ಕಮಲ್ ಹಾಸನ್ ಮುಂದಿನ ವಿಚಾರಣೆ ಯಾವಾಗ? ಅಲ್ಲಿಯವರೆಗೆ ‘ಥಗ್ ಲೈಫ್’ ಚಿತ್ರದ ಗತಿ ಏನು?

ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಸದ್ಯ ಸಿನಿಮಾ ವಿವಾದದಲ್ಲಿದೆ. ಕನ್ನಡದ ಹುಟ್ಟು ತಮಿಳಿನಿಂದ ಎಂಬ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ ಕಮಲ್ ಹಾಸನ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ಅವರಿಗೆ ಛೀಮಾರಿ ಹಾಕಿದ್ದು, ಜೂನ್ 10ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

ಕಮಲ್ ಹಾಸನ್ ಮುಂದಿನ ವಿಚಾರಣೆ ಯಾವಾಗ? ಅಲ್ಲಿಯವರೆಗೆ ‘ಥಗ್ ಲೈಫ್’ ಚಿತ್ರದ ಗತಿ ಏನು?
ಕಮಲ್

Updated on: Jun 04, 2025 | 11:22 AM

‘ಥಗ್ ಲೈಫ್’ ಸಿನಿಮಾದ (Thug Life Movie) ನಾಯಕ ಕಮಲ್ ಹಾಸನ್ ಅವರು ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳುವ ಮೂಲಕ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಸದ್ಯ ಅವರು ಕ್ಷಮೆ ಕೇಳುವಂತೆ ಪಟ್ಟು ಹಿಡಿಯಲಾಗಿದೆ. ಆದರೆ, ಕ್ಷಮೆ ಕೇಳುವ ಮಾತೇ ಇಲ್ಲ ಎಂದು ಕಮಲ್ ಹಾಸನ್ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಈ ವಿಚಾರ ಕೋರ್ಟ್ ಅಂಗಳದಲ್ಲಿ ಇದೆ. ಈ ಪ್ರಕರಣದ ಮುಂದಿನ ವಿಚಾರಣೆ ಹಾಗೂ ಅಲ್ಲಿಯವರೆಗೆ ‘ಥಗ್ ಲೈಫ್’ ಚಿತ್ರದ ಗಿತ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

‘ಥಗ್ ಲೈಫ್’ ಸಿನಿಮಾಗೆ ಕಮಲ್ ಹಾಸನ್ ಅವರೇ ನಿರ್ಮಾಪಕರು. ಈ ಕಾರಣಕ್ಕೆ ಅವರಿಗೆ ಕನ್ನಡಿಗರ ಬಳಿ  ಕ್ಷಮೆ ಕೇಳಲೇಬೇಕು ಎಂದು ಯಾರೂ ಒತ್ತಡ ಹೇರುತ್ತಿಲ್ಲ. ಈ ಕಾರಣದಿಂದ ಕಮಲ್ ಹಾಸನ್ ಅವರು ಇಷ್ಟು ದಿನ ಕ್ಷಮೆ ಕೇಳುವುದಿಲ್ಲ ಎಂದು ಹೇಳುತ್ತಲೇ ಬಂದರು. ಸಿನಿಮಾ ರಿಲೀಸ್​ಗೆ ಆಗುತ್ತಿರುವ ಅಡ್ಡಿಯನ್ನು ತಪ್ಪಿಸಲು ಅವರು ನೇರವಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ರಿಲೀಸ್​ಗೆ ಭದ್ರತೆ ಒದಗಿಸುವಂತೆ ಕೇಳಿದ್ದರು. ಆದರೆ, ಕೋರ್ಟ್​ನಲ್ಲಿ ಅವರಿಗೆ ಹಿನ್ನಡೆ ಆಗಿದೆ.

ಕರ್ನಾಟಕ ಹೈಕೋರ್ಟ್ ಸದ್ಯ ಕಮಲ್ ಹಾಸನ್​ಗೆ ಛೀಮಾರಿ ಹಾಕಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಈ ರೀತಿ ಮಾಡಬಾರದು ಎಂದು ಕೋರ್ಟ್ ಕಿವಿಮಾತು ಹೇಳಿದೆ. ಅಲ್ಲದೆ, ಕ್ಷಮೆ ಕೇಳಿ ಸಮಸ್ಯೆ ಪರಿಹರಿಸಿಕೊಳ್ಳುವ ಅವಕಾಶವೂ ಇದೆ ಎಂದು ಹೇಳಿದೆ. ಸದ್ಯ ಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನ ಕಾಣುವುದಿಲ್ಲ.

ಇದನ್ನೂ ಓದಿ
ದಾಖಲೆ ಭರ್ಜರಿ ದಾಖಲೆ... ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
ಖುಷಿ ತಡೆಯಲಾರದೆ ತಣ್ಣೀರು ಸುರಿದು ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ
RCB ಮ್ಯಾಚ್ ನೋಡುತ್ತಲೇ ಮುಗಿದಯೋಯ್ತು ವೈಷ್ಣವಿ ‘ಸಂಗೀತ್’ ಕಾರ್ಯಕ್ರಮ
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಇದನ್ನೂ ಓದಿ: ರಾಜ್ಯದಲ್ಲಿ ‘ಥಗ್ ಲೈಫ್’ ಬಿಡುಗಡೆ ಇಲ್ಲ, ಹೈಕೋರ್ಟ್​ಗೆ ವಕೀಲರ ಮಾಹಿತಿ

ಜೂನ್ 10ರ ಬಳಿಕ ಸಭೆ

ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿ ಇದೆ. ಹೀಗಾಗಿ, ಕನ್ನಡ ಫಿಲ್ಮ್​ ಚೇಂಬರ್​ನಲ್ಲಿ ಪ್ರಕರಣ ಕೋರ್ಟ್​ನಲ್ಲಿ ಇತ್ಯರ್ಥ ಆಗುವವರೆಗೆ ಯಾವುದೇ ಸಭೆ ನಡೆಯುವುದಿಲ್ಲ. ಕೋರ್ಟ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಫಿಲ್ಮ್ ಚೇಂಬರ್​ನ ಮುಂದಿನ ನಿರ್ಧಾರ ನಿಗದಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:22 am, Wed, 4 June 25