AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಯಾಳಂನ ಈ ಹತ್ತು ಹಾರರ್​ ಚಿತ್ರಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬಾರದು..

ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಹಾರರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಬ್ಲ್ಯಾಕ್ ಮ್ಯಾಜಿಕ್ ಕಥೆಯನ್ನು ಚಿತ್ರ ಹೊಂದಿದೆ.

ಮಲಯಾಳಂನ ಈ ಹತ್ತು ಹಾರರ್​ ಚಿತ್ರಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬಾರದು..
ಹಾಹರ್ ಸಿನಿಮಾಗಳು
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 19, 2024 | 7:24 AM

Share

ಮಲಯಾಳಂ ಚಿತ್ರರಂಗದ (Mollywood) ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದೆ. ಸಸ್ಪೆನ್ಸ್​ ಥ್ರಿಲ್ಲರ್ ಹಾಗೂ ಹಾರರ್ ಸಿನಿಮಾಗಳನ್ನು ಮಾಡಲು ಇವರು ಎತ್ತಿದ ಕೈ. ಈ ಕಾರಣದಿಂದಲೇ ಮಲಯಾಳಂ ಸಿನಿಮಾಗಳು ಹೆಚ್ಚು ಇಷ್ಟವಾಗುತ್ತವೆ. ಯಾವುದೇ ಆಡಂಬರ ಇಲ್ಲದೆ, ಸಿಂಪಲ್ ಆಗಿ ಸಿನಿಮಾಗಳನ್ನು ಕಟ್ಟಿ ಕೊಡಲಾಗುತ್ತದೆ. ಇದು ಹೆಚ್ಚು ಜನರಿಗೆ ಇಷ್ಟವಾಗುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ನೀವು ಹಾರರ್ ಪ್ರಿಯರಾಗಿದ್ದರೆ ಈ ಸಿನಿಮಾಗಳು ನಿಮಗೆ ಇಷ್ಟವಾಗಬಹುದು.

ಬ್ರಹ್ಮಯುಗಂ

ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಹಾರರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಬ್ಲ್ಯಾಕ್ ಮ್ಯಾಜಿಕ್ ಕಥೆಯನ್ನು ಚಿತ್ರ ಹೊಂದಿದೆ. ಮಮ್ಮೂಟಿ ನಟನೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಈ ಸಿನಿಮಾ ಐಎಂಡಿಬಿಯಲ್ಲಿ 8+ ರೇಟಿಂಗ್ ಪಡೆದಿದೆ.

ಇಜ್ರಾ

ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಇಜ್ರಾ’ ಸಿನಿಮಾ 2017ರಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಎಲ್ಲ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದು ಸೂಪರ್​ ನ್ಯಾಚುರಲ್ ಹಾರರ್ ಥ್ರಿಲ್ಲರ್ ಫಿಲ್ಮ್. ಈ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ಹಾರರ್ ಮಂದಿ ಇಷ್ಟಪಟ್ಟಿದ್ದಾರೆ. ಆ್ಯಂಟಿಕ್ ಬಾಕ್ಸ್ ಒಂದನ್ನು ಕಥಾ ನಾಯಕ ಖರೀದಿಸುತ್ತಾನೆ. ಅಲ್ಲಿಂದ ಕಥೆ ಆರಂಭ ಆಗುತ್ತದೆ.

ಕುಮಾರಿ

2022ರಲ್ಲಿ ‘ಕುಮಾರಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಮದುವೆ ಬಳಿಕ ಮಹಿಳೆ ಶಾಪಕ್ಕೆ ಒಳಗಾದ ಜಾಗಕ್ಕೆ ತೆರಳುತ್ತಾಳೆ. ಈ ಸಿನಿಮಾದಲ್ಲಿ ಗಿಜು ಜಾನ್, ನಿರ್ಮಲಾ ಸಹದೇವ್, ಜೇಕ್ಸ್ ಬಿಜೋಯ್ ಮೊದಲಾದವರು ನಟಿಸಿದ್ದಾರೆ.

ಭೂತಕಾಲಂ

2022ರಲ್ಲಿ ರಿಲೀಸ್ ಆದ ‘ಭೂತಕಾಲಂ’ ಸಿನಿಮಾ ಸೋನಿಲಿವ್ ಆ್ಯಪ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ಶೇನ್​ ನಿಗಮ್, ರೇವತಿ ಮೊದಲಾದವರು ನಟಿಸಿದ್ದಾರೆ. ಎರಡು ಗಂಟೆಗೂ ಕಡಿಮೆ ಅವಧಿ ಹೊಂದಿರುವ ಈ ಸಿನಿಮಾನ ಹಾರರ್ ಮಂದಿ ಇಷ್ಟಪಟ್ಟಿದ್ದಾರೆ.

ನೀಲವೇಲಿಚಂ

ಟೊವಿನೋ ಥಾಮಸ್ ನಟನೆಯ ‘ನೀಲವೇಲಿಚಂ’ ಸಿನಿಮಾ ಭಿನ್ನವಾಗಿ ಗುರುತಿಸಿಕೊಂಡಿದೆ. ದೆವ್ವ ಇರುವ ಮನೆಯೊಂದರಲ್ಲಿ ಕಥಾ ನಾಯಕ ಬಂದು ಉಳಿದುಕೊಂಡಿರುತ್ತಾನೆ. ಆತನಿಗೆ ಬರೆಯೋ ಹುಚ್ಚು. ಅವನು ಇರುವ ಮನೆಯಲ್ಲೇ ದೆವ್ವ ಇರುತ್ತದೆ. ಆ ಮನೆಯಲ್ಲಿ ಒಂದು ಆತ್ಮಹತ್ಯೆ ನಡೆದಿರುತ್ತದೆ. ಆರಂಭದಲ್ಲಿ ಕುತೂಹಲ ಹುಟ್ಟುಹಾಕುವ ಈ ಸಿನಿಮಾ ನಂತರ ಸಪ್ಪೆ ಎನಿಸುತ್ತದೆ. ಈ ಸಿನಿಮಾ ಧಾರಾವಾಹಿಯ ಫೀಲ್ ಕೊಟ್ಟರೂ ಅಚ್ಚರಿ ಏನಿಲ್ಲ.

ಕೋಲ್ಡ್ ಕೇಸ್

2021ರಲ್ಲಿ ಬಂದ ‘ಕೋಲ್ಡ್ ಕೇಸ್’ ಗಮನ ಸೆಳೆದಿದೆ. ಇದು ಒಟಿಟಿಯಲ್ಲಿ ಲಭ್ಯವಿದೆ. ಪೃಥ್ವಿರಾಜ್​ ಸುಕುಮಾರನ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ. ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ.

ಇದನ್ನೂ ಓದಿ: ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ

9

2018ರಲ್ಲಿ ರಿಲೀಸ್ ಆದ ‘9’ ಸಿನಿಮಾ ಕೂಡ ಹಾರರ್ ಶೈಲಿಯಲ್ಲಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಇದು ಸೈನ್ಸ್ ಫಿಕ್ಷನ್ ಹಾರರ್ ಚಿತ್ರ.

ಉಳಿದ ಸಿನಿಮಾಗಳು

1964ರಲ್ಲಿ ಬಂದ ‘ಭಾರ್ಗವಿ’ ಸಿನಿಮಾ ಕೂಡ ಹಾರರ್ ಶೈಲಿಯಲ್ಲಿ ಮೂಡಿ ಬಂದಿದೆ. ಇದಲ್ಲದೆ ‘ರೋಮಾಂಚನಮ್’ ಸಿನಿಮಾ ಕೂಡ ಗಮನ ಸೆಳೆದಿದೆ. ನೀವು ಹಾರರ್ ಪ್ರಿಯರಾಗಿದ್ದರೆ ಸಮಯ ಸಿಕ್ಕಾಗ ಈ ಚಿತ್ರಗಳನ್ನು ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ