ವೀಕೆಂಡ್ ಮೇಲೆ ಕಣ್ಣಿಟ್ಟ ವಿಜಯ್ ದೇವರಕೊಂಡ ಫ್ಯಾನ್ಸ್; ಸಿಗಲಿದೆಯೇ ಶುಭ ಸುದ್ದಿ?
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷ್ ಆರ್ಟ್ಸ್ ಕೂಡ ಕಲಿತಿದ್ದರು. ಒಂದೂವರೆ ವರ್ಷ ಶ್ರಮ ಹಾಕಿ ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದರು.

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಿದೆ. ಈ ಚಿತ್ರಕ್ಕಾಗಿ ಕಾದಿದ್ದ ಫ್ಯಾನ್ಸ್ ಮೊದಲ ದಿನವೇ ಮುಗಿಬಿದ್ದು ಚಿತ್ರ ವೀಕ್ಷಿಸಿದ್ದರು. ಈ ಕಾರಣದಿಂದ ಮೊದಲ ದಿನ ಸಿನಿಮಾ 25-26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಎರಡನೇ ದಿನದ ಕಲೆಕ್ಷನ್ ರಿಪೋರ್ಟ್ ಬಂದಿದೆ. ಇದು ಫ್ಯಾನ್ಸ್ಗೆ ಕೊಂಚ ಬೇಸರ ತರಿಸಿದೆ. ಆದರೆ, ವೀಕೆಂಡ್ನಲ್ಲಿ ‘ಲೈಗರ್’ (Liger Movie) ಘರ್ಜಿಸಬಹುದು ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ಇದ್ದಾರೆ.
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷ್ ಆರ್ಟ್ಸ್ ಕೂಡ ಕಲಿತಿದ್ದರು. ಒಂದೂವರೆ ವರ್ಷ ಶ್ರಮ ಹಾಕಿ ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದರು. ಸಿಹಿ ಪದಾರ್ಥ, ಮದ್ಯವನ್ನು ತ್ಯಜಿಸಿದ್ದರು. ಸುಮಾರು ಮೂರ್ನಾಲ್ಕು ವರ್ಷ ಈ ಚಿತ್ರಕ್ಕಾಗಿ ಅವರು ಮುಡಿಪಿಟ್ಟಿದ್ದಾರೆ. ಈ ಕಾರಣದಿಂದ ‘ಲೈಗರ್’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಹಾಕಿದ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಕ್ಕಿಲ್ಲ.
‘ಲೈಗರ್’ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ವರ್ಷನ್ನಿಂದ ಈ ಚಿತ್ರಕ್ಕೆ 19 ಕೋಟಿ ರೂಪಾಯಿ ಹರಿದು ಬಂದಿದ್ದು ವಿಶೇಷ. ಎರಡನೇ ದಿನ ಅಂದರೆ ಶುಕ್ರವಾರ (ಆಗಸ್ಟ್ 26) ಈ ಚಿತ್ರದ ಗಳಿಕೆ ತೀವ್ರ ಗತಿಯಲ್ಲಿ ಇಳಿಕೆ ಕಂಡಿದೆ. ಈ ಸಿನಿಮಾ ಶುಕ್ರವಾರ 9-10 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟೂ ಕಲೆಕ್ಷನ್ ಎರಡನೇ ದಿನಕ್ಕೆ 35 ಕೋಟಿ ರೂಪಾಯಿ ದಾಟಿದೆ.
ಇದನ್ನೂ ಓದಿ: Liger Box Office Collections: ಪುಷ್ಪಾ ಚಿತ್ರವನ್ನೇ ಹಿಂದಿಕ್ಕಿದ ಲೈಗರ್: ಬಾಕ್ಸಾಫೀಸ್ನಲ್ಲಿ ವಿಜಯ್ ಬಾಕ್ಸಿಂಗ್ ಕಮಾಲ್..!
ಇಂದು (ಆಗಸ್ಟ್ 27) ಹಾಗೂ ನಾಳೆ (ಆಗಸ್ಟ್ 28) ಚಿತ್ರದ ಕಲೆಕ್ಷನ್ ಹೆಚ್ಚಬಹುದು. ಈ ದಿನಗಳಲ್ಲಿ ಕಚೇರಿಗಳಿಗೆ ರಜೆ ಇರುತ್ತದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕ ಹೊರತಾಗಿಯೂ ಕೆಲವರು ಸಿನಿಮಾ ವೀಕ್ಷಿಸಲು ತೆರಳುತ್ತಾರೆ. ವಿಜಯ್ ಫ್ಯಾನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ‘ಲೈಗರ್’ ಗಳಿಕೆ ಹೆಚ್ಚಬಹುದು. ಸೋಮವಾರ (ಆಗಸ್ಟ್ 29) ಚಿತ್ರ ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ಮಾಡುತ್ತದೆ ಎಂಬುದರ ಮೇಲೂ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.








