿರಿಕಲ್ ವಿಡಿಯೋ ಎರಡು ತಿಂಗಳ ಹಿಂದೆ ರಿಲೀಸ್ ಆಗಿತ್ತು. ಈ ಹಾಡು ಸೆನ್ಸೇಷನ್ ತುಂಬಾನೇ ದೊಡ್ಡ ಮಟ್ಟದ ಸೃಷ್ಟಿ ಮಾಡಿತ್ತು. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಕೆಲಸ ಮಾಡಿತ್ತು. ಇನ್ನು, ರೀಲ್ಸ್ನಲ್ಲೂ ಹಾಡು ಫೇಮಸ್ ಆಯಿತು. ತಮನ್ನಾ ಅವರು ಹಾಕಿದ ರೀತಿಯಲ್ಲೇ ಸೆಲೆಬ್ರಿಟಿಗಳು, ಫ್ಯಾನ್ಸ್ ಸ್ಟೆಪ್ ಹಾಕಿದರು. ಈ ಮೂಲಕ ಹಾಡನ್ನು ಫೇಮಸ್ ಮಾಡಲಾಯಿತು. ಈಗ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ.
‘ಕಾವಾಲಾ..’ ವಿಡಿಯೋ ಸಾಂಗ್ ನೋಡಲು ಕೆಲವರು ಚಿತ್ರಮಂದರಕ್ಕೆ ಬಂದ ಉದಾಹರಣೆ ಇದೆ. ಈಗ ‘ಜೈಲರ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೆ ವಿಡಿಯೋ ಸಾಂಗ್ನ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ಕಾವಾಲಾ..’ ವಿಡಿಯೋ ಸಾಂಗ್ ಕೂಡ ಭರ್ಜರಿ ವೀಕ್ಷಣೆ ಕಾಣುತ್ತಿದೆ.
‘ಕಾವಾಲಾ..’ ಲಿರಿಕಲ್ ವಿಡಿಯೋ 18 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈಗ ರಿಲೀಸ್ ಆಗಿರುವ ವಿಡಿಯೋ ಸಾಂಗ್ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತಿದೆ. ‘ಜೈಲರ್’ ಚಿತ್ರವನ್ನು ಜನರು ಒಟಿಟಿಯಲ್ಲಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಥಿಯೇಟರ್ನಲ್ಲಿ ನೋಡಿದವರು ಚಿತ್ರವನ್ನು ಒಟಿಟಿಯಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ಜಾಲಿವುಡ್’ಗೆ ಶುಭಕೋರಿದ ಶಿವರಾಜ್ಕುಮಾರ್, ಡಿಕೆಶಿ; ಇಲ್ಲಿದೆ ಹತ್ತು ಹಲವು ಬಗೆಯ ಮನರಂಜನೆ
‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಹೀರೊ ಆಗಿ ನಟಿಸಿದ್ದಾರೆ. ಶಿವರಾಜ್ಕುಮಾರ್ ಮೊದಲಾದವರು ಅತಿಥಿ ಪಾತ್ರ ಮಾಡಿದ್ದಾರೆ. ತಮನ್ನಾ ಅವರ ಗ್ಲಾಮರ್ ಗಮನ ಸೆಳೆದಿದೆ. ರಜನಿಕಾಂತ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ಗೆ ಕಾರ್ ಗಿಫ್ಟ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ