AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ಮದುವೆ ಆದ ಹೀರೋ; ನಟನ ಆಸ್ತಿ ಮೇಲೆ ಹುಡುಗಿಯರ ಕಣ್ಣು?

ಆಗಸ್ಟ್ 27, 2010 ರಂದು ಬಾಲ ಗಾಯಕಿ ಅಮೃತಾ ಸುರೇಶ್ ಅವರನ್ನು ವಿವಾಹವಾದರು. ಅವರಿಗೆ ಆವಂತಿಕಾ ಎಂಬ ಮಗಳಿದ್ದಾಳೆ. ಮೂರು ವರ್ಷಗಳ ಕಾಲ ಬೇರ್ಪಟ್ಟ ನಂತರ, ಇಬ್ಬರೂ 2019 ರಲ್ಲಿ ಕಾನೂನುಬದ್ಧವಾಗಿ ಬೇರ್ಪಟ್ಟರು.

ಮೂರನೇ ಮದುವೆ ಆದ ಹೀರೋ; ನಟನ ಆಸ್ತಿ ಮೇಲೆ ಹುಡುಗಿಯರ ಕಣ್ಣು?
ಕೋಕಿಲಾ-ಬಾಲಾ
ರಾಜೇಶ್ ದುಗ್ಗುಮನೆ
|

Updated on: Oct 23, 2024 | 1:02 PM

Share

ಮಲಯಾಳಂ ನಟ ಬಾಲಾ ಅವರು ಮೂರನೇ ಬಾರಿಗೆ ವಿವಾಹ ಆಗಿದ್ದಾರೆ. ಇವರ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಮೂರನೇ ಮದುವೆ ಎಂದಮಾತ್ರಕ್ಕೆ ಅವರು ಕದ್ದು-ಮುಚ್ಚಿ ತಾಳಿ ಕಟ್ಟಿಲ್ಲ. ಅದ್ದೂರಿಯಾಗಿಯೇ ಈ ವಿವಾಹ ನೆರವೇರಿದೆ. ಇವರು ಮದುವೆ ಆಗಿದ್ದು ಕೋಕಿಲಾ ಅವರನ್ನು. ಎರ್ನಾಕುಲಂನವರಾದ ಇವರು, ಮಾವನ ಮಗಳೇ ಆಗಿದ್ದಾರೆ. ಎರ್ನಾಕುಲಂನ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ.

ಬಾಲಾ ಅವರು ಕೋಕಿಲಾ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ಕೋಕಿಲಾ ತಮ್ಮ ಜೊತೆ ಇದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ‘ಕೋಕಿಲಾ ನನ್ನ ಸಂಬಂಧಿ. ನನ್ನ ತಾಯಿ ನನ್ನ ಮದುವೆ ನೋಡಲು ಇಲ್ಲಿರಬೇಕಿತ್ತು. ಅವರಿಗೆ 74 ವರ್ಷ ವಯಸ್ಸು. ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಅವರಿಗೆ ವಿವಾಹಕ್ಕೆ ಬರಬೇಕು ಎಂದಿತ್ತು. ನನ್ನ ಮದುವೆ ಆಗುವ ಮೂಲಕ ಕೋಕಿಲಾ ಬಾಲ್ಯದ ಕನಸು ಈಡೇರಿದೆ. ನಮಗೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದ. ಕೋಕಿಲಾಗೆ ಮಲಯಾಳಂ ಬರಲ್ಲ. ಇತ್ತೀಚಿನ ವರ್ಷಗಳಲ್ಲಿ ನನ್ನ ಆರೋಗ್ಯ ಸುಧಾರಿಸಿದೆ. ಇದಕ್ಕೆ ಕೋಕಿಲಾ ಕಾರಣ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬೇರೆಯವರ ನೋವಿಗೆ ಕಣ್ಣೀರು ಹಾಕಿದ ಮೋಕ್ಷಿತಾ ಪೈ

ಬಾಲಾ ಅವರಿಗೆ ಇದು ನಾಲ್ಕನೇ ಮದುವೆ. ಮೊದಲು ಬಾಲಾ ಅವರು ಈ ಮೊದಲು ಗಾಯಕಿ ಅಮೃತಾ ಸುರೇಶ್ ಅವರನ್ನು ಮದುವೆ ಆಗಿದ್ದರು. 2010ರಿಂದ 2019ರವರೆಗೆ ಇವರು ಸಂಸಾರ ನಡೆಸಿದ್ದರು. ಈ ದಂಪತಿಗೆ ಒಂದು ಮಗು ಇತ್ತು. ಈ ಬಗ್ಗೆ ಅವರು ಪಬ್ಲಿಕ್​ನಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. 2021ರಿಂದ 2024ರವರೆಗೆ ಎಲಿಜಬೆತ್ ಉದಯಾನ್ ಜೊತೆ ಸಂಸಾರ ನಡೆಸಿದರು. ಬಾಲಾ ಅವರು ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನಲಾಗಿದೆ. ಅವರ ಆಸ್ತಿ ಮೌಲ್ಯ 250 ಕೋಟಿ ರೂಪಾಯಿ ಆಗಿದೆ. ಅವರು ಹಲವು ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.