AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಫಿ ವಿತ್ ಕರಣ್’ ಕೊನೆ ಸೀಸನ್: ಪ್ರಸಾರ ಯಾವಾಗ? ಎಲ್ಲಿ?

ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್​​ಬೀರ್, ರಣ್ವೀರ್ ಇನ್ನೂ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ಕಾಫಿ ವಿತ್ ಕರಣ್​​ ಶೋನಲ್ಲಿ ಭಾಗವಹಿಸಿದ್ದಾರೆ. ಹಲವಾರು ಕ್ರಿಕೆಟಿಗರು ಸಹ ಈ ಶೋನಲ್ಲಿ ಭಾಗಿ ಆಗಿದ್ದುಂಟು. ಈ ವೆರಗೆ ಎಂಟು ಸೀಸನ್​​ ಪ್ರದರ್ಶನಗೊಂಡಿದೆ. ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಸೀಸನ್​​ನ ಪ್ರಸಾರದ ದಿನಾಂಕ ಘೋಷಣೆಯ ಜೊತೆಗೆ ಕರಣ್ ಜೋಹರ್ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

‘ಕಾಫಿ ವಿತ್ ಕರಣ್’ ಕೊನೆ ಸೀಸನ್: ಪ್ರಸಾರ ಯಾವಾಗ? ಎಲ್ಲಿ?
Koffee With Karan
ಮಂಜುನಾಥ ಸಿ.
|

Updated on: Sep 30, 2026 | 3:54 PM

Share

ಮುಖ್ಯಾಂಶಗಳು

  • ಮತ್ತೆ ಶುರು ಆಗುತ್ತಿದೆ ಕಾಫಿ ವಿತ್ ಕರಣ್
  • ಕಾಫಿ ವಿತ್ ಕರಣ್ ಶೋ ಸೀಸನ್ 9
  • ಆದರೆ ಇದೇ ಟಾಕ್ ಶೋನ ಕೊನೆಯ ಸೀಸನ್ ಆಗಿರಲಿದೆ

‘ಕಾಫಿ ವಿತ್ ಕರಣ್’ ಭಾರತೀಯ ಟಿವಿ ಲೋಕದಲ್ಲಿ ಹಲವು ವರ್ಷಗಳಿಂದಲೂ ಪ್ರಸಾರವಾಗುತ್ತಿರುವ ಬಲು ಜನಪ್ರಿಯ ಟಾಕ್ ಶೋ. 2004 ರಲ್ಲಿ ಪ್ರಸಾರ ಆರಂಭಿಸಿದ್ದ ಈ ಶೋಈಗ 22 ವರ್ಷಗಳನ್ನು ಪೂರೈಸಿದೆ. ಹಲವಾರು ವಿವಾದಗಳು, ಹಲವು ಆಪ್ತ ಕ್ಷಣಗಳನ್ನು ನೀಡಿರುವ ಈ ಶೋ ಇದೀಗ ಕೊನೆಗೊಳ್ಳುತ್ತಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ಭಾಗವಹಿಸಿರುವ ಈ ಶೋ 22 ವರ್ಷಗಳ ಬಳಿಕ ಅಂತ್ಯವಾಗುತ್ತಿದ್ದು, ಈ ಶೋನ ಕೊನೆಯ ಸೀಸನ್​​ ಪ್ರಸಾರದ ಸಮಯ, ದಿನಾಂಕವನ್ನು ಇದೀಗ ಘೋಷಣೆ ಮಾಡಲಾಗಿದೆ.

ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು 22 ವರ್ಷಗಳಿಂದಲೂ ಈ ಶೋ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್​​ಬೀರ್, ರಣ್ವೀರ್ ಇನ್ನೂ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ಕಾಫಿ ವಿತ್ ಕರಣ್​​ ಶೋನಲ್ಲಿ ಭಾಗವಹಿಸಿದ್ದಾರೆ. ಹಲವಾರು ಕ್ರಿಕೆಟಿಗರು ಸಹ ಈ ಶೋನಲ್ಲಿ ಭಾಗಿ ಆಗಿದ್ದುಂಟು. ಈ ವೆರಗೆ ಎಂಟು ಸೀಸನ್​​ ಪ್ರದರ್ಶನಗೊಂಡಿದೆ. ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಸೀಸನ್​​ನ ಪ್ರಸಾರದ ದಿನಾಂಕ ಘೋಷಣೆಯ ಜೊತೆಗೆ ಕರಣ್ ಜೋಹರ್ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

‘ಕಾಫಿ ವಿತ್ ಕರಣ್’ ನಿರೂಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಶೋನ 9ನೇ ಸೀಸನ್ ಅನ್ನು ಕೊನೆಯ ಸೀಸನ್ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ‘ಒನ್ ಲಾಸ್ಟ್ ಕಪ್, ಒನ್ ಲಾಸ್ಟ್ ಟೈಮ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಶೋ ಅಕ್ಟೋಬರ್ 14ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದು ‘ಕಾಫಿ ವಿತ್ ಕರಣ್’ ಅವರ ಶೋನ ಕೊನೆಯ ಸೀಸನ್​​ ಆಗಿದೆ. ಈ ಸೀಸನ್​​ ಬಳಿಕ ‘ಕಾಫಿ ವಿತ್ ಕರಣ್’ ಪ್ರಸಾರ ಆಗುವುದಿಲ್ಲ.

ಇದನ್ನೂ ಓದಿ:‘ಎಚ್​​2ಓ’ ಜೋಡಿ: ಮತ್ತೆ ಪ್ರಭುದೇವ ಜೊತೆಗೆ ಉಪೇಂದ್ರ ಸಿನಿಮಾ

ಶೋ ಬಗ್ಗೆ ಭಾವುಕ ವಿಷಯ ಹಂಚಿಕೊಂಡಿರುವ ಕರಣ್ ಜೋಹರ್, 22 ವರ್ಷಗಳ ಹಿಂದೆ, ಅಂದರೆ 2004ರ ಜೂನ್‌ನಲ್ಲಿ ನಾನು ನನ್ನ ತಂದೆಗೆ ಈ ಶೋ ಬಗ್ಗೆ ಹೇಳಿದ್ದೆ. ನಾನು ಟಾಕ್ ಶೋ ಮಾಡಬೇಕು ಎಂದುಕೊಂಡಿದ್ದೇನೆ ಎಂದಿದ್ದೆ. ನಿನ್ನ ಗೆಳೆಯರೊಟ್ಟಿಗೆ ನೀನು ಪ್ರತಿದಿನ ಮಾತನಾಡುತ್ತೀಯ, ಅದನ್ನು ರೆಕಾರ್ಡ್ ಮಾಡಿ ಕೊಟ್ಟರೆ ಯಾರು ನಿನಗೆ ದುಡ್ಡು ಕೊಡುತ್ತಾರೆ ಎಂದು ಕೇಳಿದ್ದರು. ನಾನು ತಂದೆಯೊಂದಿಗೆ ಈ ಬಗ್ಗೆ ಚರ್ಚಿಸಿದ್ದ ತಿಂಗಳಲ್ಲೇ ನನ್ನ ತಂದೆ ನಿಧನ ಹೊಂದಿದರು. ಆ ಬಳಿಕ ಆಗಸ್ಟ್ ತಿಂಗಳಲ್ಲಿ ನಾನು ಅದರ ಮೊದಲ ಕಂತನ್ನು ಚಿತ್ರೀಕರಣ ಮಾಡಿದ್ದೆ. ಈ ವರೆಗೆ 161 ಎಪಿಸೋಡ್ ಪ್ರಸಾರ ಆಗಿವೆ. ಹಲವಾರು ಗೆಳೆಯರು, ಆಪ್ತರು, ಕುಟುಂಬಗಳನ್ನು ನಾನು ಶೋಗೆ ಕರೆದು ಮಾತನಾಡಿದ್ದೇನೆ. ಅದೆಲ್ಲ ಅದ್ಭುತ ಅನುಭವ ಎಂದು ಕರಣ್ ಜೋಹರ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು