ಒಂದು ಗೆಲವುನಿಂದ ಬದಲಾದ ನಟ? ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್ ಕಸಿದುಕೊಂಡ್ರು
Marco movie hero: ಒಂದು ಯಶಸ್ಸು ಒಬ್ಬ ವ್ಯಕ್ತಿಯನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ಯುತ್ತದೆ. ಹಾಗೆಯೇ ವ್ಯಕ್ತಿಯ ವ್ಯಕ್ತಿತ್ವವನ್ನೂ ಬದಲಾಯಿಸಿಬಿಡುತ್ತದೆ. ಉನ್ನಿ ಮುಕುಂದನ್ ನಟಿಸಿರುವ ‘ಮಾರ್ಕೊ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಆ ಯಶಸ್ಸು ನಟನ ತಲೆಗೆ ಏರಿದಂತಿದೆ. ಸೆಲ್ಫಿ ಕೇಳಲು ಬಂದ ಅಭಿಮಾನಿಯ ಬಳಿ ದುರ್ವರ್ತನೆ ತೋರಿದ್ದಾನೆ ನಟ.

ಮಲಯಾಳಂ ನಟ ಉನ್ನಿ ಮುಕುಂದನ್ ‘ಮಾರ್ಕೊ’ ಚಿತ್ರದ ಮೂಲಕ ಭಾರತದಾದ್ಯಂತ ಖ್ಯಾತಿ ಪಡೆದ ನಾಯಕರಾದರು. ಅದಕ್ಕೂ ಮೊದಲು, ಅವರು ‘ಜನತಾ ಗ್ಯಾರೇಜ್’, ‘ಭಾಗಮತಿ’, ‘ಯಶೋದ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಖಳನಾಯಕನಾಗಿ ಮಿಂಚಿದ್ದಾರೆ. ಉನ್ನಿ ಮುಕುಂದನ್ ಇತ್ತೀಚೆಗೆ ಹೀರೋ ಆಗಿ ಉತ್ತಮ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ‘ಮಾರ್ಕೊ’ ಚಿತ್ರದ ಮೂಲಕ ಭಾರತಾದ್ಯಂತ ಜನಪ್ರಿಯತೆ ಗಳಿಸಿದರು. ಈಗ ಅವರು ಸುದ್ದಿಯಲ್ಲಿದ್ದಾರೆ. ಅಭಿಮಾನಿಯ ಮೊಬೈಲ್ ಕಿತ್ತುಕೊಂಡು ಸುದ್ದಿ ಆಗಿದ್ದಾರೆ.
‘ಮಾರ್ಕೊ’ ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ಅತ್ಯಂತ ಹಿಂಸಾತ್ಮಕ ಚಲನಚಿತ್ರವೆಂದು ಗುರುತಿಸಲ್ಪಟ್ಟಿದೆ. ‘ಮಾರ್ಕೊ’ ಚಿತ್ರವು ಮಲಯಾಳಂ, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ದಾಖಲೆಯ ಕಲೆಕ್ಷನ್ ಗಳಿಸಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ. ನಾಯಕ ಉನ್ನಿ ಮುಕುಂದನ್ ಹೆಸರೂ ಈಗ ಕೇಳಿ ಬರುತ್ತಿದೆ. ಈಗ ಉನ್ನಿಗೆ ಸಂಬಂಧಿಸಿದ ವಿಡಿಯಫ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Unni Mukundan Angry At Fan ⁉️
— Analyst (@BoAnalyst) February 22, 2025
ಈ ವಿಡಿಯೋದಲ್ಲಿ ಅಭಿಮಾನಿಯೊಬ್ಬರು ಮಾಲ್‌ನಲ್ಲಿ ಕಾಣಿಸಿಕೊಂಡ ಉನ್ನಿ ಮುಕುಂದನ್ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದರು. ಇದಕ್ಕಾಗಿ ಅಭಿಮಾನಿ ನಾಯಕನ ಮುಖದಮೇಲೆ ಕ್ಯಾಮೆರಾ ಹಿಡಿದರು. ಇದು ಮುಕುಂದನ್ ಅವರಿಗೆ ತುಂಬಾ ಸಿಟ್ಟು ತರಿಸಿತು.. ಕೋಪದಿಂದ ಅಭಿಮಾನಿ ಫೋನ್ ಕಸಿದುಕೊಂಡು ಜೇಬಿನಲ್ಲಿಟ್ಟು ಅವರು ಹೊರ ನಡೆದಿದ್ದಾರೆ.
ಇದನ್ನೂ ಓದಿ:100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ
ಅಭಿಮಾನಿ ಬೇಡಿಕೊಂಡ ನಂತರ ಸ್ವಲ್ಪ ಮುಂದೆ ಹೋದ ನಂತರ ಅವನಿಗೆ ಫೋನ್ ಕೊಟ್ಟಂತೆ ತೋರುತ್ತದೆ. ಇದು ಹಳೆಯ ವಿಡಿಯೋನಾ? ಹೊಸ ವಿಡಿಯೋ? ಆದರೆ ಅದು ಸ್ಪಷ್ಟವಾಗಿಲ್ಲ. ಒಟ್ಟಾರೆಯಾಗಿ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಸಿನಿಮಾ ಅಭಿಮಾನಿಗಳು ಮತ್ತು ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಉನ್ನಿ ಮುಕುಂದನ್ ಇಷ್ಟೊಂದು ದುರಹಂಕಾರದಿಂದ ವರ್ತಿಸಬಾರದಿತ್ತು ಮತ್ತು ಅಭಿಮಾನಿಯೂ ತಪ್ಪು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಹಾಗೆ ನಿಮ್ಮ ಮುಖಕ್ಕೆ ಕ್ಯಾಮೆರಾ ಹಾಕುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಒಂದು ಗೆಲುವು ಇಷ್ಟೊಂದು ದುರಹಂಕಾರವನ್ನು ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



