‘ಕೋಟಿಗೊಬ್ಬ 3’ ರಿಲೀಸ್​ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್​ ಮಾಡಿದ್ರು: ಸುದೀಪ್​ ಸ್ಫೋಟಕ ಆರೋಪ

‘ಕೋಟಿಗೊಬ್ಬ 3’ ರಿಲೀಸ್​ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್​ ಮಾಡಿದ್ರು: ಸುದೀಪ್​ ಸ್ಫೋಟಕ ಆರೋಪ
ಸುದೀಪ್​

‘ಭೂಮಿಕಾ ಚಿತ್ರಮಂದಿರಕ್ಕೆ ಫೋನ್​ ಕರೆ ಮಾಡಿ ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದಿದ್ದಾರೆ. ಆಡಿಯೋ ಸಮೇತ ನಿಮ್ಮ ಮುಂದೆ ಬರುತ್ತೇವೆ’ ಎಂದು ಸುದೀಪ್​ ಅವರು ಟಿವಿ9 ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಹೇಳಿದ್ದಾರೆ.

TV9kannada Web Team

| Edited By: Rajesh Duggumane

Nov 19, 2021 | 1:45 PM


ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಆದರೆ ಅಂದುಕೊಂಡ ದಿನವೇ (ಅ.14) ಚಿತ್ರ ರಿಲೀಸ್​ ಆಗಲು ಸಾಧ್ಯವಾಗಲಿಲ್ಲ. ಒಂದು ದಿನ ತಡವಾಗಿ, ಅಂದರೆ ಅ.15ರಂದು ‘ಕೋಟಿಗೊಬ್ಬ 3’ ತೆರೆಕಂಡಿತು. ಈ ಚಿತ್ರವನ್ನು ಪ್ರದರ್ಶನ ಮಾಡಬೇಡಿ ಎಂದು ಕೆಲವರು ಭೂಮಿಕಾ ಚಿತ್ರಮಂದಿರಕ್ಕೆ ಫೋನ್​ ಮಾಡಿ ಹೇಳಿದ್ದಾರೆ ಎಂದು ಸುದೀಪ್​ ಆರೋಪಿಸಿದ್ದಾರೆ. ಅದಕ್ಕೆ ತಮ್ಮ ಬಳಿ ಸಾಕ್ಷಿ ಕೂಡ ಇದೆ ಎಂದು ಅವರು ಹೇಳಿದ್ದಾರೆ. ಟಿವಿ9 ಜೊತೆಗಿನ ಎಕ್ಸ್​ಕ್ಲೂಸೀವ್​ ಸಂದರ್ಶನದಲ್ಲಿ ಕಿಚ್ಚ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

‘ಮೊನ್ನೆ ನಡೆದ ಘಟನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಸಿನಿಮಾಗೆ ಸಂಬಂಧಿಸದ ವ್ಯಕ್ತಿಗಳಿಂದ ತೊಂದರೆ ಆಗಿದೆ. ಭೂಮಿಕಾ ಚಿತ್ರಮಂದಿರಕ್ಕೆ ಫೋನ್​ ಕರೆ ಮಾಡಿ ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದಿದ್ದಾರೆ. ಆಡಿಯೋ ಸಮೇತ ನಿಮ್ಮ ಮುಂದೆ ಬರುತ್ತೇವೆ’ ಎಂದು ಸುದೀಪ್​ ಹೇಳಿದ್ದಾರೆ.

‘ತೊಂದರೆ ಕೊಟ್ಟವರ ಸಿನಿಮಾ ರಿಲೀಸ್​ ಆಗುವುದು ಬಾಕಿ ಇದೆ. ಈಗ ಟೈಮ್​ ಬಂದಿದೆ. ಕಾಲಾಯ ತಸ್ಮೈ ನಮಃ. ಸೂರಪ್ಪ ಬಾಬುಗೆ ಸೂಕ್ತ ಎನಿಸಿದರೆ ಮೋಸ ಮಾಡಿದ ವಿತರಕರ ವಿರುದ್ಧ ಕಾನೂನು ಸಮರ ಮಾಡಲಿ’ ಎಂದು ಸುದೀಪ್​ ಹೇಳಿದ್ದಾರೆ.

‘ನಾನು ಮೊದಲಿಂದ ಫೈಟ್​ ಮಾಡಿಕೊಂಡು ಬಂದವನು. ಯಾವ ಷಡ್ಯಂತ್ರಕ್ಕೂ ಹೆದರುವುದಿಲ್ಲ. ಎಲ್ಲ ಷಡ್ಯಂತ್ರವನ್ನು ನಾನು ದಾಟಿಕೊಂಡು ಬಂದಿದ್ದೇನೆ. ನಮ್ಮ ಹತ್ರ ಇದೆಲ್ಲ ಬೇಡ. ಇದನ್ನು ನಾನು ಅಹಂನಿಂದ ಹೇಳುವುದಿಲ್ಲ. ಅಂಥವರಿಗೆ ಭಗವಂತ ಪಾಠ ಕಲಿಸುತ್ತಾನೆ. ಕೆಲವರ ಜೊತೆ ನಾನು ಮಾತನಾಡದೇ ಇರಬಹುದು. ಆದರೆ ಕಲೆಗೆ ನಾವು ಬೆಲೆ ಕೊಡುತ್ತೇವೆ. ಆದರೆ ಕೆಲವು ಚಿಲ್ಲರೆ ವ್ಯಕ್ತಿಗಳು ಇಂಥ ಷಡ್ಯಂತ್ರದ ಕೆಲಸ ಮಾಡುತ್ತಾರೆ’ ಎಂದು ಸುದೀಪ್​ ಹೇಳಿದ್ದಾರೆ.

‘ನನ್ನ ವಿರುದ್ಧ ಮೊದಲಿಂದಲೂ ಷಡ್ಯಂತ್ರ ನಡೆಯುತ್ತಲೇ ಇದೆ. ಕೆಲವರು ಕಣ್ಣಿಗೆ ಕಾಣದ ರೀತಿಯಲ್ಲಿ ಷಡ್ಯಂತ್ರ ರೂಪಿಸಿದ್ದಾರೆ. ಅದು ಅವರ ವ್ಯಕ್ತಿತ್ವ. ಚಿಲ್ಲರೆ ಬುದ್ಧಿ ತೋರಿಸುತ್ತಿದ್ದಾರೆ. ಇದಕ್ಕೆ ಆಡಿಯೋ ಸಹಿತ ಸಾಕ್ಷಿ ಸಿಕ್ಕಿದೆ. ಫೈಟ್‌ನಲ್ಲಿ 2 ರೀತಿ ಇದೆ. ಬ್ಯಾಟಲ್‌ ಮತ್ತು ವಾರ್. ಬ್ಯಾಟಲ್‌ನಲ್ಲಿ ನಿಮ್ಮ ಎದುರಾಳಿ ಯಾರೆಂದು ತಿಳಿದಿರುತ್ತದೆ. ಎದುರುಗಡೆ ಇರುವವನಿಗೂ ಗಂಡಸ್ತನ ಇರುತ್ತದೆ. ಆದರೆ ವಾರ್‌ನಲ್ಲಿ ಯಾರೆಂದು ಗೊತ್ತೇ ಇರುವುದಿಲ್ಲ’ ಎಂದು ಸುದೀಪ್​ ಖಡಕ್​ ಸಂದೇಶ ರವಾನಿಸಿದ್ದಾರೆ.

ಸಲ್ಮಾನ್​ ಖಾನ್​ ಜೊತೆಗಿನ ಸಿನಿಮಾ ಬಗ್ಗೆ:

‘ಸಲ್ಮಾನ್​ ಖಾನ್​ ನನಗೆ ಫ್ಯಾಮಿಲಿ ಇದ್ದಂತೆ. ಆದರೆ ಅದನ್ನು ನಾವು ಗ್ರ್ಯಾಂಟೆಡ್​ ಆಗಿ ತೆಗೆದುಕೊಳ್ಳಬಾರದು. ಅವರ ತಂದೆ ಜೊತೆ ಮಾತನಾಡಿದ್ದೇನೆ. ಬಂದು ಭೇಟಿ ಮಾಡಿ ಅಂತ ಹೇಳಿದ್ದರು. ನಂಗೆ ಹೋಗೋಕೆ ಆಗಲಿಲ್ಲ. ಆಮೇಲೆ ಅವರು ರಷ್ಯಾಗೆ ಹೊರಟುಹೋದ್ರು. ಈಗ ಹೋಗಿ ಕಥೆ ಹೇಳಬೇಕು. ಅವರಿಗೆ ತುಂಬ ಇಷ್ಟ ಆಗುತ್ತದೆ ಎಂದುಕೊಂಡಿದ್ದೇನೆ. ಕನ್ನಡದಲ್ಲಿ ನಾನು ನಟಿಸುತ್ತೇನೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಮಾಡಿದರೆ ಚೆಂದ. ಪ್ರಯತ್ನ ಮಾಡುತ್ತೇನೆ. ಎರಡೂ ಕಡೆ ನಾನೇ ಮಾಡಬೇಕು ಎಂಬ ಸ್ವಾರ್ಥ ಇಲ್ಲ. ಸಲ್ಮಾನ್​ ಖಾನ್​ ನೀಡುವ ಆತಿಥ್ಯ ಚೆನ್ನಾಗಿರುತ್ತದೆ. ಅವರ ಜೊತೆಗಿನ ಸ್ನೇಹ ನಮಗೆ ವರವಾಗಿ ಬಂದಿದೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ:

ಸುದೀಪ್​ ವಿರುದ್ಧ ಕುತಂತ್ರ ರೂಪಿಸಿದ ದುಷ್ಟಶಕ್ತಿಗಳು ಯಾರು? ಎಲ್ಲವನ್ನೂ ವಿವರಿಸಿದ ಜಾಕ್​ ಮಂಜು

Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್​ನಿಂದ​ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್​; ಅಂಥ ವಿಶೇಷ ಇದರಲ್ಲೇನಿದೆ?

Follow us on

Related Stories

Most Read Stories

Click on your DTH Provider to Add TV9 Kannada