Leena Manimekalai: ಕಾಳಿ ಬಳಿಕ ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋ ಹಾಕಿದ ಲೀನಾ ಮಣಿಮೇಕಲೈ
Leena Manimekalai Controversy: ಕಾಳಿ ಪೋಸ್ಟರ್ ವಿವಾದದ ಬಳಿಕ ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಮತ್ತೊಂದು ಪೋಸ್ಟ್ ವೈರಲ್ ಆಗುತ್ತಿದೆ. ಇದು ಅನೇಕರ ಟೀಕೆಗೆ ಗುರಿ ಆಗುತ್ತಿದೆ.
ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರು ದಿನಕ್ಕೊಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಕಾಳಿ ದೇವಿಯ (Kaali) ಪೋಸ್ಟರ್ ಹಂಚಿಕೊಂಡಿದ್ದು ಸುದ್ದಿ ಆಗಿತ್ತು. ಅವಹೇಳನಕಾರಿಯಾಗಿ ಕಾಳಿ ದೇವಿಯನ್ನು ಚಿತ್ರಿಸಲಾಗಿದೆ ಎಂಬ ಆರೋಪ ಎದುರಾದ ಬೆನ್ನಲ್ಲೇ ಟ್ವಿಟರ್ನಿಂದ ಆ ಪೋಸ್ಟರ್ ಅನ್ನು ತಡೆ ಹಿಡಿಯಲಾಯಿತು. ಲೀನಾ ಮಣಿಮೇಕಲೈ ಅವರು ಇಷ್ಟಕ್ಕೇ ಸುಮ್ಮನಾಗಿಲ್ಲ. ಈಗ ಶಿವ ಮತ್ತು ಪಾರ್ವತಿ ವೇಷಧಾರಿಗಳು ಧೂಮಪಾನ (Smoking) ಮಾಡುತ್ತಿರುವ ಫೋಟೋವನ್ನು ಅವರೀಗ ಹಂಚಿಕೊಂಡಿದ್ದಾರೆ. ಇದು ಮತ್ತೆ ವಿವಾದಕ್ಕೆ ಕಾರಣ ಆಗುವಂತಿದೆ. ಅನೇಕರು ಈ ಪೋಸ್ಟ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಚಾರಕ್ಕಾಗಿಯೇ ಲೀನಾ ಮಣಿಮೇಕಲೈಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
Kangana Ranaut: ‘ಶಿವಸೇನೆ ಹನುಮಾನ್ ಚಾಲೀಸ ಬ್ಯಾನ್ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್
Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ
ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್
ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ
— Leena Manimekalai (@LeenaManimekali) July 7, 2022
ಈ ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಕಮೆಂಟ್ಗಳು ಬಂದಿವೆ. ಅನೇಕರು ಲೀನಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಳಿ ದೇವಿಯ ಪೋಸ್ಟರ್ ಕಾರಣದಿಂದ ಹೊತ್ತಿಕೊಂಡ ವಿವಾದದ ಬೆಂಕಿಗೆ ಬೇಕಂತಲೇ ತುಪ್ಪ ಸುರಿಯುವ ಉದ್ದೇಶದಿಂದ ಲೀನಾ ಈ ರೀತಿ ಮಾಡಿದ್ದಾರೆ ಎಂಬುದು ನೆಟ್ಟಿಗರ ಆರೋಪ.
ಕಾಳಿ ದೇವಿಯ ಪೋಸ್ಟರ್ ಆಕ್ಷೇಪಾರ್ಹ ರೀತಿಯಲ್ಲಿ ಇತ್ತು ಎಂಬ ಕಾರಣಕ್ಕೆ ಅನೇಕರು ಅದನ್ನು ವಿರೋಧಿಸಿದರು. ಪೋಸ್ಟರ್ ತಡೆ ಹಿಡಿಯುವಂತೆ ಟ್ವಿಟರ್ ಸಂಸ್ಥೆಗೆ ಸರ್ಕಾರದಿಂದ ಸೂಚನೆ ನೀಡಲಾಯಿತು. ಅದನ್ನು ಟ್ವಿಟರ್ ಸಂಸ್ಥೆ ಪಾಲಿಸಿದೆ. ಅದರ ಪರಿಣಾಮವಾಗಿ ಜುಲೈ 5ರಿಂದ ಭಾರತದಲ್ಲಿರುವ ಟ್ವಿಟರ್ ಬಳಕೆದಾರರಿಗೆ ಆ ಪೋಸ್ಟರ್ ಕಾಣಿಸುತ್ತಿಲ್ಲ. ಅದರ ಬೆನ್ನಲ್ಲೇ ಲೀನಾ ಅವರು ಶಿವ-ಪಾರ್ವತಿ ವೇಷಧಾರಿಗಳ ಈ ಫೋಟೋ ಹಂಚಿಕೊಂಡು ಮತ್ತೆ ಸುದ್ದಿ ಆಗುತ್ತಿದ್ದಾರೆ.
ಲೀನಾ ಮಣಿಮೇಕಲೈ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು. ತಮಿಳುನಾಡಿನವರಾದ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಈಗ ವಿವಾದದಿಂದ ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ.