ಪ್ರಭಾಸ್ ಮುಂದಿನ ಸಿನಿಮಾದಲ್ಲಿ ವಿದೇಶಿ ಸೂಪರ್ ಸ್ಟಾರ್

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಅಂಥಹಾ ಸೂಪರ್ ಸ್ಟಾರ್ ಗಳು ನಟಿಸಿದ್ದಾರೆ. ಇದೀಗ ಪ್ರಭಾಸ್​ರ ಮುಂದಿನ ಸಿನಿಮಾದಲ್ಲಿ ವಿದೇಶಿ ಸೂಪರ್ ಸ್ಟಾರ್ ಒಬ್ಬರು ನಟಿಸಲಿದ್ದಾರೆ.

ಪ್ರಭಾಸ್ ಮುಂದಿನ ಸಿನಿಮಾದಲ್ಲಿ ವಿದೇಶಿ ಸೂಪರ್ ಸ್ಟಾರ್
Follow us
ಮಂಜುನಾಥ ಸಿ.
|

Updated on: Jul 09, 2024 | 12:42 PM

ಪ್ರಭಾಸ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಭಾರಿ ಕಲೆಕ್ಷನ್ ಮಾಡಿದೆ. ‘ಕಲ್ಕಿ 2898 ಎಡಿ’ ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ. ಇದರ ನಡುವೆ ಪ್ರಭಾಸ್​ರ ಮುಂದಿನ ಸಿನಿಮಾಗಳ ಬಗ್ಗೆಯೂ ಕುತೂಹಲ ಹೆಚ್ಚಿದೆ. ಈಗಾಗಲೇ ಮೂರು ಸಿನಿಮಾಗಳನ್ನು ಪ್ರಭಾಸ್ ಘೋಷಣೆ ಮಾಡಿ ಆಗಿದೆ. ‘ರಾಜಾ ಡಿಲಕ್ಸ್’, ‘ಸಲಾರ್ 2’ ಹಾಗೂ ‘ಸ್ಪಿರಿಟ್’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದರಲ್ಲಿ ‘ಸ್ಪಿರಿಟ್’ ಸಿನಿಮಾದ ಬಗ್ಗೆ ಭಾರಿ ಕುತೂಲವಿದೆ. ಈ ಸಿನಿಮಾವನ್ನು ‘ಅರ್ಜುನ್ ರೆಡ್ಡಿ’, ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೊಸದೊಂದು ಅಪ್​ಡೇಟ್ ಹೊರಬಿದ್ದಿದೆ.

ಇತ್ತೀಚೆಗೆ ಬಿಡುಗಡೆ ಆದ ಪ್ರಭಾಸ್​ರ ‘ಕಲ್ಕಿ’ ಸಿನಿಮಾನಲ್ಲಿ ಭಾರತದ ಇತರೆ ಸೂಪರ್ ಸ್ಟಾರ್​ಗಳನ್ನು ತೆರೆ ಮೇಲೆ ಒಟ್ಟಿಗೆ ತರಲಾಗಿತ್ತು. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋನೆ ಇತರರನ್ನು ಪ್ರಭಾಸ್ ಜೊತೆಗೆ ಒಟ್ಟಿಗೆ ತೆರೆ ಮೇಲೆ ತೋರಿಸಲಾಗಿತ್ತು. ಆದರೆ ‘ಸ್ಪಿರಿಟ್’ ಸಿನಿಮಾದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದೇಶಿ ಸೂಪರ್ ಸ್ಟಾರ್ ಒಬ್ಬರನ್ನು ಪ್ರಭಾಸ್ ಜೊತೆಗೆ ನಟಿಸಲು ಕರೆತರಲಾಗುತ್ತಿದೆ. ಹಾಗೆಂದು ಈ ವಿದೇಶಿ ಸೂಪರ್ ಸ್ಟಾರ್ ಹಾಲಿವುಡ್​ನವರಲ್ಲ.

ಇದನ್ನೂ ಓದಿ:ಶೀಘ್ರವೇ ಪ್ರಭಾಸ್ ಮದುವೆ; ದೊಡ್ಡ ಸೂಚನೆ ಕೊಟ್ಟ ದೊಡ್ಡಮ್ಮ ಶ್ಯಾಮಲಾ ದೇವಿ

ಇತ್ತೀಚೆಗೆ ಕೊರಿಯನ್ ಸಿನಿಮಾಗಳು ವಿಶ್ವದೆಲ್ಲೆಡೆ ಅಬ್ಬರ ಸೃಷ್ಟಿಸಿವೆ. ವಿಶೇಷವಾಗಿ ಕೋವಿಡ್ ಬಳಿಕ ಕೋರಿಯನ್ ಸಿನಿಮಾಗಳ ಮಾರುಕಟ್ಟೆ ಸುಮಾರು 1000 ಪಟ್ಟು ಹೆಚ್ಚಾಗಿದೆ. ಹಾಲಿವುಡ್​ಗಿಂತಲೂ ಅದ್ಭುತವಾದ ಸಿನಿಮಾಗಳು ದಕ್ಷಿಣ ಕೊರಿಯಾದಲ್ಲಿ ನಿರ್ಮಾಣವಾಗುತ್ತಿವೆ. ಅದ್ಭುತವಾದ ನಟರು ಅಲ್ಲಿದ್ದಾರೆ. ಆ ಚಿತ್ರರಂಗದ ಸ್ಟಾರ್ ನಟ ಇದೀಗ ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ.

‘ಸ್ಪಿರಿಟ್’ ಸಿನಿಮಾ ಪ್ರಮಾಣಿಕ ನೇವಿ ಅಧಿಕಾರಿಯೊಬ್ಬನ ಕತೆ ಎನ್ನಲಾಗುತ್ತಿದೆ. ಪ್ರಭಾಸ್ ನೇವಿ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಕೊರಿಯಾ ಚಿತ್ರರಂಗದ ಸ್ಟಾರ್ ನಟ ಮಾ ಡೋಂಗ್ ಸೋಕ್ ನಟಿಸಲಿದ್ದಾರೆ. ಎರಡು ದಶಕದಿಂದಲೂ ಚಿತ್ರರಂಗದಲ್ಲಿರುವ ಮಾ ಡಂಗ್ ಸೂಕ್ ಹಲವಾರು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲ್ಟ್ ಎನಿಸಿಕೊಂಡಿರುವ ‘ಟ್ರೈನ್ ಟು ಬೂಸಾನ್’, ‘ಒನ್ ಆನ್ ಒನ್’ ಹಾಲಿವುಡ್ ಸಿನಿಮಾ ‘ಎಟರ್ನಲ್ಸ್’, ‘ದಿ ಕ್ರಾನಿಕಲ್ಸ್ ಆಫ್ ಇವಿಲ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್