ಮಾ.15ಕ್ಕೆ ಸಸ್ಪೆನ್ಸ್​ ಥ್ರಿಲ್ಲರ್​​ ‘ಹೈಡ್​ ಆ್ಯಂಡ್​ ಸೀಕ್​’; ಇದು ಕಿಡ್ನಾಪರ್​ ಕಣ್ಣಾ ಮುಚ್ಚಾಲೆ

ಹತ್ತು ಹಲವು ಸಿನಿಮಾಗಳು ಏಕಕಾಲಕ್ಕೆ ತೆರೆಕಾಣುವ ಸಂದರ್ಭ ಎದುರಾಗಿದೆ. ಅವುಗಳ ನಡುವೆ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಕೂಡ ಬರುತ್ತಿದೆ. ಅನೂಪ್​ ರೇವಣ್ಣ ಹಾಗೂ ಧನ್ಯಾ ರಾಮ್​ಕುಮಾರ್​ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಡಾ. ರಾಜ್​ಕುಮಾರ್ ಮೊಮ್ಮಗಳ ಸಿನಿಮಾ ಎಂಬ ಕಾರಣಕ್ಕೂ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಇದೆ.

ಮಾ.15ಕ್ಕೆ ಸಸ್ಪೆನ್ಸ್​ ಥ್ರಿಲ್ಲರ್​​ ‘ಹೈಡ್​ ಆ್ಯಂಡ್​ ಸೀಕ್​’; ಇದು ಕಿಡ್ನಾಪರ್​ ಕಣ್ಣಾ ಮುಚ್ಚಾಲೆ
ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​
Follow us
ಮದನ್​ ಕುಮಾರ್​
|

Updated on: Mar 10, 2024 | 8:08 PM

ಮಾರ್ಚ್​ ತಿಂಗಳಲ್ಲಿ ಹಲವು ಸಿನಿಮಾಗಳು ತೆರೆಕಾಣುತ್ತಿವೆ. ಈ ವಾರ (ಮಾರ್ಚ್​ 15) ತೆರೆಕಾಣಲಿರುವ ಸಿನಿಮಾಗಳ ಪೈಕಿ ‘ಹೈಡ್​ ಆ್ಯಂಡ್​ ಸೀಕ್​’ (Hide and Seek) ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ (Dhanya Ramkumar) ಅವರು ನಟಿಸಿದ್ದಾರೆ. ಹೈಡ್​ ಆ್ಯಂಡ್​ ಸೀಕ್​ ಎಂದರೆ ಕಣ್ಣಾ ಮುಚ್ಚಾಲೆ. ಈ ಚಿತ್ರದಲ್ಲಿ ನಿರ್ದೇಶಕ ಪುನೀತ್​ ನಾಗರಾಜು ಅವರು ಯಾವ ರೀತಿಯ ಕಣ್ಣಾ ಮುಚ್ಚಾಲೆಯನ್ನು ತೋರಿಸಲಿದ್ದಾರೆ ಎಂಬ ಕೌತುಕ ಮೂಡಿದೆ. ಅಪಹರಣದ ಕುರಿತ ಕಥೆ ಈ ಚಿತ್ರದಲ್ಲಿ ಇದೆ ಎಂಬುದು ಟ್ರೇಲರ್​ನಲ್ಲೇ ಗೊತ್ತಾಗಿದೆ. ಕಥಾನಾಯಕನೇ ಈ ಕಥೆಯಲ್ಲಿ ಕಿಡ್ನಾಪರ್​ ಆಗಿರುತ್ತಾನೆ. ಇದರ ಹೊರತಾಗಿಯೂ ಏನೆಲ್ಲ ಇದೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ.

ಟ್ರೇಲರ್​ ನೋಡಿದಾಗ ಎಲ್ಲ ಪಾತ್ರಗಳಲ್ಲೂ ಬೇರೆ ಬೇರೆ ಶೇಡ್​ ಇರುವುದು ಕಾಣಿಸುತ್ತಿದೆ. ಈ ಮೊದಲು ಧನ್ಯಾ ರಾಮ್​ಕುಮಾರ್​ ಅವರು ‘ನಿನ್ನ ಸನಿಹಕೆ’ ಸಿನಿಮಾದಲ್ಲಿ ಲವ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಈಗ ಅವರ ಪಾತ್ರ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಬೇರೆಯದೇ ರೀತಿಯಲ್ಲಿ ಇರಲಿದೆ. ಸ್ವಲ್ಪ ನೆಗೆಟಿವ್​ ಶೇಡ್​ ಇದೆಯೇ ಎಂಬ ಅನುಮಾನ ಕೂಡ ಇದೆ. ಅದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಬೇಕು.

ಹಲವಾರು ಲೊಕೇಷನ್​ನಲ್ಲಿ ಈ ಸಿನಿಮಾದ ಚಿತ್ರೀಕರಣ ಆಗಿದೆ. ಪಾಳು ಬಿದ್ದ ಕಟ್ಟಡದಲ್ಲೂ ಚಿತ್ರೀಕರಣ ನಡೆದಿದೆ. ಅಂಥ ಸ್ಥಳಗಳಲ್ಲಿ ಭಯಪಟ್ಟುಕೊಂಡು ಧನ್ಯಾ ರಾಮ್​ಕುಮಾರ್​ ಅವರು ಶೂಟಿಂಗ್​ ಮಾಡಿದ್ದಾರೆ. ಅಂಥ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ ಬಳಿಕ ಅವರಿಗೆ ಜ್ವರ ಬಂದಿತ್ತು. ಈ ಸಿನಿಮಾದಲ್ಲಿ ಒಂದು ಘೋಸ್ಟ್​ ಪಾತ್ರ ಇದೆ. ಆ ಬಗ್ಗೆ ಚಿತ್ರತಂಡದವರು ಬಾಯಿ ಬಿಟ್ಟಿಲ್ಲ. ಆ ಪಾತ್ರದ ಹಿಂದಿರುವ ರಹಸ್ಯ ಏನು ಎಂಬುದು ಮಾರ್ಚ್​ 15ರಂದೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ಅನೂಪ್​ ರೇವಣ್ಣ ಜತೆ ಧನ್ಯಾ ರಾಮ್​ಕುಮಾರ್​ ‘ಹೈಡ್​ ಆ್ಯಂಡ್​ ಸೀಕ್​’; ಇಲ್ಲಿದೆ ಮೋಷನ್​ ಪೋಸ್ಟರ್​

ಸಸ್ಪೆನ್ಸ್​ ಥ್ರಿಲ್ಲರ್​ ಮನರಂಜನೆ ಬಯಸುವ ಪ್ರೇಕ್ಷಕರು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾಗಾಗಿ ಕಾದಿದ್ದಾರೆ. ಧನ್ಯಾ ರಾಮ್​ಕುಮಾರ್​ ಮತ್ತು ಅನೂಪ್​ ರೇವಣ್ಣ ಅವರ ಕಾಂಬಿನೇಷನ್​ ಹೇಗೆ ಮೂಡಿಬಂದಿರಬಹುದು ಎಂಬುದನ್ನು ತಿಳಿಯುವ ಕಾತರ ಅವರ ಅಭಿಮಾನಿಗಳಲ್ಲಿ ಇದೆ. ಒಂದೇ ವಾರದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆ ಆಗುತ್ತಿರುವ ಸಂದರ್ಭ ಇದು. ಅದರ ನಡುವೆಯೂ ‘ಹೈಡ್​ ಆ್ಯಂಡ್​ ಸೀಕ್​’ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕು. ಈ ಸಿನಿಮಾದಲ್ಲಿ ಇರುವ ಥ್ರಿಲ್​ ಮತ್ತು ಸಸ್ಪೆನ್ಸ್​ ಅಂಶವೇ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಲಿದೆ ಎಂಬುದು ಚಿತ್ರತಂಡದ ಭರವಸೆ. ಹೈಡ್​ ಆ್ಯಂಡ್​ ಸೀಕ್​ ಎಂಬ ಶೀರ್ಷಿಕೆಯ ರೀತಿಯೇ ಪಾತ್ರಗಳ ಸುತ್ತ ಒಂದು ಬಗೆಯ ಕಣ್ಣಾ ಮುಚ್ಚಾಲೆ ಇರಲಿದೆ ಎಂಬುದಕ್ಕೆ ಈಗಾಗಲೇ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು