AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’, ‘ಸಿಂಗಂ ಅಗೇನ್’ ಜೊತೆ ಸ್ಪರ್ಧೆಗೆ ಇಳಿದ ‘ಭೈರತಿ ರಣಗಲ್’; ಆಗಸ್ಟ್ 15ಕ್ಕೆ ರಿಲೀಸ್

‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾನ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದರು. ಆದರೆ, ಈಗ ಶಿವರಾಜ್​ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದ್ದು ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ.

‘ಪುಷ್ಪ 2’, ‘ಸಿಂಗಂ ಅಗೇನ್’ ಜೊತೆ ಸ್ಪರ್ಧೆಗೆ ಇಳಿದ ‘ಭೈರತಿ ರಣಗಲ್’; ಆಗಸ್ಟ್ 15ಕ್ಕೆ ರಿಲೀಸ್
ಶಿವರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 10, 2024 | 8:38 AM

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಭೈರತಿ ರಣಗಲ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಎನ್ನು ಕಾರಣಕ್ಕೆ ಫ್ಯಾನ್ಸ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಿವರಾಜ್​ಕುಮಾರ್, ರುಕ್ಮಿಣಿ ವಸಂತ್ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈಗ ಚಿತ್ರಕ್ಕೆ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆ ಆಗಲಿದೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಇದೆ. ಈ ಬಾರಿ ಈ ದಿನ ಶುಕ್ರವಾರವೇ ಬಂದಿದೆ. ಸಿನಿಮಾ ಮಂದಿಗೆ ಶುಕ್ರವಾರ ಎಂದರೆ ವಿಶೇಷ ದಿನ. ಸರ್ಕಾರಿ ರಜೆಯ ದಿನ ಕೂಡ ಅಂದು ಬಂದಿರುವುದರಿಂದ ಅನೇಕರು ಸಿನಿಮಾ ರಿಲೀಸ್ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ‘ಪುಷ್ಪ 2’ ಚಿತ್ರ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಈಗ ಇದರ ಜೊತೆ ಶಿವಣ್ಣ ನಟನೆಯ ‘ಭೈರತಿ ರಣಗಲ್’ ಕೂಡ ರಿಲೀಸ್ ಆಗಲಿದೆ.

‘ಮಫ್ತಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ಶ್ರೀಮುರಳಿ ನಟಿಸಿದ್ದರು. ‘ಭೈರತಿ ರಣಗಲ್’ ಪಾತ್ರ ಮಾಡಿದ್ದು ಶಿವರಾಜ್​ಕುಮಾರ್. ಖಡಕ್ ಆಗಿ ಪಾತ್ರ ಮೂಡಿ ಬಂದಿತ್ತು. ಹೊರ ಜಗತ್ತಿಗೆ ಹಣ ಮಾಡುವ, ಮೋಸ ಮಾಡುವ ವ್ಯಕ್ತಿಯಂತೆ ಕಾಣುವ ಈ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ನಂತರದಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. ಆ ವ್ಯಕ್ತಿಯ ಹಿಂದಿನ ಕಥೆ ‘ಭೈರತಿ ರಣಗಲ್’ ಚಿತ್ರದಲ್ಲಿ ಇರಲಿದೆ.

‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾನ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದರು. ಆದರೆ, ಈಗ ಶಿವರಾಜ್​ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದ್ದು ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಅಜಯ್​ ದೇವಗನ್​, ರಣವೀರ್ ಸಿಂಗ್ ಮೊದಲಾದವರ ನಟನೆಯ, ರೋಹಿತ್​ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್​’ ಸಿನಿಮಾ ಈಗಾಗಲೇ ರೇಸ್​ನಲ್ಲಿದೆ. ಈ ಚಿತ್ರ ಕೂಡ ಕೂಡ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಇನ್ನು ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾ ಕೂಡ ಆಗಸ್ಟ್​ 15ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ವೆಂಕಟ್​ ಪ್ರಭು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸೈನ್ಸ್​ ಫಿಕ್ಷನ್​ ಕಥೆ ಇರಲಿದೆ.

ಇದನ್ನೂ ಓದಿ: ರಜನಿಕಾಂತ್-ರಾಣಾ ದಗ್ಗುಬಾಟಿ ಒಟ್ಟಿಗೆ ನೋಡಲು ಹೋದ ಫ್ಯಾನ್ಸ್​ಗೆ ನಿರಾಸೆ

ರಜನಿಕಾಂತ್​ ಕೂಡ ಆಗಸ್ಟ್​ 15ರ ರೇಸ್​ನಲ್ಲಿ ಸೇರಿದರೂ ಅಚ್ಚರಿ ಏನಿಲ್ಲ. ‘ವೆಟ್ಟೈಯನ್​’ ಸಿನಿಮಾದಲ್ಲಿ ರಜನಿಕಾಂತ್​ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಆಗಸ್ಟ್​ ತಿಂಗಳಲ್ಲೇ ಬಿಡುಗಡೆ ಆಗಲಿದೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಇದರಿಂದ ರೇಸ್ ಮತ್ತಷ್ಟು ಟಫ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ