AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಪಿ ಬಾಲಸುಬ್ರಮಣ್ಯಂ ಚಿತ್ರದಲ್ಲಿ ಹಾಡಿದ್ದ ರಾಜ್​ಕುಮಾರ್; ಅಣ್ಣಾವ್ರ ಅಂಜಿಕೆ ಏನಿತ್ತು?  

ರಾಜ್​ಕುಮಾರ್ ಅವರ ಅದ್ಭುತ ಗಾಯನ ಪ್ರತಿಭೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಒಮ್ಮೆ ಎಸ್​ಪಿಬಿ ನಟಿಸಿದ್ದ ‘ಮುದ್ದಿನ ಮಾವ’ ಚಿತ್ರಕ್ಕಾಗಿ ರಾಜ್​ಕುಮಾರ್ ಹಾಡಿದ್ದರು. ಎಸ್​ಪಿಬಿ ಅವರು ತಮ್ಮ ಪಾತ್ರದ ಹಾಡನ್ನು ರಾಜ್​ಕುಮಾರ್ ಹಾಡಬೇಕೆಂದು ಬಯಸಿದ್ದರು. ರಾಜ್​ಕುಮಾರ್ ಅವರು ಹಾಡಿದ ಬಳಿಕ, ಹಾಡು ಜನರಿಗೆ ಇಷ್ಟವಾಗುತ್ತದೆಯೇ ಎಂಬ ಆತಂಕ ಅವರಿಗೆ ಇತ್ತು

ಎಸ್​ಪಿ ಬಾಲಸುಬ್ರಮಣ್ಯಂ ಚಿತ್ರದಲ್ಲಿ ಹಾಡಿದ್ದ ರಾಜ್​ಕುಮಾರ್; ಅಣ್ಣಾವ್ರ ಅಂಜಿಕೆ ಏನಿತ್ತು?  
ರಾಜ್​ಕುಮಾರ್​-ಎಸ್​ಪಿಬಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 04, 2025 | 9:20 AM

Share

ರಾಜ್​ಕುಮಾರ್ (Rajkumar) ಕಂಠ ಸಿರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಅದ್ಭುತವಾಗಿ ಹಾಡುತ್ತಿದ್ದರು. ಅವರ ಕಂಠದಿಂದ ಮೂಡಿ ಬಂದ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಮತ್ತು ಇದಕ್ಕೆ ಅವರಿಗೆ ಅವಾರ್ಡ್​ಗಳೂ ಕೂಡ ಸಂದಿವೆ. ಒಮ್ಮೆ ಎಸ್​ಪಿಬಿ ನಟಿಸಿದ್ದ ಸಿನಿಮಾಗಾಗಿ ರಾಜ್​ಕುಮಾರ್ ಹಾಡಿದ್ದರು. ಈ ಘಟನೆಯನ್ನು ಎಸ್​ಪಿಬಿ ಅವರು ಅಂದು ನೆನಪಿಸಿಕೊಂಡಿದ್ದರು. ಬಾಲಸುಬ್ರಮಣ್ಯಂ ಅವರ ಜನ್ಮದಿನದ ಸಂದರ್ಭದಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳೋಣ.

ಎಸ್​ಪಿಬಿ ಹಾಗೂ ಶಶಿಕುಮಾರ್ ಅವರು ‘ಮುದ್ದಿನ ಮಾವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್ ಮಾವನ ಪಾತ್ರದಲ್ಲಿ ಎಸ್​ಪಿಬಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರದ ತೂಕ ಹೆಚ್ಚಲು ರಾಜ್​ಕುಮಾರ್ ಹಾಡೂ ಕೂಡ ಕಾರಣ ಆಯಿತು. ಈ ಸಿನಿಮಾಗಾಗಿ ರಾಜ್​ಕುಮಾರ್ ಅವರು ‘ದೀಪಾವಳಿ.. ದೀಪಾವಳಿ’ ಹಾಡು ಹಾಗೂ ‘ಶಿವನೆ’ ಹಾಡನ್ನು ಹಾಡಿದ್ದರು.

ಹೀರೋ ಹಾಡನ್ನು ಎಸ್​ಪಿಬಿ ಹಾಡುವುದಾಗಿ ತೀರ್ಮಾನಿಸಲಾಯಿತು. ಆದರೆ, ಎಸ್​ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್​ಕುಮಾರ್. ಆದರೆ, ಹಾಡಲು ಅವರು ಒಪ್ಪಬೇಕಲ್ಲ. ಇದೇ ಅಂಜಿಕೆಯಲ್ಲಿ ತಂಡದವರು ರಾಜ್​ಕುಮಾರ್ ಅವರನ್ನು ಸಂಪರ್ಕಿಸಿದರು.

ಎಸ್​ಪಿಬಿ ಅವರು ರಾಘವೇಂದ್ರ ರಾಜ್​ಕುಮಾರ್ ಬಳಿ ತಮ್ಮ ಇಂಗಿತ ಹೊರಹಾಕಿದರು. ಅವರು ಹೋಗಿ ರಾಜ್​ಕುಮಾರ್ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ರಾಜ್​ಕುಮಾರ್ ಅವರು ‘ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ’ ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.

ಇದನ್ನೂ ಓದಿ: ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ

ಹಾಡು ಹಾಡಿದ ಬಳಿಕ ರಾಜ್​ಕುಮಾರ್ ಕರೆ ಮಾಡಿ ಹಾಡು ಹೇಗಿದೆ? ಎಲ್ಲಾದರೂ ತಪ್ಪಾಗಿದೆಯಾ ಎಂದೆಲ್ಲ ಕೇಳಿದ್ದರಂತೆ. ಜನರು ಇದ್ದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಭಯ ಅವರಿಗೆ ಇತ್ತು. ಈ ಘಟನೆಯನ್ನು ಎಸ್​ಪಿಬಿ ಅವರು ಈ ಮೊದಲು ನೆನಪಿಸಿಕೊಂಡಿದ್ದರು. ಎಸ್​ಪಿಬಿ ಅವರು ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಅವರ ಹಾಡುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಎಸ್​ಪಿಬಿ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ