ಕಿಯಾರಾ ಅಡ್ವಾಣಿ ಮೂಲ ಹೆಸರೇನು? ಸಲ್ಲು ಸೂಚನೆಯಿಂದ ಹೆಸರು ಬದಲಿಸಿಕೊಂಡಿದ್ದ ನಟಿ

ಕಿಯಾರಾ ಅಡ್ವಾಣಿ ಬಳಿ ಕೆಲವು ದುಬಾರಿ ಕಾರುಗಳು ಇವೆ. ಆಡಿ ಎ8ಎಲ್, ಬಿಎಂಡಬ್ಲ್ಯೂ 530ಡಿ ಕಾರುಗಳು ಇವರ ಬಳಿ ಇವೆ. ಆಗಾಗ ಅವರು ಈ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ವಂತ ಹಣದಲ್ಲಿ ಈ ಕಾರುಗಳನ್ನು ಅವರು ಖರೀದಿ ಮಾಡಿದ್ದಾರೆ. 

ಕಿಯಾರಾ ಅಡ್ವಾಣಿ ಮೂಲ ಹೆಸರೇನು? ಸಲ್ಲು ಸೂಚನೆಯಿಂದ ಹೆಸರು ಬದಲಿಸಿಕೊಂಡಿದ್ದ ನಟಿ
ಕಿಯಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 31, 2024 | 7:27 AM

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರಿಗೆ ಇಂದು (ಜುಲೈ 30) ಜನ್ಮದಿನ. ಅವರು ‘ಶೇರ್ಷಾ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಈಗ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಾ ಇದ್ದಾರೆ. ಅವರು ಬಾಲಿವುಡ್​ನ ಕ್ಯೂಟ್​ ಕಪಲ್ ಎಂದೇ ಫೇಮಸ್ ಆಗಿದ್ದಾರೆ. ಬರ್ತ್​ಡೇಗಾಗಿ ಕಿಯಾರಾ ಹಾಗೂ ಸಿದ್ದಾರ್ಥ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕಿಯಾರಾ ಅಡ್ವಾಣಿ ಅವರಿಗೆ ಇಲ್ಲಿದೆ ಮಾಹಿತಿ.

ಕಿಯಾರಾ ಅಡ್ವಾಣಿ ಅವರ ಮೂಲ ಹೆಸರು ಆಲಿಯಾ ಅಡ್ವಾಣಿ. ಈಗಾಗಲೇ ಬಾಲಿವುಡ್​ನಲ್ಲಿ ಆಲಿಯಾ ಭಟ್ ಮಿಂಚುತ್ತಿದ್ದಾರೆ. ಈ ಕಾರಣಕ್ಕೆ ಹೆಸರನ್ನು ಬದಲಿಸಿಕೊಳ್ಳುವಂತೆ ಕಿಯಾರಾಗೆ ಸಲ್ಮಾನ್ ಖಾನ್ ಅವರು ಸಲಹೆ ಕೊಟ್ಟಿದ್ದರು. ಈ ಸಲಹೆಯನ್ನು ಕಿಯಾರಾ ಒಪ್ಪಿದರು. ಯಾವುದೇ ಗೊಂದಲ ಬೇಡ ಎನ್ನುವ ಕಾರಣಕ್ಕೆ ತಮ್ಮ ಹೆಸರನ್ನು ಆಲಿಯಾ ಬದಲು ಕಿಯಾರಾ ಎಂದು ಬದಲಿಸಿಕೊಂಡರು. ಕಿಯಾರಾ ಅವರು ಮುಂಬೈನಲ್ಲಿ ಶಿಕ್ಷಣ ಪಡೆದಿದ್ದಾರೆ.

ಕಿಯಾರಾ ಅಡ್ವಾಣಿ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಕಬಿರ್ ಸಿಂಗ್’ ಸಿನಿಮಾ. ಇದರ ಜೊತೆಗೆ ‘ಗುಡ್ ನ್ಯೂಸ್’, ‘ಶೇರ್ಷಾ’ ರೀತಿಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಶೇರ್ಷಾ’ ಸಿನಿಮಾದಲ್ಲಿ ಸಿದ್ದಾರ್ಥ್ ಹಾಗೂ ಕಿಯಾರಾ ಒಟ್ಟಾಗಿ ಕಾಣಿಸಿಕೊಂಡರು. ಇವರ ಮಧ್ಯೆ ಪ್ರೀತಿ ಮೂಡೋಕೆ ಈ ಸಿನಿಮಾ ಕಾರಣ ಆಯ್ತು ಎನ್ನಲಾಗಿದೆ.

ಕಿಯಾರಾ ಅಡ್ವಾಣಿ ಅವರ ನೆಟ್​ವರ್ತ್​ 40 ಕೋಟಿ ರೂಪಾಯಿ ಎನ್ನಲಾಗಿದೆ. ಕಿಯಾರಾ ಅಡ್ವಾಣಿ ಅವರು ಮುಂಬೈನಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದು ಸಖತ್ ಮಾಡರ್ನ್ ಆಗಿದೆ. ಜಿಮ್ ಸೇರಿ ಅನೇಕ ವ್ಯವಸ್ಥೆ ಇದರಲ್ಲಿ ಇದೆ. ಇದರ ಜೊತೆಗೆ ಇನ್ನೂ ಕೆಲವು ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಕಿಯಾರಾಗಿಂತ ಸಿದ್ದಾರ್ಥ್ ಸಾಕಷ್ಟು ಶ್ರೀಮಂತ.

ಕಿಯಾರಾ ಅಡ್ವಾಣಿ ಬಳಿ ಕೆಲವು ದುಬಾರಿ ಕಾರುಗಳು ಇವೆ. ಆಡಿ ಎ8ಎಲ್, ಬಿಎಂಡಬ್ಲ್ಯೂ 530ಡಿ ಕಾರುಗಳು ಇವರ ಬಳಿ ಇವೆ. ಆಗಾಗ ಅವರು ಈ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ವಂತ ಹಣದಲ್ಲಿ ಈ ಕಾರುಗಳನ್ನು ಅವರು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಪತಿ ಜೊತೆ ಕಿಯಾರಾ ಸುತ್ತಾಟ, ಧರಿಸಿರುವ ಸೂಟ್​ನ ಬೆಲೆ ಎಷ್ಟು ಲಕ್ಷ ಗೊತ್ತೆ?

ಕಿಯಾರಾ ಹಾಗೂ ಸಿದ್ದಾರ್ಥ್​ಗೆ ಸುತ್ತಾಟ ಎಂದರೆ ಸಖತ್ ಇಷ್ಟ. ಈ ದಂಪತಿ ಆಗಾಗ ಒಟ್ಟಾಗಿ ಸುತ್ತಾಟ ನಡೆಸುತ್ತಾರೆ. ಒಟ್ಟಿಗೆ ಹಲವು ಕಡೆಗಳಲ್ಲಿ ಪ್ರವಾಸ ತೆರಳುತ್ತಾರೆ. ಮದುವೆಗೂ ಮದೊಲೇ ಈ ದಂಪತಿ, ಮಾಲ್ಡೀವ್ಸ್, ಸ್ವಿಸ್​ ಆಲ್ಪ್ಸ್ ಮೊದಲಾದ ಕಡೆಗೆ ತೆರಳಿದ್ದರು. ಇಬ್ಬರಿಗೂ ಫಿಟ್ನೆಸ್​ ಬಗ್ಗೆ ಸಖತ್ ಆಸಕ್ತಿ. ಹೀಗಾಗಿ ಒಟ್ಟಾಗಿ ಜಿಮ್ ಮಾಡುತ್ತಾರೆ.

ಕಿಯಾರಾ 2022ರಲ್ಲಿ ‘ಭೂಲ್ ಭುಲಯ್ಯ 2’, ‘ಜುಗ್ ಜುಗ್ ಜಿಯೋ’ ಸಿನಿಮಾ ಮೂಲಕ ಗೆದ್ದಿದ್ದಾರೆ. ಸದ್ಯ ಅವರು ‘ಗೇಮ್ ಚೇಂಜರ್’ ಹಾಗೂ ‘ವಾರ್ 2’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್