Hide and Seek Review: ಕಿಡ್ನಾಪಿಂಗ್​ ಲೋಕದ ರಹಸ್ಯ ತೆರೆದಿಟ್ಟ ‘ಹೈಡ್ ಆ್ಯಂಡ್​ ಸೀಕ್​’

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಕಥಾನಾಯಕನೇ ಕಿಡ್ನಾಪರ್​. ಆದರೆ ಅವನಿಗಿಂತಲೂ ದೊಡ್ಡ ಮಾಸ್ಟರ್​ ಮೈಂಡ್​ ಒಬ್ಬ ಇದ್ದಾನೆ. ಆತ ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ಇರುವ ಟಾರ್ಗೆಟ್​. ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ವಿಮರ್ಶೆ ಇಲ್ಲಿದೆ.

Hide and Seek Review: ಕಿಡ್ನಾಪಿಂಗ್​ ಲೋಕದ ರಹಸ್ಯ ತೆರೆದಿಟ್ಟ ‘ಹೈಡ್ ಆ್ಯಂಡ್​ ಸೀಕ್​’
ಅನೂಪ್​ ರೇವಣ್ಣ
Follow us
ಮದನ್​ ಕುಮಾರ್​
|

Updated on: Mar 15, 2024 | 7:32 PM

ಸಿನಿಮಾ: ಹೈಡ್​ ಆ್ಯಂಡ್​ ಸೀಕ್​. ನಿರ್ಮಾಣ: ವಸಂತ್​ ರಾವ್​ ಎಂ. ಕುಲಕರ್ಣಿ, ಪುನೀತ್​ ನಾಗರಾಜು. ನಿರ್ದೇಶನ: ಪುನೀತ್​ ನಾಗರಾಜು. ಪಾತ್ರವರ್ಗ: ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​, ರಾಜೇಶ್​ ನಟರಂಗ, ಕೃಷ್ಣ ಹೆಬ್ಬಾಳೆ, ಅರವಿಂದ್​ ರಾವ್​, ಮೈತ್ರಿ ಜಗ್ಗಿ, ಬಲರಾಜ್​ ವಾಡಿ ಮುಂತಾದವರು. ಸ್ಟಾರ್​: 3/5

ನಟ ಅನೂಪ್​ ರೇವಣ್ಣ ಅವರು ಒಂದು ದೀರ್ಘ ಗ್ಯಾಪ್​ನ ಬಳಿಕ ದೊಡ್ಡ ಪರದೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಮಾರ್ಚ್​ 15ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯಿದೆ. ಪುನೀತ್​ ನಾಗರಾಜು ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಾ. ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅವರು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಪಹರಣದ ಕಥೆಯನ್ನು ಕುತೂಹಲಭರಿತವಾಗಿ ವಿವರಿಸುವ ಈ ಸಿನಿಮಾದ ವಿಮರ್ಶೆ ಓದಿ..

ಇದು ಅಪಹರಣದ ಕುರಿತು ಇರುವ ಸಿನಿಮಾ ಎಂಬುದನ್ನು ಟ್ರೇಲರ್​ನಲ್ಲೇ ತಿಳಿಸಲಾಗಿತ್ತು. ಸಿನಿಮಾದ ಆರಂಭದಲ್ಲೇ ಕಥಾನಾಯಕಿಯ ಕಿಡ್ನಾಪ್​ ಆಗುತ್ತದೆ. ಹಾಗಂತ ಆ ಕಿಡ್ನಾಪ್​ ಮಾಡಿರುವುದು ವಿಲನ್​ ಅಲ್ಲ. ಬದಲಿಗೆ, ಕಥಾನಾಯಕನೇ ಅಪಹರಣದ ದಂಧೆಯಲ್ಲಿ ಭಾಗಿ ಆಗಿದ್ದಾನೆ. ಶ್ರೀಮಂತರ ಮಕ್ಕಳನ್ನು ಆತ ಅಪಹರಿಸುತ್ತಾನೆ. ಆದರೆ ಈ ಕಿಡ್ನಾಪಿಂಗ್ ವ್ಯವಹಾರದಲ್ಲಿ ಆತ ಕೂಡ ಒಬ್ಬ ಕೆಲಸಗಾರ ಮಾತ್ರ. ನಿಜವಾದ ಲೀಡರ್​ ಬೇರೆಲ್ಲೋ ಇದ್ದಾನೆ. ಅವನು ಯಾರು ಎಂಬುದನ್ನು ಈತನಕ ನೋಡಿದವರು ಯಾರೂ ಇಲ್ಲ. ಅಂತಹ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚುತ್ತಾರೋ ಇಲ್ಲವೋ ಎಂಬುದು ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ: Photo Movie Review: ಲಾಕ್​ಡೌನ್​ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಶ್ರೀಮಂತರ ಮನೆ ಮಗಳಾದ ಹಾಸಿನಿ ಎಂಬ ಪಾತ್ರದಲ್ಲಿ ಧನ್ಯಾ ರಾಮ್​ಕುಮಾರ್​ ನಟಿಸಿದ್ದಾರೆ. ಅಪಹರಣಕ್ಕೆ ಒಳಗಾದ ಬಳಿಕ ಹಾಸಿನಿಗೆ ಬೇರೆ ಬೇರೆ ಸತ್ಯಗಳು ತಿಳಿಯುತ್ತವೆ. ನಿಧಾನವಾಗಿ ಕಿಡ್ನಾಪರ್​ ಮೇಲೆಯೇ ಆಕೆಗೆ ಪ್ರೀತಿ ಮೂಡುತ್ತದೆ! ಇಂತಹ ಟ್ವಿಸ್ಟ್​ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಕಿಡ್ನಾಪ್​ ಮಾಡಿಸಿದ್ದು ಯಾರು ಎಂಬುದು ಮಧ್ಯಂತರದ ವೇಳೆಗೆ ಗೊತ್ತಾಗಿಬಿಡುತ್ತದೆ. ಹಾಗಂತ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಪಿಕ್ಚರ್ ಅಭಿ ಬಾಕಿ ಹೈ ಎಂಬಂತೆ ಮಧ್ಯಂತರದ ಬಳಿಕ ಇನ್ನೂ ಹೊಸ ವಿವರಗಳು ತೆರೆದುಕೊಳ್ಳುತ್ತವೆ.

ಒಂದು ವ್ಯವಸ್ಥಿತ ಜಾಲದ ಮೂಲಕ ಕಿಡ್ನಾಪ್​ಗಳು ನಡೆಯುತ್ತವೆ ಎಂಬುದನ್ನು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರೇಕ್ಷಕರು ನಿರೀಕ್ಷಿಸಿದಷ್ಟು ಸುಲಭವಾಗಿಲ್ಲ ಆ ಜಾಲ. ಅದನ್ನು ಹಂತ ಹಂತವಾಗಿ ತೆರೆದಿರುವ ಮೂಲಕ ಸಿನಿಮಾದಲ್ಲಿನ ಕೌತುಕವನ್ನು ಕಾಯ್ದುಕೊಳ್ಳಲಾಗಿದೆ. ಕಡೆಗೂ ಆ ಕಿಡ್ನಾಪಿಂಗ್​ ಜಾಲದ ಮಾಸ್ಟರ್​ ಮೈಂಡ್​ ಯಾರು ಎಂಬುದು ಗೊತ್ತಾದಾಗ ಪ್ರೇಕ್ಷಕರಿಗೆ ಅಚ್ಚರಿ ಆಗುತ್ತದೆ. ಆದರೆ ಇಡೀ ಸಿನಿಮಾದ ನಿರೂಪಣೆ ನಿಧಾನಗತಿಯಲ್ಲಿ ಇರುವುದರಿಂದ ಪ್ರೇಕ್ಷಕರಿಗೆ ತಾಳ್ಮೆ ಅಗತ್ಯ. ಇನ್ನು, ಕೆಲವು ಸಂಭಾಷಣೆಗಳು ರಿಪೀಟ್​ ಎನಿಸುವ ಕಾರಣದಿಂದಲೂ ಅವಧಿ ಹೆಚ್ಚಿದೆ ಎನಿಸುತ್ತದೆ. ಕಥೆಯ ವೇಗಕ್ಕೆ ಚುರುಕು ಮುಟ್ಟಿಸಿದ್ದರೆ ಹಾಗೂ ಕೆಲವು ಅನಗತ್ಯ ವಿಷಯಗಳಿಗೆ ಕತ್ತರಿ ಹಾಕಿದ್ದರೆ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಇನ್ನೂ ಆಪ್ತವಾಗುತ್ತಿತ್ತು.

ಹೈಡ್​ ಆ್ಯಂಡ್ ಸೀಕ್​ ಎಂದರೆ ಕಣ್ಣಾಮುಚ್ಚಾಲೆ. ಯಾರು, ಎಲ್ಲಿ ಅಡಗಿಕೊಂಡಿದ್ದಾರೆ ಎಂಬುದನ್ನು ಹುಡುಕಬೇಕು. ಅದೇ ರೀತಿ, ಬೇರೆಯವರ ಕಣ್ಣಿಗೆ ಕಾಣದಂತೆ ಅಡಗಿಕೊಳ್ಳಬೇಕು. ಈ ಸಿನಿಮಾದ ಕಥೆಯಲ್ಲಿ ಬರುವ ಪಾತ್ರಗಳು ಕೂಡ ಇದೇ ನಿಯಮವನ್ನು ಫಾಲೋ ಮಾಡುತ್ತವೆ. ಅಪಹರಣದ ಜಾಲದಲ್ಲಿ ಅಡಗಿಕೊಂಡವರು ಒಬ್ಬೊಬ್ಬರಾಗಿಯೇ ಹೊರಗೆ ಬರುತ್ತಾರೆ. ಹಾಗೆ ಹೊರಗೆ ಬಂದವರು ಬೇರೆಯವರನ್ನು ಹುಡುಕುತ್ತಾರೆ. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗ ಈ ಕಣ್ಣಾಮುಚ್ಚಾಲೆ ಆಟ ಜೋರಾಗುತ್ತದೆ. ಆದರೂ ಕೂಡ ತೀವ್ರತೆಯ ಕೊರತೆ ಕಾಣುತ್ತದೆ.

ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​

ಅನೂಪ್​ ರೇವಣ್ಣ ಅವರ ಪಾತ್ರಕ್ಕೆ ಹೆಚ್ಚಿನ ಹಾವಭಾವಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಿಲ್ಲ. ಆ ಪಾತ್ರಕ್ಕೆ ಇರುವ ಸಂಭಾಷಣೆಗಳು ಕೂಡ ಕಡಿಮೆ. ಹಾಗಾಗಿ ಇರುವ ಅವಕಾಶದಲ್ಲೇ ಅವರು ಪ್ರತಿಭೆ ತೋರಿಸಲು ಪ್ರಯತ್ನಿಸಿದ್ದಾರೆ. ಈ ಅಪಹರಣದ ಕಥೆಯಲ್ಲಿ ಗಂಭೀರತೆ ಕೊಂಚ ತಿಳಿಯಾದಂತೆ ಭಾಸವಾಗುತ್ತದೆ. ಕಾಮಿಡಿ ದೃಶ್ಯಗಳು ಈ ಚಿತ್ರಕ್ಕೆ ಹೆಚ್ಚೇನೂ ಸಹಕಾರಿ ಆಗಿಲ್ಲ. ಇಂತಹ ಕೆಲವು ಅಂಶಗಳನ್ನು ಬದಿಗಿಟ್ಟು ಕೇವಲ ಸಸ್ಪೆನ್ಸ್​ ಮತ್ತು ಟ್ವಿಸ್ಟ್​ಗಳನ್ನು ಎಂಜಾಯ್​ ಮಾಡಿದರೆ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ