ಮೈಸೂರಿನಲ್ಲಿ ಖುಷ್ಬೂ; ಸರ್ಜರಿಗೆ ಒಳಗಾದ ಫೋಟೋ ಹಂಚಿಕೊಂಡ ನಟಿ

ತ್ತೀಚಿನ ವರ್ಷಗಳಲ್ಲಿ ಖುಷ್ಬೂ ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಿದ್ದಾರೆ. ಸಖತ್​ ಸ್ಲಿಮ್ ಆಗಿರೋ ಫೋಟೋ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೈಸೂರಿನಲ್ಲಿ ಖುಷ್ಬೂ; ಸರ್ಜರಿಗೆ ಒಳಗಾದ ಫೋಟೋ ಹಂಚಿಕೊಂಡ ನಟಿ
ಖುಷ್ಬೂ
Updated By: ರಾಜೇಶ್ ದುಗ್ಗುಮನೆ

Updated on: Apr 24, 2022 | 4:01 PM

ನಟಿ ಖುಷ್ಬೂ (Khushbu) ಇತ್ತೀಚೆಗೆ ಸಖತ್ ಬ್ಯುಸಿ ಆಗಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ನಟನೆ, ನಿರ್ಮಾಣದಲ್ಲಿ ಬ್ಯುಸಿ ಆಗಿರುವ ಅವರು ಬಿಜೆಪಿ ಪಕ್ಷದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅವರು ಸರ್ಜರಿಗೆ ಒಳಗಾಗಿದ್ದಾರೆ. ಕೈ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ (Surgery) ಅವರು ಒಳಗಾಗಿದ್ದಾರೆ. ಇದಾದ ಮರುದಿನವೇ ಅವರು ಸಿನಿಮಾ ಕೆಲಸಕ್ಕೆ ಸಂಬಂಧಿಸಿ ಮೈಸೂರಿಗೆ ಬಂದಿದ್ದಾರೆ. ಈ ಬಗ್ಗೆ ಅವರು ಅಪ್​ಡೇಟ್ ನೀಡಿದ್ದಾರೆ.

ಖುಷ್ಬೂ ಅವರ ವಯಸ್ಸು 50 ದಾಟಿದೆ. ಈ ವಯಸ್ಸಿನಲ್ಲೂ ಅವರು ಯುವತಿಯರನ್ನೂ ನಾಚಿಸುವಂತಹ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಅವರು ಫಿಟ್​ನೆಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಿದ್ದಾರೆ. ಸಖತ್​ ಸ್ಲಿಮ್ ಆಗಿರೋ ಫೋಟೋ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಇತ್ತೀಚೆಗೆ ಅವರು ಕೈ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಕಂಡು ಬಂದಿದೆ. ‘ರಿಕವರಿ ಆಗುತ್ತಿದ್ದೇನೆ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

ಈಗ ಸೀರೆ ಉಟ್ಟಿರುವ ಫೋಟೋವನ್ನು ಖುಷ್ಬೂ ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ಇರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ‘ಮೈಸೂರಿನಿಂದ ಹೆಲೋ ಹೇಳುತ್ತಿದ್ದೇನೆ. ಬೇಗ ಗುಣವಾಗಲು ಕೆಲಸ ಒಳ್ಳೆಯ ಔಷಧ’ ಎಂದಿದ್ದಾರೆ ಅವರು. ಖುಷ್ಬೂ ಹಾಗೂ ಸುಂದರ್ ಒಟ್ಟಾಗಿ ‘ಅವ್ನಿ ಸಿನಿಮ್ಯಾಕ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಖುಷ್ಬೂ ಅವರು ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ಇಲ್ಲಿಯ ನಟ-ನಟಿಯರ ಜತೆ ಅವರಿಗೆ ಒಳ್ಳೆಯ ಒಡನಾಟವಿದೆ. ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ ನಂತರ ಅವರು ಬೆಂಗಳೂರಿಗೆ ಆಗಮಿಸಿ ಶಿವರಾಜ್​ಕುಮಾರ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಇದನ್ನೂ ಓದಿ: ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ 

ಪದೇಪದೇ ಕರೆ ಮಾಡಿ ಪತಿ ಸುಂದರ್​ಗೆ ತೊಂದರೆ ಕೊಡಬೇಡಿ; ಖುಷ್ಬೂಗೆ ಯುವನಟಿಯ ಎಚ್ಚರಿಕೆ