AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಿಕಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಉತ್ತಮ ನಟಿ; ಕನ್ನಡತಿಗೆ ನಟ ಕಾರ್ತಿ ಮೆಚ್ಚುಗೆ

ತಮಿಳಿನ 'ಸರ್ದಾರ್ 2' ಸಿನಿಮಾದಲ್ಲಿ ನಟಿಸುತ್ತಿರುವ ಕನ್ನಡಿಗ ಬೆಡಗಿ ಆಶಿಕಾ ರಂಗನಾಥ್ ನಟನೆಯನ್ನು ನಟ ಕಾರ್ತಿ ಮುಕ್ತಕಂಠದಿಂದ ಹೊಗಳಿದ್ದಾರೆ. ಆಶಿಕಾರನ್ನು ಕೇವಲ ಗ್ಲಾಮರಸ್ ನಟಿಯಾಗಿ ನೋಡದೆ, ಒಬ್ಬ ಪರಿಪೂರ್ಣ ಅಭಿನೇತ್ರಿಯಾಗಿ ಪರಿವರ್ತಿಸಲು ನಿರ್ದೇಶಕ ಮಿತ್ರನ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದು, ಸೆಪ್ಟೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ.

ಆಶಿಕಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಉತ್ತಮ ನಟಿ; ಕನ್ನಡತಿಗೆ ನಟ ಕಾರ್ತಿ ಮೆಚ್ಚುಗೆ
ಆಶಿಕಾ-ಕಾರ್ತಿImage Credit source: Ashika/Karthi Instagram
ರಾಜೇಶ್ ದುಗ್ಗುಮನೆ
|

Updated on: Sep 03, 2026 | 7:37 AM

Share

ಮುಖ್ಯಾಂಶಗಳು

  • ಆಶಿಕಾ ಡ್ಯಾನ್ಸ್ ಮತ್ತು ನಟನೆಗೆ ಕಾರ್ತಿ ಫಿದಾ
  • ನಟಿಯ ನಿಜವಾದ ಪ್ರತಿಭೆ ಹೊಗಳಿದ ತಮಿಳು ನಟ
  • ಗ್ಲಾಮರ್ ಗೊಂಬೆಗೆ ವಿಭಿನ್ನ ಗೆಟಪ್

ಕನ್ನಡ ಚಿತ್ರರಂಗದಲ್ಲಿ ‘ಚುಟು ಚುಟು’ ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ಆಶಿಕಾ ರಂಗನಾಥ್, ಇದೀಗ ತಮಿಳಿನ ಬಹುನಿರೀಕ್ಷಿತ ‘ಸರ್ದಾರ್ 2’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಎಸ್. ಮಿತ್ರನ್ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 10ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ಚಿತ್ರದ ನಟ ಕಾರ್ತಿ, ನಟಿ ಆಶಿಕಾ ರಂಗನಾಥ್ ಅವರ ನಟನೆ ಹಾಗೂ ಸಿನಿಮಾದಲ್ಲಿನ ಅವರ ಪಾತ್ರದ ಬಗ್ಗೆ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

‘ಸರ್ದಾರ್ 2’ ಈವೆಂಟ್​​ನಲ್ಲಿ ಮಾತನಾಡುತ್ತಾ ಆಶಿಕಾ ಅವರನ್ನು ಕೊಂಡಾಡಿದ ಕಾರ್ತಿ, ‘ಆಶಿಕಾ ಅತ್ಯುತ್ತಮ ಡ್ಯಾನ್ಸರ್. ಆದರೆ, ಈ ಸಿನಿಮಾದಲ್ಲಿ ನಾವು ಅವರನ್ನು ಉದ್ದೇಶಪೂರ್ವಕವಾಗಿಯೇ ಮೂಕಿ ಪಾತ್ರದಲ್ಲಿ ತೋರಿಸಿದ್ದೇವೆ. ಇಡೀ ಸಿನಿಮಾದಲ್ಲಿ ಅವರು ಒಂದೇ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ‘ಆಯಿರತ್ತಿಲ್ ಒರುವನ್’ ಸಿನಿಮಾದಲ್ಲಿ ನಟಿ ಆಂಡ್ರಿಯಾ ಇಡೀ ಸಿನಿಮಾದ ಉದ್ದಕ್ಕೂ ಒಂದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ಪಾತ್ರ ನನಗೆ ನೆನಪಾಯಿತು’ ಎಂದು ಹೇಳಿದ್ದಾರೆ.

‘ಸಾಮಾನ್ಯವಾಗಿ ಆಶಿಕಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿದರೆ ಅವರು ಅತ್ಯಂತ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಹಾಗಾಗಿ ಈ ಸಿನಿಮಾದಲ್ಲಿ ಅವರನ್ನು ಇಡೀ ಚಿತ್ರದುದ್ದಕ್ಕೂ ಹೀಗೇಕೆ ಇಟ್ಟಿದ್ದಾರೆ ಎಂದು ಪ್ರೇಕ್ಷಕರಿಗೆ ಅನಿಸಬಹುದು. ಆದರೆ, ನಂತರ ನಾನು ಅವರ ತೆಲುಗು ಸಿನಿಮಾವೊಂದನ್ನು ನೋಡಿ, ಅವರು ಕೇವಲ ಗ್ಲಾಮರ್‌ಗೆ ಸೀಮಿತವಲ್ಲ, ಅತ್ಯುತ್ತಮ ನಟಿ ಎಂದು ಅರ್ಥವಾಯಿತು. ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ಆಶಿಕಾರನ್ನು ಬರಿ ಕಮರ್ಷಿಯಲ್ ನಟಿಯಾಗಿ ಮಾತ್ರವಲ್ಲದೆ, ಒಬ್ಬ ಪೂರ್ಣಪ್ರಮಾಣದ ಪರಿಪೂರ್ಣ ಅಭಿನೇತ್ರಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷ, ಅಭಿಮಾನಿಗಳೊಟ್ಟಿಗೆ ಸಂಭ್ರಮಿಸಿದ ಆಶಿಕಾ ರಂಗನಾಥ್: ಚಿತ್ರಗಳ ನೋಡಿ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಗಮನಸೆಳೆದಿದ್ದ ಆಶಿಕಾ ರಂಗನಾಥ್ ಅವರಿಗೆ ‘ಸರ್ದಾರ್ 2’ ದೊಡ್ಡ ಮಟ್ಟದ ತಿರುವು ನೀಡುವ ಭರವಸೆ ಮೂಡಿಸಿದೆ. ಸೆಪ್ಟೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ಆಶಿಕಾ ಬೇಡಿಕೆ ಮತ್ತಷ್ಟು ಹೆಚ್ಚಲಿದೆಯೇ ಎಂಬ ಕುತೂಹಲ ಮೂಡಿದೆ.

ಪ್ರಶ್ನೆ:  ಆಶಿಕಾ ರಂಗನಾಥ್ ನಟಿಸುತ್ತಿರುವ ತಮಿಳು ಸಿನಿಮಾ ಯಾವುದು? ಉತ್ತರ: ಸರ್ದಾರ್ 2

ಪ್ರಶ್ನೆ: ಸರ್ದಾರ್ 2 ಚಿತ್ರದ ಹೀರೋ ಯಾರು? ಉತ್ತರ: ಕಾರ್ತಿ

ಪ್ರಶ್ನೆ: ಸರ್ದಾರ್ 2 ಸಿನಿಮಾ ರಿಲೀಸ್ ಯಾವಾಗ? ಉತ್ತರ: ಸೆಪ್ಟೆಂಬರ್ 3

Follow Us