AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajal Aggarwal: ಪತಿ ಗೌತಮ್​ ಬಗ್ಗೆ ತಕರಾರು ತೆಗೆದ ಕಾಜಲ್​ ಅಗರ್​ವಾಲ್​

ಕೊವಿಡ್​ ಕೊಂಚ ಕಡಿಮೆ ಆಗಿದ್ದು, ಜನರು ನಿಧಾನವಾಗಿ ಸುತ್ತಾಡೋಕೆ ಆರಂಭಿಸಿದ್ದಾರೆ. ಅದೇ ರೀತಿ, ಕಾಜಲ್​ ಕೂಡ ಇತ್ತೀಚೆಗೆ ಹೊರಗೆ ಹೋಗುವ ಪ್ಲ್ಯಾನ್​ ಮಾಡಿದ್ದರು. ಮುಂದೇನಾಯ್ತು ಎನ್ನುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

Kajal Aggarwal: ಪತಿ ಗೌತಮ್​ ಬಗ್ಗೆ ತಕರಾರು ತೆಗೆದ ಕಾಜಲ್​ ಅಗರ್​ವಾಲ್​
ಕಾಜಲ್​ ಹೇಳಿಕೆ ಅವರ ಅಭಿಮಾನಿಗಳಿಗೆ ಬೇಸರ ಹಾಗೂ ಆತಂಕ ಮೂಡಿಸಿತ್ತು.
ರಾಜೇಶ್ ದುಗ್ಗುಮನೆ
| Edited By: |

Updated on: Jun 19, 2021 | 7:32 AM

Share

ಕಳೆದ ಅಕ್ಟೋಬರ್​ ತಿಂಗಳಲ್ಲಿ ಉದ್ಯಮಿ ಗೌತಮ್​ ಜತೆ ಕಾಜಲ್​ ಮದುವೆ ಆಗಿದ್ದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುವ ದಂಪತಿ, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ಪತಿ ಗೌತಮ್​ ಬಗ್ಗೆ ಕಾಜಲ್​ ತಕರಾರು ತೆಗೆದಿದ್ದಾರೆ. ಹಾಗಂತ ಇದು ಗಂಭೀರ ದೂರು ಎಂದು ಪರಿಗಣಿಸಬೇಡಿ.

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್​ಗೆ ಇದೆ. ಪ್ಯಾರಿಸ್​ ಪ್ಯಾರಿಸ್​ ಸೇರಿ ಐದಾರು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಈ ಪೈಕಿ ಕೆಲ ಚಿತ್ರಗಳು ರಿಲೀಸ್​ಗೆ ರೆಡಿ ಇದ್ದು, ಕೊರೊನಾದಿಂದ ಬಿಡುಗಡೆ ವಿಳಂಬವಾಗಿದೆ. ಈಗ ಕೊವಿಡ್​ ಕೊಂಚ ಕಡಿಮೆ ಆಗಿದ್ದು, ಜನರು ನಿಧಾನವಾಗಿ ಸುತ್ತಾಡೋಕೆ ಆರಂಭಿಸಿದ್ದಾರೆ. ಅದೇ ರೀತಿ, ಕಾಜಲ್​ ಕೂಡ ಇತ್ತೀಚೆಗೆ ಹೊರಗೆ ಹೋಗುವ ಪ್ಲ್ಯಾನ್​ ಮಾಡಿದ್ದರು. ಮುಂದೇನಾಯ್ತು ಎನ್ನುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕಾಜಲ್​ ಇನ್​ಸ್ಟಾಗ್ರಾಂ ಸ್ಟೋರಿ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ನಾನು ಸಂಪೂರ್ಣವಾಗಿ ರೆಡಿ ಆಗಿರುತ್ತೇನೆ. ಆದರೆ ಗಂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಬಳಿ ಗಂಡನ ಬಗ್ಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್​, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದರು. ನಟಿ ಶಿಲ್ಪಾ ಶೆಟ್ಟಿ ಮದುವೆ ಆದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದುಕೊಂಡರು. ಸೋನಮ್ ಕಪೂರ್​ ಕೂಡ ಮದುವೆ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟಿವ್​ ಇಲ್ಲ. ಈ ಸಾಲಿಗೆ ಈಗ ಕಾಜಲ್​ ಕೂಡ ಸೇರಿಕೊಂಡರೂ ಅಚ್ಚರಿ ಇಲ್ಲ ಎಂದು ಚರ್ಚೆ ಆಗಿತ್ತು.

ಇದನ್ನೂ ಓದಿ: ನಟಿ ಕಾಜಲ್ ಅವರ ಹೃದಯ ವಿಶಾಲತೆ ಬಗ್ಗೆ ಎಲ್ಲರಿಂದ ಮೆಚ್ಚುಗೆ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್